
ಬಾಲಿವುಡ್ ನಟಿ ಸನ್ನಿ ಲಿಯೋನ್ ಇತ್ತೀಚೆಗೆ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಇದರಲ್ಲಿ ನಟಿಯ ಹಳದಿ ಬಣ್ಣದ ಗೌನ್ ಫಿಟ್ ಮಾಡೋಕೆ ಬಹಳಷ್ಟು ಜನ ಕಷ್ಟಪಡುತ್ತಿರುವುದನ್ನು ಕಾಣಬಹುದು.
ಸಲೆಬ್ರಿಟಿಗಳ ಸ್ಕಿನ್ ಫಿಟ್ ಉಡುಪುಗಳನ್ನು ಕಂಡಾಗ ಇದನ್ನು ಹೇಗಪ್ಪಾ ಧರಿಸ್ತಾರೆ ಅನ್ನೋ ಪ್ರಶ್ನೆ ಮೂಡೋದು ಸಹಜ. ಆದರೆ ಇದು ಅಂದುಕೊಂಡಷ್ಟು ಸುಲಭವದ ಕೆಲಸವೇ ಅಲ್ಲ.
ನಿಮಿಷಗಳ ಕಾಲ ಕ್ಯಾಮೆರಾ ಮುಂದೆ ಮಿಂಚಬೇಕಾದ್ರೂ ಇವರ ಉಡುಗೆ ಹಿಂದಿನ ಶ್ರಮ ಇದ್ಯಲ್ಲಾ.. ಅದನ್ನು ಸ್ಪಷ್ಟವಾಗಿ ತೋರಿಸಿದ್ದಾರೆ ನಟಿ ಸನ್ನಿ ಲಿಯೋನ್. ನಟಿ ಶೇರ್ ಮಾಡಿರೋ ವಿಡಿಯೋಗೆ ಗೌನ್ ಪರ್ಫೆಕ್ಟ್ ಆಗಿ ಕಾಣೋಕೆ ಒಂದು ಸೇನೆಯೇ ಬೇಕು ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
ಹಳದಿ ಬಣ್ಣದ ನೆಟ್ಟೆಡ್ ಗೌನ್ ಫಿಟ್ ಮಾಡಲು ಮೂರು, ನಾಲ್ಕು ಜನ ಪ್ರಯತ್ನಿಸಿದರೂ ಅವರಿಂದಾಗುವುದಿಲ್ಲ. ಕ್ಯಾಂಡಲ್ ಹಚ್ಚಿಯೋ, ಇನ್ನೇ ಮಾಡಿ ಹೇಗೋ ಗೌನ್ ಫಿಟ್ ಮಾಡೋಕೆ ಪ್ರಯತ್ನಿಸ್ತಾರೆ ಸ್ಟಾಫ್. ಈ ವಿಡಿಯೋ ಸಿಂಪಲ್ ಆಗಿದ್ರೂ ಫಿಟ್ ಉಡುಪುಗಳ ಹಿಂದಿನ ಕಷ್ಟವನ್ನು ಸ್ಪಷ್ಟವಾಗಿ ತೋರಿಸುತ್ತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.