
ಹಾಲಿವುಡ್ ಚಿತ್ರರಂಗದ ಹಿರಿಯ ಕಲಾವಿದೆ ಡೆಬಿ ಮಜರ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಆರೋಗ್ಯದ ಬಗ್ಗೆ ಹಾಗೂ ತಮಗೆ ಕೋವಿಡ್-19 ಇರುವುದಾಗಿ ಬಹಿರಂಗಗೊಳಿಸಿದ್ದಾರೆ.
'ತಿಂಗಳ ಹಿಂದೆ ನನ್ನ ಕುಟುಂಬವಿಡೀ (ಗಂಡ ಹಾಗೂ ಇಬ್ಬರು ಹೆಣ್ಣು ಮಕ್ಕಳು) ಅನಾರೋಗ್ಯದಿಂದ ನರಳುತ್ತಿದ್ದರು. ಜ್ವರ, ತಲೆ ನೋವು, ಕಿವಿ ನೋವು ಹಾಗೂ ಒಣ ಕೆಮ್ಮು ಹೆಚ್ಚಾಗಿತ್ತು. ಸ್ವಲ್ಪ ದಿನಗಳ ನಂತರ ಅವೆರೆಲ್ಲರೂ ಆರೋಗ್ಯವಾದರು. ಇದೀಗ ನನಗೆ ರೋಗ ಅಂಟಿ ಕೊಂಡಿದೆ,' ಎಂದು ಬರೆದುಕೊಂಡಿದ್ದಾರೆ.
ಜಾರ್ಜಿಯಾದಿಂದ ಭಾರತಕ್ಕೆ ಮರಳಿದ ಬಾಹುಬಲಿಗೆ 14 ದಿನ ಗೃಹ ಬಂಧನ!
ಕುಟುಂಬದವರ ಆರೋಗ್ಯ ಸುಧಾರಿಸಿದ ಎರಡೇ ವಾರಕ್ಕೆ ಅಂದ್ರೆ ಮಾರ್ಚ್ 15ಕ್ಕೆ ಡೆಬಿಗೆ ಮೈ-ಕೈ ನೋವು ಕಾಣಿಸಿಕೊಂಡಿತ್ತು. 102.4 ಡಿಗ್ರಿ ಉಷ್ಣಾಂಶದ ಜ್ವರವೂ ಇತ್ತು. ಇದು ಫ್ಲೂ ಅಥವಾ ಕೊರೋನಾ ಎಂಬ ಅನುಮಾವಿದ್ದರೂ ಇಮ್ಯೂನಿಟಿ ಟೆಸ್ಟ್ ಮಾಡಲು ಸ್ನೇಹಿತರ ಜೊತೆ ಕಾಕ್‌ಟೇಲ್ ಕುಡಿದು ಸಿಗರೇಟ್ ಸೇದಿದ್ದಾರೆ. ಆದರೆ ನೋವು ಹೆಚ್ಚಾದ ಕಾರಣ ಫ್ಯಾಮಿಲಿ ಡಾಕ್ಟರ್‌ಗೆ ತಿಳಿಸಿ, ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಪಾಸಿಟವ್ ಫಲಿತಾಂಶ ಬಂದಿದೆ.
'ನಾನು ಯಾವ ವಿದೇಶಕ್ಕೂ ಹೋಗಿಲ್ಲ. ಆದರೂ ನನಗೆ ಪಾಸಿಟಿವ್ ಬಂದಿದೆ. ಇದಕ್ಕೆ ಕಾರಣ ನಾನು ಓಡಾಡಲು ಸಬ್‌ವೇ ಬಳಸಿದ್ದೆ. ಥಿಯೇಟರ್‌ನಲ್ಲಿ ಸಿನಿಮಾ ನೋಡಿ, ಆ ನಂತರ ತರಕಾರಿ ತರಲು ಹೋಗಿದ್ದೆ. ಮನೆಯಲ್ಲಿರುವವರನ್ನು ತಯಾರಿ ಮಾಡಲು ಹೊರಟಿದ ನನಗೇ ಕೊರೋನಾ ತಗುಲಿ ಕೊಂಡಿದೆ,' ಎಂದು ಪೋಟೋವೊಂದನ್ನು ಹಾಕಿ, ಶೇರ್ ಮಾಡಿಕೊಂಡಿದ್ದಾರೆ.
ಈಗಾಗಲೇ ಚಿಕಿತ್ಸೆಗೆ ಒಳಗಾಗಿರುವ ಡಿಬಿ ಒಂದೊಂದು ದಿನವೂ ಒಂದೊಂದು ರೀತಿಯಾಗಿ ಆರೋಗ್ಯದಲ್ಲಿ ಬದಲಾವಣೆಯಾಗುತ್ತಿದೆ ಎಂದು ಹೇಳಿದ್ದಾರೆ. ಒಂದು ದಿನ ಯಕೃತ್ತಿನ ನೋವಿದ್ದರೆ, ಮತ್ತೊಂದು ದಿನ ಶ್ವಾಸಕೋಶದಲ್ಲಿ ನೋವಾಗುತ್ತದೆ. ಈ ನೋವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾ, ಅಭಿಮಾನಿಗಳಿಗೆ ಆರೋಗ್ಯ ಕಾಪಾಡಿಕೊಳ್ಳಲು ಹೇಳಿದ್ದಾರೆ.
ಲಂಡನ್‌ನಿಂದ ಸುಹಾಸಿನಿ ಪುತ್ರ ರಿಟರ್ನ್; 14 ದಿನ ಗೃಹ ಬಂಧನ!
ಅದಕ್ಕೆ ಹೇಳುವುದು ಸ್ವಯಂ ನಿರ್ಬಂಧ ಅನಿವಾರ್ಯವೆಂದು. ಎಲ್ಲಿಂದ, ಯಾವಾಗ, ಹೇಗೆ ಈ ರೋಗ ಹರಡುತ್ತದೆ ಎಂಬ ಅರಿವೂ ಯಾರಿಗೂ ಇರುವುದಿಲ್ಲ. ಒಂದೇ ಮದ್ದು ಎಂದರೆ ಮನೆಯಲ್ಲಿಯೇ ಬಂಧಿತರಾಗುವುದು. ದೇಶಕ್ಕೆ ದೇಶವೇ ಲಾಕ್‌ಡೌನ್ ಆದರೂ, ಇಟಲಿ ಮಂದಿ ಸರಕಾರದ ಆದೇಶವನ್ನು ನಿರ್ಲಕ್ಷಿಸಿ ತಮ್ಮಿಷ್ಟ ಬಂದಂತೆ ಇದ್ದಿದ್ದಕ್ಕೆ ಇದೀಗ ಅನುಭವಿಸುತ್ತಿದ್ದಾರೆ. ದಿನಾಲೂ ನೂರಾರು ಸಂಖ್ಯೆಯಲ್ಲಿ ಜನರು ಸಾಯುತ್ತಿದ್ದಾರೆ. ಭಾರತೀಯರೂ ಸರಕಾರದ ಆದೇಶವನ್ನು ತಿರಸ್ಕರಿಸಿ, ತಮ್ಮಿಚ್ಛೆಯಂತೆ ತಾವಿದ್ದರೆ ಅಂಥದ್ದೇ ಪರಿಸ್ಥಿತಿ ಬರುವುದ ಗ್ಯಾರಂಟಿ. #BeCareful
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.