
ಗಾಯಕ, ಚಿತ್ರ ನಿರ್ಮಾಪಕ ಹಾಗೂ ಹಾಸ್ಯ ಕಲಾವಿದ ಕಾರಂಜಿತ್ ಅನ್ಮೋಲ್ ಖಾಸಗಿ ಸಂದರ್ಶನವೊಂದರಲ್ಲಿ ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ 'Mr & Mrs 420 Return' ಸಿನಿಮಾದಲ್ಲಿ ಬೇಡ ಬೇಡ ಎಂದರೂ ಮಾನಸಿಕ ಹಿಂಸೆಯಿಂದ ಮಾಡಿದ ಪಾತ್ರದ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಹೇಳಿದ್ದಾರೆ.
' ನನಗೆ ಮಹಿಳೆ ಪಾತ್ರ ಮಾಡಲು ಅಥವಾ ಮಹಿಳಾ ವಸ್ತ್ರ ಧರಿಸಲು ಅಷ್ಟು ಆರಾಮದಾಯಕ ಇರಲಿಲ್ಲ.'Mr & Mrs 420 Return' ತಂಡದವರು ನಾನು ಆ ಪಾತ್ರ ಮಾಡದಿದ್ದರೆ ಸಿನಿಮಾ ಕಂಪ್ಲೀಟ್ ಆಗುವುದಿಲ್ಲ ಎಂದು ಹೇಳಿದ್ದರು. ಈ ಪಾತ್ರ ಮಾಡಲು ನನಗೆ ಮಾನಸಿಕ ಹಿಂಸೆ ನೀಡಿದ್ದಾರೆ. ಆದರೂ ಮಾಡಿದೆ'ಎಂದು ಅನ್ಮೋಲ್ ಹೇಳಿದ್ದಾರೆ. ಹಾಸ್ಯ ಕಲಾವಿದನಾಗಿ ನಟನಾಗಿ ಮಿಂಚುತ್ತಿರುವ ಕಾರಂಜಿತ್ 'ಮಂಜೆ ಬಿಸ್ಟ್ರೆ' ಚಿತ್ರದಲ್ಲಿ ಮಾಡಿದ ಸಾಧು ಪಾತ್ರ ಮನಸ್ಸಿಗೆ ತುಂಬಾ ಹತ್ತಿರವಾಗಿದೆ ಎಂದು ಹೇಳಿದ್ದಾರೆ.
ಸೈಕ್ಲೋನ್ ತೌಕ್ಟೆಯಿಂದ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್‌ಗೆ ಖಿನ್ನತೆ
ಸುಮಾರು 26ಕ್ಕೂ ಹೆಚ್ಚು ಪಂಜಾಬಿ ಸಿನಿಮಾಗಳಿಗೆ ಕಾರಂಜಿತ್ ಸೌಂಡ್ ಟ್ರ್ಯಾಕ್ ಮಾಡಿದ್ದಾರೆ. 73ಕ್ಕೂ ಹೆಚ್ಚು ಚಿತ್ರಗಳಿಗೆ ಚಿತ್ರಕಥೆ, 4 ಸಿನಿಮಾಗಳಿಗೆ ನಿರ್ಮಾಣ ಮತ್ತು 10 ಸಿನಿಮಾಗಳಿಗೆ ಹಾಡು ಹಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.