CM Vijay Gift to Trisha: ಒಲವಿನ ಗೆಳತಿಗೆ ಭಾರೀ ಉಡುಗೊರೆ ಕೊಟ್ಟ ಸಿಎಂ ವಿಜಯ್; ದಳಪತಿ ದರ್ಬಾರ್‌ಗೆ ಹೌಹಾರಿದ ತಮಿಳುನಾಡು!

Published : May 16, 2026, 06:08 PM IST
Vijay Joseph Trisha Krishnan

ಸಾರಾಂಶ

ತಮಿಳುನಾಡಿನಲ್ಲಿ ಚುನಾವಣೆ ಗೆದ್ದು ವಿಜಯ್ ಸಿಎಂ ಆದ ಮೇಲೆ ತ್ರಿಷಾ ಕೃಷ್ಣನ್ ಹೆಸರು ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಇಬ್ಬರ ನಂಟಿನ ಬಗ್ಗೆ ಫುಲ್ ಗುಲ್ಲೋ ಗುಲ್ಲು. ಈ ನಡುವೆ ದಳಪತಿ ತಮ್ಮ ಸಿಎಂ ಪವರ್ ಬಳಸಿ ಗೆಳತಿಗೆ ಒಂದು ಒಲವಿನ ಉಡುಗೊರೆೆಯನ್ನೇ ಕೊಟ್ಟುಬಿದ್ದಾರೆ

ತ್ರಿಷಾಗೆ ದಳಪತಿ ಒಲವಿನ ಉಡುಗೊರೆ!

ತಮಿಳುನಾಡಿನಲ್ಲಿ ಚುನಾವಣೆ ಗೆದ್ದು ವಿಜಯ್ ಸಿಎಂ (Thalapathy Vijay) ಆದ ಮೇಲೆ ತ್ರಿಷಾ ಕೃಷ್ಣನ್ (Trisha Krishnan) ಹೆಸರು ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಇಬ್ಬರ ನಂಟಿನ ಬಗ್ಗೆ ಫುಲ್ ಗುಲ್ಲೋ ಗುಲ್ಲು. ಈ ನಡುವೆ ದಳಪತಿ ತಮ್ಮ ಸಿಎಂ ಪವರ್ ಬಳಸಿ ಗೆಳತಿಗೆ ಒಂದು ಒಲವಿನ ಉಡುಗೊತೆಯನ್ನೇ ಕೊಟ್ಟುಬಿದ್ದಾರೆ. ಏನದು ಅಂತೀರಾ..? ಈ ಸ್ಟೋರಿ ನೋಡಿ.

ಗೆಳತಿಗೆ ಒಲಿವಿನ ಉಡುಗೊರೆ ಕೊಟ್ಟ ತಮಿಳುನಾಡು ದೊರೆ

ಯೆಸ್, ದಳಪತಿ ವಿಜಯ್ ಅಂಡ್ ತ್ರಿಷಾ ನಂಟಿನ ವಿಷ್ಯ ಈಗ ಸಿನಿರಂಗದಲ್ಲೂ ರಾಜಕೀಯ ರಂಗದಲ್ಲೂ ಹಾಟ್ ಟಾಪಿಕ್ ಆಗಿಬಿಟ್ಟಿದೆ. ಇಬ್ಬರ ರಿಲೇಷನ್​ ಶಿಪ್ ಬಗ್ಗೆ ಭರಪೂರ ಚರ್ಚೆಯಾಗ್ತಾ ಇದೆ. ಆದ್ರೆ ಇದರ ಬಗ್ಗೆ ವಿಜಯ್ ಆಗಲಿ, ತ್ರಿಷಾ ಆಗಲಿ ತಲೆ ಕೆಡಿಸಿಕೊಂಡತಿಲ್ಲ. ವಿಜಯ್ ಪ್ರಮಾಣ ವಚನಕ್ಕೆ ಥೇಟ್ ವಿಜಯ್ ಪತ್ನಿ ರೀತಿ ರೆಡಿಯಾಗಿ ಬಂದಿದ್ರು ತ್ರಿಷಾ..!

ಮತ್ತೀಗ ದಳಪತಿ ಕೂಡ ಸಿಎಂ ಆದ ಮೇಲೆ ಸಿಎಂ ಪಟ್ಟದ ಪವರ್ ಬಳಸಿ ತ್ರಿಷಾಗೊಂದು ಉಡುಗೊರೆ ಕೊಟ್ಟಿದ್ದಾರೆ. ಅಸಲಿಗೆ ಈ ವಾರ ತ್ರಿಷಾ ಮತ್ತು ಸೂರ್ಯ ನಟಿಸಿರೋ ಕರಪ್ಪು ಸಿನಿಮಾ ತೆರೆಗೆ ಬಂದಿದೆ.

