
ಹಲವು ವಿವಾದಿತ ಹೇಳಿಕೆಗಳಿಂದಲೇ ಸುದ್ದಿ ಮಾಡುತ್ತಿರುವ ತಮಿಳು ಸಿನಿಮಾರಂಗದ ಗಾಯಕಿ ಹಾಗೂ ನಟಿ ಸುಚಿತ್ರಾ ಈಗ ತನ್ನ ಭಾವಿ ಪತಿ ವಿರುದ್ಧ ಭಾರಿ ಆರೋಪ ಮಾಡಿದ್ದಾರೆ. ಆತ ನನ್ನನ್ನು ರೆಸ್ಲರ್ ಶೋಗಳಲ್ಲಿ ಸ್ಪರ್ಧಾಳುಗಳು ಪರಸ್ಪರ ಹೊಡೆಯುವಂತೆ ಥಳಿಸುತ್ತಿದ್ದ ಎಂದು ದೂರಿದ್ದಾರೆ. ಆತ ತನ್ನ ಮನೆಯನ್ನು ತನ್ನ ವಶಕ್ಕೆ ಪಡೆದುಕೊಂಡು ನನ್ನನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿಸಿದ್ದಾನೆ ಹಲವು ವರ್ಷಗಳಿಂದ ದೈಹಿಕವಾಗಿ ಹಲ್ಲೆ ಮಾಡಿದ್ದಾನೆ ಎಂದು ಗಾಯಕಿ ಸುಚಿತ್ರಾ ದೂರಿದ್ದು ಆತನ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಹೈಕೋರ್ಟ್ ವಕೀಲನಾಗಿರು ಶಣ್ಮುಗರಾಜ್:
ಗಾಯಕಿ ಹಾಗೂ ಮಾಜಿ ರೆಡಿಯೋ ಜಾಕಿ ಆಗಿರುವ ಸುಚಿತ್ರಾ, ತನ್ನ ಭಾವಿ ಪತಿ ಚೆನ್ನೈ ಮೂಲದ ಹೈಕೋರ್ಟ್ ವಕೀಲ ಶಣ್ಮುಗರಾಜ್ ವಿರುದ್ಧ ಕೌಟುಂಬಿಕ ಹಿಂಸಾಚಾರ, ಹಣಕಾಸಿನ ಮೋಸ ಹಾಗೂ ಚೆನ್ನೈನಲ್ಲಿದ್ದ ತನ್ನ ಮನೆಯನ್ನು ಆತನ ವಶಕ್ಕೆ ತೆಗೆದುಕೊಂಡಿರುವುದಲ್ಲದೇ ತನ್ನ ಎಲ್ಲಾ ಹಣವನ್ನು ಆತ ತೆಗೆದುಕೊಂಡಿದ್ದಾನೆ ಎಂಬ ಆರೋಪ ಮಾಡಿದ್ದಾರೆ.
ಇತ್ತೀಚಿನ ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಸುಚಿತ್ರಾ, ತನ್ನ ಫಿಯಾನ್ಸಿ ಶಣ್ಮುಗರಾಜ್ ಭಾವನಾತ್ಮಕ ಹಾಗೂ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸುಚಿತ್ರಾ ಅವರು ದಕ್ಷಿಣ ಭಾರತದ ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ್ದು, ತಾನು ಹಲವು ವರ್ಷಗಳಿಂದ ಪರಿಚಯವಿದ್ದ ಶಣ್ಮುಗಮ್ ಜೊತೆ ಬಹುತೇಕ ಎಂಗೇಜ್ ಆಗಿದೆ ಎಂದು ಹೇಳಿದ್ದಾರೆ.ಆತ ನನ್ನ ಜೀವನದಲ್ಲಿ ಓರ್ವ ರಕ್ಷಕನಂತೆ ಬಂದ ಆದರೆ ಸುಚಿ ಲೀಕ್ಸ್ ವಿವಾದದ ನಂತರ ಅವನು ತನ್ನನ್ನು ಭಾವನಾತ್ಮಕವಾಗಿ ಹಾಳು ಮಾಡಿದ. ತನ್ನ ಸಾಮಾಜಿಕ ವಲಯದಿಂದ ನನ್ನನ್ನು ಪ್ರತ್ಯೇಕಿಸಿದ. ತನ್ನ ದೌರ್ಬಲ್ಯದ ಲಾಭ ಪಡೆದ ನನ್ನನ್ನು ಭಾವನಾತ್ಮಕವಾಗಿ ಹಿಂಸಿಸಿದ್ದ ಎಂದು ಸುಚಿತ್ರಾ ಆರೋಪಿಸಿದ್ದಾರೆ.
