rashmika mandanna : ರಕ್ಷಾಬಂಧನದ ದಿನ ಪುಟ್ಟ ತಂಗಿ ಫೋಟೋ ಹಾಕಿ ರಕ್ಷಣೆ ಪ್ರಮಾಣ ಮಾಡಿದ ರಶ್ಮಿಕಾ‌

By Roopa Hegde  |  First Published Aug 20, 2024, 11:47 AM IST

ರಶ್ಮಿಕಾ ಮಂದಣ್ಣ ರಕ್ಷಾ ಬಂಧನದಂದು ತಮ್ಮ ತಂಗಿ ಶಿಮೋನ್ ಮಂದಣ್ಣ ಅವರೊಂದಿಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳ ಜೊತೆಗೆ ಅವರು ಬರೆದ ಭಾವುಕ ಸಂದೇಶವು ಅಭಿಮಾನಿಗಳ ಹೃದಯವನ್ನು ಮುಟ್ಟಿದೆ.


ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (National crush Rashmika Mandanna) ರಕ್ಷಾ ಬಂಧನದ ಸುಸಂದರ್ಭದಲ್ಲಿ ಪುಟ್ಟ ತಂಗಿಯ ಫೋಟೋ ಹಾಕಿ ಎಲ್ಲರ ಮನಸ್ಸು ಗೆದ್ದಿದ್ದಾರೆ. ಆಗಸ್ಟ್ 19ರಂದು ದೇಶದೆಲ್ಲೆಡೆ ರಕ್ಷಾ ಬಂಧನ (Raksha Bandhan) ದ ಸಂಭ್ರಮ ಮನೆ ಮಾಡಿತ್ತು. ಸಹೋದರ – ಸಹೋದರಿಯರು ಮಾತ್ರವಲ್ಲದೆ ಸಹೋದರಿ – ಸಹೋದರಿಯರ ಫೋಟೋಗಳು ಎಲ್ಲೆಡೆ ಹರಿದಾಡ್ತಿದ್ದವು. ಅನೇಕ ಬಾಲಿವುಡ್ ಸ್ಟಾರ್ಸ್ (Bollywood Stars) ತಮ್ಮ ಅಕ್ಕ – ತಂಗಿಯರ ಜೊತೆ ಫೋಟೋ ಪೋಸ್ಟ್ ಮಾಡಿದ್ದರು. ನಟಿ ರಶ್ಮಿಕಾ ಮಂದಣ್ಣ ಕೂಡ ತಮ್ಮ ತಂಗಿಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದ್ರ ಜೊತೆ ಭಾವನಾತ್ಮಕ ಶೀರ್ಷಿಕೆ ಹಾಕಿದ್ದಾರೆ.

ರಶ್ಮಿಕಾ ಮಂದಣ್ಣ, ಇನ್ಸ್ಟಾಗ್ರಾಮ್ (Instagram) ನಲ್ಲಿ ತಂಗಿಯ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪುಟ್ಟ ತಂಗಿ ಪುಟಾಣಿಯಾಗಿದ್ದ ಫೋಟೋದಿಂದ ಹಿಡಿದು ಈಗಿನ ಲೇಟೆಸ್ಟ್ ಫೋಟೋವನ್ನು ರಶ್ಮಿಕಾ ಪೋಸ್ಟ್ ಮಾಡಿದ್ದಾರೆ. ಅದ್ರಲ್ಲಿ ರಶ್ಮಿಕಾ ತಂಗಿ ಶಿಮೋನ್ ಮಂದಣ್ಣ, ನಾಯಿ ಜೊತೆ ಮಲಗಿರುವ ಫೋಟೋ ಕೂಡ ಇದೆ.

Tap to resize

Latest Videos

undefined

chandan shetty : ಚಂದನ್ ಪರಮಾನ್ನ ವೀಡಿಯೋ ಶೇರ್ ಮಾಡಿದ ಕಿರಿಕ್ ಕೀರ್ತಿ, ಹಾರ್ದಿಕ್ ಪಾಂಡ್ಯಾನೂ ಸೇರಿಸಿಕೊಳ್ಳಿ ಎಂದ

