ಸೈಂಧವ ಸಿನಿಮಾದಲ್ಲಿ ನಟ ವೆಂಕಟೇಶ್ ದಗ್ಗುಬಾಟಿ ಜತೆ ಮುಖೇಶ್ ರಿಷಿ, ಜಿಶು ಸೆನ್‌ಗುಪ್ತಾ, ಅರ್ಯಾ ಮುಂತಾದವರು ನಟಿಸಿದ್ದಾರೆ. ಸೈಂದವ ಚಿತ್ರವು ಈ ವರ್ಷ ರಿಲೀಸ್ ಆಗಲಿದ್ದು, ಸದ್ಯ ಟ್ರೈಲರ್ ಬಿಡುಗಡೆಗೊಳಿಸಿ ಚಿತ್ರೆದ ಪ್ರಮೋಶನ್ ಹಂತಕ್ಕೆ ಕಾಲಿಟ್ಟಿದ್ದಾರೆ.
ತೆಲುಗು ಸ್ಟಾರ್ ನಟ, ವಿಕ್ಟರಿ ವೆಂಕಟೇಶ್ ಖ್ಯಾತಿಯ ನಟ ವೆಂಕಟೇಶ್ ದಗ್ಗುಬಾಟಿ 'ಸೈಂಧವ' ಟ್ರೇಲರ್ ಮೂಲಕ ಮತ್ತೆ ಸಾಹಸ ಪ್ರಧಾನ ಸಿನಿಮಾಕ್ಕೆ ಮರಳಿದ್ದಾರೆ. ಸೈಂಧವ ಟ್ರೈಲರ್ (Saindhav trailer)ನಲ್ಲಿ ತನ್ನ ಪುಟ್ಟ ಮಗಳನ್ನು ಕಾಪಾಡಿಕೊಳ್ಳುವ ತಂದೆಯಾಗಿ ನಟಿಸಿರುವ ನಟ ವೆಂಕಟೇಶ್, ತಮ್ಮ ಅಮೋಘ ನಟನೆಯಿಂದ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಇತ್ತೀಚೆಗೆ ಯಾವುದೇ ಆಕ್ಷನ್ ಬೇಸ್ಡ್ ಸಿನಿಮಾಗಳಲ್ಲಿ ನಟಿಸದೇ ವಿಭಿನ್ನ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ನಟ ವೆಂಕಟೇಶ್, ಈ ಚಿತ್ರದ ಮೂಲಕ ಮತ್ತೆ ತಮ್ಮ ಒರಿಜಿನಲ್ ಪಾತ್ರಕ್ಕೆ ಮರಳಿದ್ದಾರೆ ಎನ್ನಲಾಗುತ್ತಿದೆ.
ನವಾಜುದ್ದೀನ್ ಸಿದ್ಧಿಕಿ ಈ ಸೈಂಧವ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದು, ಆತ ವೆಂಕಟೇಶ್ ಮಗಳನ್ನು ಕಿಡ್ನಾಪ್ ಮಾಡಿ ಹಿಂಸೆ ನೀಡಲು ತೊಡಗುವನು. ಆದರೆ, ಅವನ ಕಪಿಮುಷ್ಠಿಯಿಂದ ತಂದೆ ತನ್ನ ಮಗಳನ್ನು ಹೇಗೆ ಬಿಡಿಸಿಕೊಂಡು ಪ್ರೀತಿಯಿಂದ ಸಲಹುತ್ತಾನೆ ಎಂಬುದು ಟ್ರೈಲರ್‌ನಲ್ಲಿ ಮನೋಜ್ಞವಾಗಿ ಬಿಂಬಿತವಾಗಿದೆ. ಈ ಟ್ರೈಲರ್ ನೋಡಿದ ಪ್ರೇಕ್ಷಕರಲ್ಲಿ ಒಬ್ಬರು 'ಮತ್ತೆ ನಿಜವಾದ ವೆಂಕಟೇಶ್ ಅವರು ವಾಪಸ್ಸಾಗಿದ್ದಾರೆ' ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು 'ವೆಂಕಟೇಶ್ ದಗ್ಗುಬಾಟಿ ಅವರು ಭಾರತದ ಲೆಜೆಂಡ್ ನಟರಲ್ಲಿ ಒಬ್ಬರು' ಎಂದು ಕಾಮೆಂಟ್ ಮಾಡಿದ್ದಾರೆ.
ಸೈಂಧವ ಸಿನಿಮಾದಲ್ಲಿ ನಟ ವೆಂಕಟೇಶ್ ದಗ್ಗುಬಾಟಿ ಜತೆ ಮುಖೇಶ್ ರಿಷಿ, ಜಿಶು ಸೆನ್‌ಗುಪ್ತಾ, ಅರ್ಯಾ ಮುಂತಾದವರು ನಟಿಸಿದ್ದಾರೆ. ಸೈಂದವ ಚಿತ್ರವು ಈ ವರ್ಷ ರಿಲೀಸ್ ಆಗಲಿದ್ದು, ಸದ್ಯ ಟ್ರೈಲರ್ ಬಿಡುಗಡೆಗೊಳಿಸಿ ಚಿತ್ರೆದ ಪ್ರಮೋಶನ್ ಹಂತಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗೆ ಚಿತ್ರರಂಗದಿಂದ ಹೆಚ್ಚುಕಡಿಮೆ ಕಳೆದೇ ಹೋಗಿದ್ದ ನಟ ವೆಂಕಟೇಶ್ ಸೈಂಧವ ಚಿತ್ರದ ಮೂಲಕ ಮತ್ತೆ ಟ್ರೆಂಡಿಂಗ್ ಸೃಷ್ಟಿಸಲಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ, ಸೈಂಧವ ಟ್ರೇಲರ್ ನೋಡಿದ ಪ್ರತಿಯಬ್ಬರೂ ಮೂಗಿನ ಮೇಲೆ ಬೆರಳಿಡುತ್ತಿದ್ದು, ಈ ಚಿತ್ರವು ವೆಂಕಟೇಶ್ ಅವರಿಗೆ ಮರುಹುಟ್ಟು ನೀಡಲಿದೆ ಎಂದೇ ಹೇಳುತ್ತಿದ್ದಾರೆ.
ಅಂದಹಾಗೆ, ತೆಲುಗು ಸ್ಟಾರ್ ನಟ ವೆಂಕಟೇಶ್ ಹಲವು ದಶಕಗಳ ಹಿಂದೆ ದೊಡ್ಡ ಸ್ಟಾರ್ ನಟ. ಕನ್ನಡ ಮೂಲದ ತೆಲುಗು ಸ್ಟಾರ್ ನಾಯಕಿ ನಟಿ ಸೌಂದರ್ಯ ಹಾಗೂ ವೆಂಕಟೇಶ್ ಜೋಡಿ ಎಂದರೆ ತೆಲುಗು ಪ್ರೇಕ್ಷಕರ ಅಚ್ಚುಮೆಚ್ಚಿನ ಜೋಡಿಯಾಗಿತ್ತು. ವೆಂಕಟೇಶ್ ತಮ್ಮ ಮೊದಲ ಇನ್ನಿಂಗ್ಸ್‌ಅನ್ನು ತುಂಬಾ ಯಶಸ್ವಿಯಾಗಿ ಮುಗಿಸಿದ್ದರು. ಈಗ ಮತ್ತೆ ಕಮ್‌ಬ್ಯಾಕ್ ಮಾಡಿದ್ದು ಮತ್ತೆ ಮಿಂಚಲು ರೆಡಿಯಾಗಿದ್ದಾರೆ.