ರಸ್ತೆ ಅಪಘಾತದಿಂದ ಕೋಮಾಗೆ ಜಾರಿದ ನಟ ಕಾತಿ ಮಹೇಶ್; ಎಡಗಣ್ಣು ಕಳೆದುಕೊಂಡ ನಾಯಕ!

Suvarna News   | Asianet News
Published : Jun 27, 2021, 11:25 AM ISTUpdated : Jun 27, 2021, 12:00 PM IST
ರಸ್ತೆ ಅಪಘಾತದಿಂದ ಕೋಮಾಗೆ ಜಾರಿದ ನಟ ಕಾತಿ ಮಹೇಶ್; ಎಡಗಣ್ಣು ಕಳೆದುಕೊಂಡ ನಾಯಕ!

ಸಾರಾಂಶ

ಕಣ್ಣು, ಮೂಗು ಮತ್ತು ಮುಖದ ಇತರೆ ಭಾಗಗಳಿಗೆ ದೊಡ್ಡ ಪೆಟ್ಟು, ಕೋಮಾಗೆ ಜಾರಿದ ನಟ ಕಾತಿ ಮಹೇಶ್. 

ತೆಲುಗು ಚಿತ್ರರಂಗದ ಹೆಸರಾಂತ ನಟ, ಜನಸೇನಾ ಪಾರ್ಟಿ ಸ್ಥಾಪಕ ಕಾತಿ ಮಹೇಶ್ ಭೀಕರ ರಸ್ತೆ ಅಪಘಾತದಿಂದ ಕೋಮಾಗೆ ಜಾರಿದ್ದಾರೆ. ಶನಿವಾರ (ಜು.26) ಬೆಳಗ್ಗೆ  ನೆಲ್ಲೂರು ಬಳಿ ಇನ್ನೋವಾ ಕಾರಿನಲ್ಲಿ ಹೋಗುತ್ತಿದ್ದಾಗ, ಪಕ್ಕದಲ್ಲಿ ನಿಂತಿದ್ದ ಕಂಟೇನರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾತಿ ತೀವ್ರವಾಗಿ ಗಾಯಗೊಂಡಿದ್ದಾರೆ. 

ಮ್ಯಾನ್‌ಹೋಲ್‌ ತಪ್ಪಿಸಲು ಹೋಗಿ ಬೈಕ್ ಸ್ಕಿಡ್ ಆಯ್ತು: ಸಂಚಾರಿ ವಿಜಯ್ ಸ್ನೇಹಿತನ ಸ್ಪಷ್ಟನೆ! 

ಕಾತಿ ಮಹೇಶ್ ಅವರ ತಲೆ, ಮೂಗಿಗೆ ತೀವ್ರ ಪೆಟ್ಟಾಗಿದೆ. ಅಲ್ಲದೇ ಎಡಗಣ್ಣು ದೃಷ್ಟಿ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ವೆಂಟಿಲೇಟರ್‌ ಸಹಾಯದಿಂದ ಅವರು ಉಸಿರಾಡುತ್ತಿದ್ದಾರೆ. ಅವರು ಸ್ಥಿತಿ ಮೂರು ದಿನಗಳ ಕಾಲ ಹೀಗೆ ಇರಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಹೇಶ್‌ ಮೂಗು ಜಜ್ಜಿರುವ ಕಾರಣ ಬಾಯಿಯಿಂದ ನಳಿಕೆಗಳ ಮೂಲಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿದೆ. ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಜೊತೆಗೆ ಮೆದುಳು ಶಸ್ತ್ರ ಚಿಕಿತ್ಸೆ ಸಹ ಮಾಡಬೇಕಿದೆ ಎಂದಿದ್ದಾರೆ ವೈದ್ಯರು. ಅಪಘಾತಕ್ಕೆ ಒಳಗಾದ ಇನ್ನೋವಾ ಕಾರಿನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

2011ರಲ್ಲಿ 'ಎಡಾರಿ ವರ್ಷಂ' ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಮಹೇಶ್ 2014ರಲ್ಲಿ 'ಮಿನುಗುರುಲು' ಚಿತ್ರಕ್ಕೆ ಕತೆ ಬರೆದರು. ಬಿಗ್ ಬಾಸ್‌ ಸ್ಪರ್ಧಿಯಾಗಿಯೂ ಕಾಣಿಸಿಕೊಂಡ ಮಹೇಶ್ ಕಿರುತೆರೆ ವೀಕ್ಷಕರ ಗಮನ ಸೆಳೆದರು. ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಜನರಿಗೆ ಮನೋರಂಜಿಸಬೇಕೆಂದು 'ಮಾರ್ನಿಂಗ್ ರಾಗಾ' ಹೆಸರಿನಲ್ಲಿ ಮನೋರಂಜನೆ ನೀಡುತ್ತಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?
ಅಪರಿಚಿತನಿಗೆ ಬಿಸ್ಕಿಟ್‌ ನೀಡಲು ಹೋಗಿ ಪೇಚಿಗೆ ಸಿಲುಕಿದ ಸಾರಾ ಅಲಿ ಖಾನ್