ಅವಕಾಶಗಳನ್ನು ಹುಡುಕಿಕೊಂಡು ಹೋದಾಗ ಎದುರಿಸಿದ ಕೆಟ್ಟ ಘಟನೆಯನ್ನು ಬಿಚ್ಚಿಟ್ಟ ಆಮಿನಿ.
ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿರುವ ನಟಿ ಆಮಿನಿ ಈ ಹಿಂದೆ ಅವಕಾಶಗಳನ್ನು ಹುಡುಕಿಕೊಂಡು ಹೋದಾಗ ಹೊಸ ಚಿತ್ರತಂಡದವರು ಹೇಗೆ ವರ್ತಿಸುತ್ತಾರೆ ಎಂದು ರಿವೀಲ್ ಮಾಡಿದ್ದಾರೆ.
'ಸಾವಿತ್ರಿ ಕಾಲದಿಂದಲೂ ಚಿತ್ರರಂಗದಲ್ಲಿ ಹೆಣ್ಣುಮಕ್ಕಳಿಗೆ ಇಂತಹ ಸಮಸ್ಯೆಗಳು ಇದೆ. ಆದರೆ ಯಾವುದು ಸರಿ, ಯಾವುದು ತಪ್ಪು ಎಂದು ನಾವು ಆಯ್ಕೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬರು ಕಷ್ಟ ಪಟ್ಟು ಇಲ್ಲಿಗೆ ಬರುತ್ತಾರೆ. ಯಾರಿಗೂ ಅಷ್ಟು ಸುಲಭವಾಗಿ ಅವಕಾಶ ಮತ್ತು ಯಶಸ್ಸು ಸಿಗುವುದಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲಿ ಒಳ್ಳೆಯದು ಕಟ್ಟದ್ದು ಇದ್ದೇ ಇರುತ್ತದೆ. ಅದನ್ನು ಸರಿಯಾಗಿ ನೋಡಿ ಆಯ್ಕೆ ಮಾಡಿಕೊಳ್ಳಬೇಕು ನಾವು. ತಮಿಳು ಚಿತ್ರರಂಗದಲ್ಲಿ ನನಗೂ ಕೆಟ್ಟ ಅನುಭವ ಆಗಿದೆ. ದೊಡ್ಡ ಸಿನಿಮಾ ಸಂಸ್ಥೆಗಳಲ್ಲಿ ಅಲ್ಲ ಸಿನಿಮಾ ಮಾಡುತ್ತೀವಿ ಎಂದು ಬರುವ ಹೊಸಬರಿಂದ. ನಮಗೆ ಅವರು ಹೊಸಬರು ಕೆಟ್ಟವರು ಅಥವಾ ಒಳ್ಳೆಯವರು ಎಂದು ಹೇಗೆ ಗೊತ್ತಾಗುತ್ತದೆ? ಅವಕಾಶಗಳನ್ನು ಹುಡುಕುತ್ತಿರುವಾಗ ಅವಕಾಶ ಸಿಕ್ಕಾಗ ಒಪ್ಪಿಕೊಂಡು ಮಾಡುತ್ತೆವೆ' ಎಂದು ಆಮಿನಿ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
undefined
ಬೆಡ್‌ರೂಮಿಗೆ ಕರೆದು ತಬ್ಬಿಕೋ ಎಂದು ನಿರ್ದೇಶಕ, ಕ್ಯಾಮೆರಾ ಎಲ್ಲೂ ಇಲ್ಲ: ಉರ್ಫಿ ಜಾವೇದ್ ಬಿಚ್ಚಿಟ ಕರಾಳ ಘಟನೆ
'ಸಿನಿಮಾದಲ್ಲಿ ಅವಕಾಶ ಇದೆ ಎಂದು ಮ್ಯಾನೇಜರ್ ಕರೆ ಮಾಡಿದಾಗ ನಾವು ಹೋಗುತ್ತೇವೆ. ಟೂ ಪೀಸ್ ಹಾಕಬೇಕು. ತೊಡೆ ಮೇಲೆ ಸ್ಟ್ರೆಚ್ ಮಾರ್ಕ್‌ಗಳು ಇರುತ್ತದೆ ಅದು ನಿಮಗೂ ಇದ್ಯಾ...ತೋರಿಸಿ ಎಂದು ಕೇಳುತ್ತಾರೆ. ನನಗೆ ಯಾಕೆ ಇರುತ್ತದೆ..ನನಗೆ ಇಲ್ಲ ಅಂದ್ರೆ ಒಮ್ಮೆ ತೋರಿಸಿ ಎನ್ನುತ್ತಾರೆ. ತಾಯಿ ಅಥವಾ ಸಹೋದರನ ಜೊತೆ ಸಿನಿಮಾ ಆಡಿಷನ್ ಅಥವಾ ಅವಕಾಶ ಕೇಳಲು ಹೋಗುತ್ತೀವಿ ಅವರ ಮುಂದೆ ಈ ರೀತಿ ಮಾತನಾಡಿದರೆ ನಾವು ಹೇಗೆ ವರ್ತಿಸಬೇಕು? ಕೆಟ್ಟ ಉದ್ದೇಶ ಇಟ್ಟುಕೊಂಡು ಸಿನಿಮಾ ಮಾಡುವ ನೆಪದಲ್ಲಿ ಆಫೀಸ್ ತೆಗೆಯುತ್ತಾರೆ' ಎಂದು ಆಮಿನಿ ಹೇಳಿದ್ದಾರೆ.
