
ಕಾಲಿವುಡ್ ಮಾಸ್ ಹೀರೋ, ಸಾಲ್ಟ್ ಆ್ಯಂಡ್ ಪೆಪ್ಪರ್ ನಟ ತಲಾ ಅಜಿತ್ ಕೆಲವು ದಿನಗಳಿಂದ ಹೈದರಾಬಾದ್‌ನ ರಾಮೋಜಿ ಫಿಲ್ಮಂ ಸಿಟಿಯಲ್ಲಿ 'ವಲಮೈ' ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ. ಈ ವೇಳೆ ನಡೆದ ಘಟನೆಯೊಂದನ್ನು ಚಿತ್ರತಂಡದ ಇನ್ನಿತರೆ ಕಲಾವಿದರು ಹಂಚಿಕೊಂಡಿದ್ದಾರೆ.
ತಲಾ ಅಜಿತ್ ಮಗಳಾಗಿ ನಟಿಸಿದ ಹುಡುಗಿಯ ಆಸೆ ಕೇಳಿದ್ರೆ ದಂಗಾಗ್ತೀರ!
ಅಜಿತ್‌ಗೆಂದೇ ಚಿತ್ರರಂಗದಲ್ಲಿ ಅನೇಕರು ಚಿತ್ರಕತೆ ರೆಡಿ ಮಾಡುತ್ತಾರೆ. ವರ್ಷಕ್ಕೊಂದು ಸಿನಿಮಾ ಮಾಡಿದರೂ ಅರ್ಥಪೂರ್ಣವಾಗಿರಬೇಕು ಎಂಬುದು ಅಜಿತ್ ಪಾಲಿಸಿ. ಭಿನ್ನವಾದ ಕಥೆ ಹೊಂದಿರುವ 'ವಲಮೈ' ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಅಜಿತ್, ತಮ್ಮ ಸಿನಿಮಾ ಸೆಟ್ ಬಳಿಯೇ ರಸ್ತೆಯಲ್ಲಿಇಡ್ಲಿ ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ದನ ಸಹಾಯ ಮಾಡಿದ್ದಾರೆ.
ಹೌದು! ಸೆಟ್‌ನಲ್ಲಿ ಭಾಗಿಯಾಗುತ್ತಿದ್ದ ಬಹುತೇಕರು ಈ ವ್ಯಕ್ತಿಯ ಬಳಿ ಇಡ್ಲಿ ಸೇವಿಸುತ್ತಿದ್ದರು. ಸೆಟ್‌ನಲ್ಲಿದ್ದ ತಂತ್ರಜ್ಞರು ಇಡ್ಲಿ ಬಗ್ಗೆ ಮಾತನಾಡುವುದನ್ನು ಕೇಳಿ ಅಜಿತ್ ಕೂಡ ಅಲ್ಲಿಗೆ ಭೇಟಿ ನೀಡಿ ರುಚಿಯಾದ ಇಡ್ಲಿ ಸವಿದಿದ್ದಾರೆ. ಇಡ್ಲಿ ರುಚಿ ಸವಿದ ಅಜಿತ್ ಆ ವ್ಯಕ್ತಿ ಒಂದು ಲಕ್ಷ ರೂ. ಹಣ ನೀಡಿದ್ದಾರೆ.
ತಲಾ ಅಜಿತ್ ಮನೆಯಲ್ಲಿ ಬಾಂಬ್; ಬೆದರಿಕೆ ಕರೆ ಮಾಡಿದ್ಯಾರು?
ಅಜಿತ್ ಸಹಾಯ:
ಸುಮ್ಮನೆ ಇಡ್ಲಿ ಸವಿಯಲು ಹೋಗಿ ಅಜಿತ್ ಒಂದು ಲಕ್ಷ ರೂ. ಕೊಟ್ಟರೇ ಎಂದು ಪ್ರಶ್ನೆ ಮಾಡುತ್ತಿದ್ದ ಅಭಿಮಾನಿಗಳಿಗೆ ಉತ್ತರ ಇಲ್ಲಿದೆ. ಇಡ್ಲಿ ಮಾರುತ್ತಿದ್ದ ವ್ಯಕ್ತಿಯ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲಿ ಎಂದು ಕೊಟ್ಟಿದ್ದು ಎಂದು ನಟ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಜಿತ್ ಮಾಡಿದ ಕೆಲಸವನ್ನು ಅಭಿಮಾನಿಗಳು ಮೆಚ್ಚಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.