ಚೆನ್ನೈನಲ್ಲಿರುವ ನನ್ನ ಮನೆಯಿಂದ ನನ್ನನ್ನೇ ಹೊರಹಾಕಿದ:
ತನ್ನನ್ನು ಚೆನ್ನೈನಲ್ಲಿರುವ ತನ್ನದೇ ಮನೆಯಿಂದಲೇ ಹೊರಗೆ ಹಾಕಿದ. ಹೀಗಾಗಿ ತಾನು ಒಂದು ಉದ್ಯೋಗ ಹುಡುಕುವುದಕ್ಕಾಗಿ ಮುಂಬೈಗೆ ಶಿಫ್ಟ್ ಆಗ್ಬೇಕಾಯ್ತು ಎಂದು ಸುಚಿತ್ರಾ ದೂರಿದ್ದಾರೆ. ಗಾಯಕಿ ನಡೆಸಿಕೊಡುತ್ತಿದ್ದ ಸುಚಿ ಲೀಕ್ಸ್ ಎಪಿಸೋಡ್‌ನ ನಂತರ, ಏನೂ ಕೆಟ್ಟದು ಆಗಲಾರದು ಎಂದು ನಾನು ಭಾವಿಸಿದೆ. ಆದರೆ ನಾನು ಪ್ರೀತಿಯಲ್ಲಿ ಬಿದ್ದೆ. ನನಗೆ ಹಲವು ಬಾರಿ ಆತ ಥಳಿಸಿದ್ದಾನೆ, WWF ರೆಸ್ಲರ್ ತರ ಆತ ನನ್ನನ್ನು ಥಳಿಸಿದ್ದಾನೆ. ನಾನು ಒಂದು ಮೂಲೆಯಲ್ಲಿ ಕುಳಿತು ಅಳುತ್ತಿದ್ದೆ ಇದನ್ನು ನಿಲ್ಲಿಸುವಂತೆ ಆತನಲ್ಲಿ ಬೇಡುತ್ತಿದ್ದೆ ಎಂದು ಸುಚಿತ್ರಾ ವೀಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ.
2016ರಲ್ಲಿ ಈ ಸುಚಿ ಲೀಕ್ಸ್ ವಿವಾದ ಉಂಟಾಗಿತ್ತು. ಕೆಲವು ಖಾಸಗಿ ಹಾಗೂ ಸ್ಪಷ್ಟವಾದ ವಿಷಯಗಳನ್ನು ಒಳಗೊಂಡ ವೀಡಿಯೋಗಳು ಸುಚಿತ್ರಾ ಅವರ ಈಗ ಡಿಲೀಟ್ ಆಗಿರುವ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಆಗಿದ್ದವು. ಈ ವೀಡಿಯೋಗಳು ತಮಿಳು ಸಿನಿಮಾರಂಗದ ಹಲವು ಸೆಲೆಬ್ರಿಟಿಗಳ ಬದುಕಿನ ಮೇಲೆ ಪರಿಣಾಮ ಬೀರಿತ್ತು. ಆಗ ಆಕೆಯ ಪತಿಯಾಗಿದ್ದ ಕಾಮಿಡಿಯನ್ ಹಾಗೂ ನಟ ಕಾರ್ತಿಕ್ ಕುಮಾರ್ ನಂತರ ಆಕೆಯ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ ಎಂದು ಹೇಳಿಕೊಂಡಿದ್ದರು. ನಂತರ ಗಾಯಕಿ ಸುಚಿತ್ರಾ, ಕಾರ್ತಿಕ್ ಕುಮಾರ್ ಮತ್ತು ನಟ ಧನುಷ್ ಈ ಸೋರಿಕೆಗೆ ಕಾರಣ ಎಂದು ಆರೋಪಿಸಿದ್ದರು.
ಈಗ ಈಕೆ ಶಣ್ಮುಗಂ ವಿರುದ್ಧ ಆರೋಪ ಹಣಕಾಸಿನ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಆತ ತನ್ನ ಮೊದಲ ಮದುವೆಯ ವಿಚಾರದ ಬಗ್ಗೆಯೂ ಕೆಲವು ರಹಸ್ಯಗಳನ್ನು ಮುಚ್ಚಿಟ್ಟಿದ್ದ. ಅವನ ಮೊದಲ ಹೆಂಡತಿಯಿಂದಾಗಿ ಅವನಿಗೆ ಮೋಸ ಆಗಿದೆ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ ನಂತರ ಅವನು ಎಂದಿಗೂ ಆಕೆಯಿಂದ ವಿಚ್ಛೇದನ ಪಡೆದಿಲ್ಲ ಎಂದು ನನಗೆ ತಿಳಿಯಿತು. ಅವನ ಮೊದಲ ಹೆಂಡತಿ ನನ್ನ ಬಳಿಗೆ ಬಂದು ಅವನನ್ನು ಮರಳಿ ಕರೆದುಕೊಂಡು ಹೋಗುವುದಾಗಿ ಬೇಡಿಕೊಂಡಳು ಎಂದು ಸುಚಿತ್ರಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಗರ್ಲ್‌ಫ್ರೆಂಡ್ ಜೊತೆ ಪತಿಯ ತಿರುಪತಿ ಭೇಟಿಗೆ ಪ್ರತಿಕ್ರಿಯಿಸಿದ ಜಯಂ ರವಿ ಪತ್ನಿ
ಇದನ್ನೂ ಓದಿ: ಸಾಗರಿಕಾ ಜಹೀರ್ ಖಾನ್ ದಂಪತಿಯ ಗಣೇಶ ಹಬ್ಬಕ್ಕೆ ಕಳೆ ತಂದ ಮಗ ಫತೇಸಿನ್ಹ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.