600 ಚಿತ್ರಗಳಲ್ಲಿ ನಟಿಸಿರುವ ನಟ ಚಲಪತಿ ರಾವ್ ಹೃಧಯಾಘಾತದಿಂದ ನಿಧನ

By Vaishnavi ChandrashekarFirst Published Dec 25, 2022, 11:55 AM IST
Highlights

ಅನಾರೋಗ್ಯದಿಂದ ಬಳಲುತ್ತಿದ್ದ ತೆಲುಗು ಹಿರಿಯ ನಟ ಚಲಪತಿ ರಾವ್‌ ಮೃತಪಟ್ಟಿದ್ದಾರೆ.  ತೆಲುಗು ಚಿತ್ರರಂಗಕ್ಕೆ ಮತ್ತೊಂದು ಶಾಕ್....

ತೆಲುಗು ಚಿತ್ರರಂಗದ ಹಿರಿಯ ನಟ ಚಲಪತಿ ರಾವ್‌ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಭಾನುವಾರ ಬೆಳಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 78 ವರ್ಷ ಚಲಪತಿ ರಾವ್‌ ಇಬ್ಬರು ಪುತ್ರಿಯರು, ಪುತ್ರ ಹಾಗೂ ಪತ್ನಿಯನ್ನು ಅಗಲಿದ್ದಾರೆ. ಚಲಪತಿ ರಾವ್‌ ಸಾವಿನ ವಿಚಾರ ಕೇಳಿ ಟಾಲಿವುಡ್‌ ಶಾಕ್ ಅಗಿದೆ...

ಸುಮಾರು 600ಕ್ಕೂ ಹೆಚ್ಚು ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿರುವ ಚಲಪತಿ ರಾವ್‌ ಅವರು ಹೆಚ್ಚಾಗಿ ಪೋಷಕ ನಟ, ಖಳ ನಟ ಹಾಗೂ ಹಾಸ್ಯ ನಟನ ಪಾತ್ರದಲ್ಲಿ ಮಿಂಚಿದ್ದಾರೆ. ಕೇವಲ ನಟನೆ ಮಾತ್ರವಲ್ಲ ನಿರ್ಮಾಣಕ್ಕೂ ಪ್ರವೇಶಿಸಿ ಕಲಿಯುಗ ಕೃಷ್ಣಡು, ಕಡಪ ರೆಡ್ಡಮ್ಮ, ಜಗನ್ನಾಟಕಂ, ಪೆಲ್ಲಂತೆ ನೂರೆಲ್ಲ ಪಂತ, ಅಧ್ಯಕ್ಷರಿಗಾಗಿ ಅಲ್ಲುಡು, ಅರ್ಧರಾತ್ರಿ ಹತ್ಯಾಲು ಹಾಗೂ ರಕ್ತ ಚಿಂದಿನ ರಾತ್ರಿ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. 

ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಬಲ್ಲಿಪರುದಲ್ಲಿ ಜನಿಸಿದ್ದು ಇವರನ್ನು ಚಿತ್ರರಂಗಕ್ಕೆ ಎನ್‌ಟಿಆರ್‌ ಕರೆತಂದರು. 1966ರಲ್ಲಿ 'ಗುಡಾಚಾರಿ 116' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಎನ್‌ಟಿಆರ್‌, ಕೃಷ್ಣ, ಅಕ್ಕಿನೇನಿ ನಾಗಾರ್ಜುನ, ಚಿರಂಜೀವಿ, ವೆಂಕಟೇಶ್‌ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರದ ಜೊತೆ ನಟಿಸಿದ್ದಾರೆ.