ಅವಕಾಶ ಬೇಕು ಅಂದ್ರೆ ನಟ, ನಿರ್ದೇಶಕ ಮಾತ್ರವಲ್ಲ 'ಆ' ವ್ಯಕ್ತಿ ಜೊತೆಗೂ ಮಲಗಬೇಕು; ಕಿರುತೆರೆ ನಟಿ ಹೇಳಿಕೆ ವೈರಲ್
'ಆ ಸಮಯದಲ್ಲಿ ಅವರ ಉದ್ದೇಶ ಏನು ಎಂಬುದು ಅರ್ಥವಾಗಿ ಬಿಡುತ್ತದೆ. ಒಳ್ಳೆ ಸಂಸ್ಥೆಗಳಲ್ಲಿ ಈ ರೀತಿ ಪ್ರಶ್ನೆ ಮಾಡಲ್ಲ ಆಡಿಷನ್ ಮಾಡಲ್ಲ. ದೊಡ್ಡ ಸಂಸ್ಥೆಗಳು ಸದಾ ನಟನೆ ಮೇಲೆ ಗಮನ ಕೊಡುತ್ತಾರೆ....ಸನ್ನಿವೇಶ ಕೊಟ್ಟು ನಟಿಸಿ ತೋರಿಸಬೇಕು. ಅದು ಬಿಟ್ಟು ಸ್ಟ್ರೆಚ್ ಮಾರ್ಕ್ ತೋರಿಸು, ಕಪ್ಪು ಮಚ್ಚೆ ಇದ್ಯಾ ಅಂತಾರೆ. ಮೊನ್ನೆ ಬಬ್ಬ ನಟಿಯನ್ನು ಹೀಗೆ ಆಯ್ಕೆ ಮಾಡಿಕೊಂಡು ಬಟ್ಟೆ ಬಿಚ್ಚಿ ತೋರ್ಸಿ ಅಂದಿದ್ದಾರೆ.
'ನನ್ನನ್ನು ಹೀಗೆ ಕೇಳಿದಾಗ ನನಗೆ ಸ್ವಿಮ್ಮಿಂಗ್ ಬರಲ್ಲ ನನಗೆ ಈ ರೀತಿ ಪಾತ್ರಗಳು ಬೇಡ ಎಂದು ಎದ್ದು ಬಂದಿರುವೆ. ಸರಿ ತೋರಿಸುತ್ತೀನಿ ಅನ್ನೋದು ಅವರಿಗೆ ಬಿಟ್ಟ ವಿಚಾರ..ಚಿತ್ರಕಥೆ ಮತ್ತು ಪಾತ್ರಕ್ಕೆ ಅಗತ್ಯವಿದ್ದರೆ ನಾನು ಟೂ ಪೀಸ್ ಹಾಕುತ್ತೀನಿ...ಅದು ಬಿಟ್ಟು ಆ ಮಾರ್ಕ್ ತೋರಿಸು ಈ ಮಚ್ಚೆ ತೋರಿಸು ಅಂದಾಗ ಎದ್ದು ಬಂದಿರುವ ಸಂದರ್ಭವೂ ಇದೆ ಎಂದಿದ್ದಾರೆ ಅಮಿನಿ.