ಕರಪ್ಪು ಸಿನಿಮಾತಂಡ ವಿಜಯ್ ಗೆ ಮನವಿ

ಇತ್ತೀಚಿಗೆ ತಮಿಳುನಾಡಿನಲ್ಲಿ ಸಿನಿಮಾಗಳನ್ನ ಹತ್ತು ಗಂಟೆಗೆ ಮುನ್ನ ರಿಲೀಸ್ ಮಾಡೋದನ್ನ ಬಂದ್ ಮಾಡಲಾಗಿತ್ತು. ಕಾನೂನು ಸುವ್ಯವಸ್ಥೆಗೆ ತೊಂದ್ರೆಯಾಗುತ್ತೆ ಅಂತ ಹಿಂದಿನ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿತ್ತು. ಆದ್ರೆ ಕರಪ್ಪು ಸಿನಿಮಾತಂಡ ವಿಜಯ್ ಗೆ ಮನವಿ ಮಾಡಿ ಈ ನಿಯಮದಿಂದ ವಿನಾಯತಿ ಕೊಡುವಂತೆ ಕೇಳಿಕೊಂಡಿದ್ರು. ಅರ್ಲಿ ಮಾರ್ನಿಂಗ್ ಶೋ ಹಾಕಲಿಕ್ಕೆ ಅವಕಾಶ ಕೊಡಿ ಅಂತ ಮನವಿ ಸಲ್ಲಿಸಿದ್ರು.

ವಿಜಯ್ ಕೂಡ ಸಿನಿಮಾದವರೇ. ಜೊತೆಗೆ ಹೇಳಿ ಕೇಳಿ ಗೆಳತಿ ತ್ರಿಷಾ ನಾಯಕಿ ಆಗಿರೋ ಸಿನಿಮಾ. ಸೋ ಹಿಂದೂ ಮುಂದೂ ನೋಡದೇ ವಿಜಯ್ ಇದಕ್ಕೆ ಅನುಮತಿ ಕೊಟ್ಟಿದ್ದಾರೆ. ಅರ್ಲಿ ಮಾರ್ನಿಂಗ್ ಶೋ ಹಾಕುವ ಅನುಮತಿ ಪತ್ರಕ್ಕೆ ಸಹಿ ಹಾಕಿದ್ದಾರೆ.

ಆದ್ರೆ ಕರಪ್ಪು ಚಿತ್ರತಂಡ ತನ್ನ ವೈಯಕ್ತಿಕ ಸಮಸ್ಯೆಗಳಿಂದ ಅನುಮತಿ ಇದ್ರೂ ಮುಂಜಾನೆಯ ಶೋ ನಡೆಸೋದಕ್ಕೆ ಸಾಧ್ಯ ಆಗಿಲ್ಲ. ಸಿಎಂ ಅನುಮತಿ ಸಿಕ್ಕರೂ ಕರಪ್ಪು ಟೀಂಗೆ ಮಾತ್ರ ಅದನ್ನ ಸರಿಯಾಗಿ ಬಳಸಿಕೊಳ್ಳೋದಕ್ಕೆ ಆಗಿಲ್ಲ.

ಎನಿವೇ ಸಿಎಂ ವಿಜಯ್ ಕೊಟ್ಟ ಪರವಾನಿಗೆ ಕರಪ್ಪು ಟೀಂಗೆ ಎಷ್ಟು ಯೂಸ್ ಆಯ್ತೋ ಬಿಟ್ತೋ ಗೊತ್ತಿಲ್ಲ. ಆದ್ರೆ ಇಂಥದ್ದೊಂದು ಅನುಮತಿ ಕೊಡೋ ಮೂಲಕ ಗೆಳತಿಯ ಸಿನಿಮಾಗೆ ಮತ್ತು ಗೆಳತಿ ತ್ರಿಷಾಗೆ ವಿಶೇಷ ಉಡುಗೊರೆ ಕೊಟ್ಟಿದ್ದಾರೆ ದಳಪತಿ..!

ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವಿವಾಹಿತ ನಟನ ಜೊತೆ ಸಂಬಂಧ; ಈಗ‌ ಲವ್ವರ್, ಮನೆ, ವೃತ್ತಿ ಎಲ್ಲ ಬಿಟ್ಟು ಹೋದ ಬೆಂಗಳೂರಿನ ಗಾಯಕಿ!
ಆ ಪವರ್‌ಫುಲ್‌ ಪಾತ್ರದಲ್ಲಿ ಶಿವಣ್ಣ: ಮೆಗಾಸ್ಟಾರ್ ಮಗನಿಗೆ ಕುಸ್ತಿ ಗುರುವಾದ ಹ್ಯಾಟ್ರಿಕ್ ಹೀರೋ!