ಚಲಪತಿ ಅವರ ಹಿರಿಯ ಮಗಳು ಅಮೆರಿಕಾದಲ್ಲಿ ವಾಸಿಸುತ್ತಿದ್ದು ಬಂದ ನಂತರ ಅಂತ್ಯಕ್ರಿಯೆ ನಡೆಯಲಿದೆ ಎಂದಿದ್ದಾರೆ. ಚಲಪತಿ ಪಾರ್ಥಿವ ಶರೀರವನ್ನು ಗಣ್ಯರು ಮತ್ತು ಅಭಿಮಾನಿಗಳು ನೋಡಲು ಬಂಜಾರಾ ಹಿಲ್ಸ್‌ನಲ್ಲಿರುವ ರವಿಬಾಬು ಅವರ ಮನೆಯಲ್ಲಿ ಇರಿಸಲಾಗಿದ್ದು ಅಂತಿಮ ದರ್ಶನ ವ್ಯವಸ್ಥೆ ಅಲ್ಲೇ ಮಾಡಲಾಗಿದೆ. ವಿದೇಶದಿಂದ ಅನೇಕರು ಆಗಮಿಸಬೇಕಿದೆ ಎಂದು ಡಿಸೆಂಬರ್ 28ರಂದು ಅಂತ್ಯಕ್ರಿಯೆ ಮಾಡಬಹುದು ಎನ್ನಲಾಗಿದೆ.

ಗಂಡಸಿ ನಾಗರಾಜ್​ ನಿಧನ:

ಸ್ಯಾಂಡಲ್‌‍ವುಡ್‌ನಲ್ಲಿ ಹಲವು ವರ್ಷಗಳ ಕಾಲ ವಸ್ತ್ರಾಲಂಕಾರ ಕಲಾವಿದನಾಗಿ ಹಾಗೂ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದ ಗಂಡಸಿ ನಾಗರಾಜ್​  ನಿಧನರಾಗಿದ್ದಾರೆ. ಭಾನುವಾರ (ಡಿಸೆಂಬರ್ 11) ರಾತ್ರಿ 10.30ಕ್ಕೆ ಅವರು ಕೊನೆಯುಸಿರು ಎಳೆದರು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ನಟ ಗಂಡಸಿ ನಾಗರಾಜ್ ಚಿಕಿತ್ಸೆ ಫಲಿಸದೆ ನಿಧನರಾದರು. ಗಂಡಸಿ ನಾಗರಾಜ್​ ಅವರಿಗೆ 57 ವರ್ಷ ವಯಸ್ಸಾಗಿತ್ತು. ಕಳೆದ 5 ವರ್ಷಗಳಿಂದ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಫಲಕಾರಿ ಆಗದೇ ಪದ್ಮನಾಭ ನಗರದ ದೇವೇಗೌಡ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಅವರ ಆಪ್ತರು ತಿಳಿಸಿದ್ದಾರೆ. 

ನಟಿ ಐಂದ್ರಿಲಾ ಶರ್ಮಾ ನಿಧನ: 

ಬಂಗಾಲಿಯ ಖ್ಯಾತ ನಟಿ  ಐಂದ್ರಿಲಾ ಶರ್ಮಾ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ನಿನ್ನೆ ರಾತ್ರಿ (ನವೆಂಬರ್ 20) ಅವರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು (ನವೆಂಬರ್ 20) ಮಧ್ಯಾಹ್ನ ಕೊನೆಯುಸಿರೆಳೆದರು. ಐಂದ್ರಿಲಾ ಶರ್ಮಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಕೊನೆಯುಸಿರೆಳೆದರು ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಐಂದ್ರಿಲಾಶರ್ಮಾ ಬಾಯ್ ಫ್ರೆಂಡ್ ವದಂತಿಯನ್ನು ತಳ್ಳಿ ಹಾಕಿದ್ದರು. ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಸಿಪಿಆರ್ ಮಾಡಲಾಯಿತು. ಆದರೆ  ಐಂದ್ರಿಲಾ ದೇಹ ಸ್ಪಂದಿಸಲಿಲ್ಲ. ಹಾಗಾಗಿ ಅವರನ್ನು ವೆಂಟಿಲೇಟರ್ ಬೆಂಬಲಕ್ಕೆ ಇರಿಸಲಾಯಿತು. ಅಂಡ್ರಿಲಾ ಸ್ಥಿತಿ ಕ್ಷಣ ಕ್ಷಣಕ್ಕೂ ಗಂಭೀರವಾಗುತ್ತಿತ್ತು. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅಂಡ್ರಿಲಾ ಇಂದು ಇಹಲೋಕ ತ್ಯಜಿಸಿದರು.

click me!