ರಶ್ಮಿಕಾ ಮಂದಣ್ಣ ಪೋಸ್ಟ್ ನಲ್ಲಿ ಏನಿದೆ? : ರಶ್ಮಿಕಾ ಮಂದಣ್ಣ ಪೋಸ್ಟ್ ನಲ್ಲಿ ತಂಗಿಗೆ ಸುರಕ್ಷತೆ ನೀಡುವ ಭರವಸೆ ನೀಡಿದ್ದಾರೆ. ಹೌದು, ನನ್ನ ಪ್ರೀತಿಯ ತಂಗಿ, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ನೀನು ಸುಂದರ ಮಹಿಳೆಯಾಗಿ ಬೆಳೆಯುತ್ತೀಯ ಎಂದು ನಾನು ಭಾವಿಸುತ್ತೇನೆ. ಎಲ್ಲರೂ ಗೌರವಿಸುವ ಮತ್ತು ಸನ್ಮಾನಿಸುವ ಮಹಿಳೆಯಾಗಿ ಬೆಳೆಯುತ್ತೀಯ ಎಂದು ನಾನು  ನಂಬುತ್ತೇನೆ. ಇದಕ್ಕೆ ನೀನು ಹೆಚ್ಚು ಹೋರಾಡಬೇಕಾಗಿಲ್ಲ. ನನ್ನ ಹತ್ತಿರ ಎಷ್ಟು ಸಾಧ್ಯವೋ ಅಷ್ಟು ನಿನ್ನನ್ನು ರಕ್ಷಿಸಲು ಪ್ರಯತ್ನಿಸುತ್ತೇನೆಂದು ಪ್ರಮಾಣ ಮಾಡುತ್ತೇನೆ. ಆದ್ರೆ ಕೆಲವೊಂದು ವಿಷ್ಯವನ್ನು ನೀನೇ ಎದುರಿಸಬೇಕಾಗುತ್ತದೆ. ಈ ಜಗತ್ತಿನಲ್ಲಿ ಸುರಕ್ಷಿತವಾಗಿ ಮತ್ತು ಸಂತೋಷವಾಗಿರುವೇ ಎಂದು ನಾನು ಭಾವಿಸುತ್ತೇನೆ. ನಿಮ್ಮಂತಹ ಎಲ್ಲಾ ಚಿಕ್ಕ ಹುಡುಗಿಯರಿಗಾಗಿ ಜಗತ್ತು ಸಂತೋಷದ, ಸುರಕ್ಷಿತ ಸ್ಥಳವಾಗಿದೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ, ನನ್ನ ಗೊಂಬೆ ಎಂದು ರಶ್ಮಿಕಾ ಶೀರ್ಷಿಕೆ ಹಾಕಿದ್ದಾರೆ. ರಶ್ಮಿಕಾ ಮಂದಣ್ಣ ಈ ಪೋಸ್ಟ್ ಅಭಿಮಾನಿಗಳನ್ನು ಭಾವುಕಗೊಳಿಸಿದೆ. ಬಹುತೇಕರು ಕ್ಯೂಟ್ ಅಂತ ಕಮೆಂಟ್ ಹಾಕಿದ್ರೆ ಮತ್ತೆ ಕೆಲವರು ರಕ್ಷಾ ಬಂಧನದ ಶುಭಾಶಯ ಹೇಳಿದ್ದಾರೆ. 

ರಶ್ಮಿಕಾ ಮಂದಣ್ಣ ತಂಗಿ ಶಿಮೋನ್ ಮಂದಣ್ಣ, ರಶ್ಮಿಕಾರಿಗಿಂತ 17 ವರ್ಷ ಚಿಕ್ಕವರು. ಶಿವೋನ್ ಮಂದಣ್ಣಗೆ ಈಗ 9 ವರ್ಷ. ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇರುವ ರಶ್ಮಿಕಾ ಮಂದಣ್ಣ, ತಂಗಿಯನ್ನು ಮಿಸ್ ಮಾಡಿಕೊಳ್ತಿದ್ದಾರೆ. ಹಾಗಾಗಿಯೇ ಆಗಾಗ ತಂಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಹಿಂದಿನ ಸುಂದರ ಕ್ಷಣಗಳನ್ನು ನೆನಪಿಸಿಕೊಳ್ತಾರೆ. 

ಕೆಲ ದಿನಗಳ ಹಿಂದೆ ತಂಗಿ ಶಿಮೋನ್ ಫೋಟೋ ಹಂಚಿಕೊಂಡಿದ್ದ ರಶ್ಮಿಕಾ, ಶಿಮೋನ್ ಗೆ ನಾನು ಎರಡನೇ ತಾಯಿ ಇದ್ದಂತೆ. ಆಕೆ ನನ್ನ ಮಗಳು ಎಂದು ಶೀರ್ಷಿಕೆ ಹಾಕಿದ್ದರು. ರಶ್ಮಿಕಾ ಹಾಗೂ ಶಿಮೋನ್ ಮಧ್ಯೆ ವಯಸ್ಸಿನ ಅಂತರ ಇರುವ ಕಾರಣ, ತಂಗಿಗೆ ಆಹಾರ ನೀಡೋದ್ರಿಂದ ಹಿಡಿದು ಎಲ್ಲ ಕೆಲಸವನ್ನು ರಶ್ಮಿಕಾ ಮಾಡ್ತಿದ್ದರು. ಆದ್ರೀಗ ತಂಗಿ ಹಾಗೂ ರಶ್ಮಿಕಾ ದೂರವಿದ್ದಾರೆ. ಹಾಗಾಗಿ ರಶ್ಮಿಕಾ ತಂಗಿಯನ್ನು ಮಿಸ್ ಮಾಡಿಕೊಳ್ತಿದ್ದಾರೆ.

bigg boss : ಬಿಗ್ ಬಾಸ್ ಕಿಚ್ಚನಿಲ್ಲದೆ ಮುಂದುವರಿಯುತ್ತಾರಾ? ಅಭಿಮಾನಿಗಳು ಹೇಳೋದೇನು ?

ಸ್ಯಾಂಡಲ್ವುಡ್ ನಿಂದ ಬಾಲಿವುಡ್ ವರೆಗೆ ತಮ್ಮ ಛಾಪು ಮೂಡಿಸಿರುವ ರಶ್ಮಿಕಾ ಮಂದಣ್ಣ ಬಳಿ ಸಾಕಷ್ಟು ಪ್ರಾಜೆಕ್ಸ್ ಇದೆ. ರಶ್ಮಿಕಾ ಮಂದಣ್ಣ ಅವರ ಮುಂಬರುವ ಚಿತ್ರ ಛಾವಾ ಸದ್ಯ ಸುದ್ದಿಯಲ್ಲಿದೆ. ಈ ಚಿತ್ರದ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚುವಂತೆ ಮಾಡಿದೆ. ರಶ್ಮಿಕಾ ಮಂದಣ್ಣ, ಪುಷ್ಪಾ 2, ಸಿಕಂದರ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 

click me!