
ಮೆಗಾ ಸ್ಟಾರ್ ಚಿರಂಜೀವಿ ಕುಟುಂಬ ಈ ವರ್ಷ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದೆ. ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಇತ್ತೀಚಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಾರಣ ಅಳಿಯ ಚೈತನ್ಯಾ ಕುಟುಂಬ ಕೂಡ ಸುಗ್ಗಿ ಹಬ್ಬದಲ್ಲಿ ಭಾಗಿಯಾಗಿತ್ತು. ಇವೆಲ್ಲಾ ಓಕೆ, ಆದರೆ ಚಿರಂಜೀವಿ ಅಳಿಯ ಹಬ್ಬದ ದಿನ ಧರಿಸಿದ್ದ ಬಟ್ಟೆ ಹೇಗಿತ್ತು ನೋಡಿದ್ದೀರಾ?
ಕಾಂಡೋಮ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರಾ ಚಿರಂಜೀವಿ ಎರಡನೇ ಅಳಿಯ?
ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಜೊತೆ 'ಸೂಪರ್ ಮಚಿ' ಚಿತ್ರದಲ್ಲಿ ಹಾಗೂ 'ಕಿನ್ನೇರಸಾನಿ' ಚಿತ್ರದಲ್ಲಿ ಬ್ಯುಸಿಯಾಗಿರುವ ಕಲ್ಯಾಣ್ ದೇವ್ ಹಬ್ಬದ ದಿನ ಕುರ್ತಾ ಪೈಜಾಮ ಬದಲು ಕುರ್ತಾ ನಿಕ್ಕರ್ ಧರಿಸದ್ದಾರೆ. ಅಲ್ಲದೇ ಇದಕ್ಕೆ ಕ್ಯಾನವಸ್ ವೈಟ್ ಶೋಸ್ ಅನ್ನು ಮ್ಯಾಚ್ ಮಾಡಿಕೊಂಡಿದ್ದಾರೆ. ಹಬ್ಬದ ದಿನ ಸ್ಟಾರ್ ಅಳಿಯನ ಅವತಾರ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
ನೆಟ್ಟಿಗರ ಕಾಮೆಂಟ್:
ಕಲ್ಯಾಣ್ ಸುಖಾ ಸುಮ್ಮನೆ ಯಾವುದೋ ಬಟ್ಟೆಗೆ ಯಾವುದನ್ನೋ ಮ್ಯಾಚ್ ಮಾಡಿಕೊಂಡಿಲ್ಲ. ಇದೊಂದು ಡಿಸೈನರ್ ವೇರ್ ಉಡುಪು ಎನ್ನಲಾಗಿದೆ. 'ಸರ್ ನೀವು ಪ್ಯಾಂಟ್ ಹಾಕಿಕೊಳ್ಳುವುದನ್ನೇ ಮರೆತಿದ್ದೀರಾ?' ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದರೆ, ಮತ್ತೊಬ್ಬ 'ಮನೆಯಲ್ಲಿ ಚೇರ್ ಇಲ್ವಾ ಸರ್, ಕಮೋಡ್ ಮೇಲಿ ಯಾಕೆ?' ಎಂದು ಪ್ರಶ್ನೆ ಮಾಡಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ- ಕಲ್ಯಾಣ್ ದೇವ್ ಫ್ಯಾಮಿಲಿ ಫೋಟೋ!
ಒಟ್ಟಿನಲ್ಲಿ ಕಲ್ಯಾಣ್ ದೇವ್ ಫ್ಯಾಷನ್ ಸೆನ್ಸ್ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.