ನಟ ವಿಶಾಲ್ ಮನೆ ಮೇಲೆ ಕಲ್ಲು ತೂರಾಟ; ಕಿಟಕಿ ಗಾಜು ಪುಡಿ ಪುಡಿ

Published : Sep 28, 2022, 03:39 PM IST
 ನಟ ವಿಶಾಲ್ ಮನೆ ಮೇಲೆ ಕಲ್ಲು ತೂರಾಟ; ಕಿಟಕಿ ಗಾಜು ಪುಡಿ ಪುಡಿ

ಸಾರಾಂಶ

ತಮಿಳಿನ ಖ್ಯಾತ ನಟ ವಿಶಾಲ್ ಮನೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡಿಸಿದ್ದಾರೆ. ಚೆನ್ನೈನ ಅಣ್ಣಾ ನಗರದಲ್ಲಿರುವ ನಿವಾಸದ ಮೇಲೆ ದಾಳಿ ನಡೆದಿದೆ. 

ತಮಿಳಿನ ಖ್ಯಾತ ನಟ ವಿಶಾಲ್ ಮನೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡಿಸಿದ್ದಾರೆ. ಚೆನ್ನೈನ ಅಣ್ಣಾ ನಗರದಲ್ಲಿರುವ ನಿವಾಸದ ಮೇಲೆ ದಾಳಿ ನಡೆದಿದೆ. ಈ ಮನೆಯಲ್ಲಿ ವಿಶಾಲ್ ತನ್ನ ತಂದೆ-ತಾಯಿ ಜೊತೆ ವಾಸವಾಗಿದ್ದಾರೆ. ಕಿಡಿಗೇಡಿಗಳ ಕೃತ್ಯಕ್ಕೆ ವಿಶಾಲ್ ಮನೆಯ ಕಿಟಕಿ ಗಾಜು ಪುಡಿ ಪುಡಿಯಾಗಿದೆ. ವಿಶಾಲ್ ಮನೆ ಮೇಲೆ ದಾಳಿ ನಡೆಸಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಈ ಘಟನೆ ವಿಶಾಲ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಕಠಿಣ ಕ್ರಮ ಕೈಗೊಳ್ಳುವಂತೆ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. 

ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಕೆಂಪು ಬಣ್ಣದ ಕಾರಿನಲ್ಲಿ ಬಂದ ಕೆಲವು ಅಪರಿಚಿತ ದುಷ್ಕರ್ಮಿಗಳು ವಿಶಾಲ್ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಎಸ್ಕೇಪ್ ಆಗಿದ್ದಾರೆ. ದಾಳಿಯಿಂದಾಗಿ ವಿಶಾಲ್ ಮನೆಯ ಬಾಲ್ಕನಿ ಗ್ಲಾಸ್‌ಗಳು ಮತ್ತು ಮನೆಯ ಇತರ ಕೆಲವು ಸ್ಥಳಗಳಿಗೆ ಹಾನಿಯಾಗಿದೆ. ಈ ಬಗ್ಗೆ ವಿಶಾಲ್ ತಮ್ಮ ಮ್ಯಾನೇಜರ್ ಹರಿಕೃಷ್ಣನ್ ಮೂಲಕ ಅಣ್ಣಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನ ಜೊತೆಗೆ ವಿಶಾಲ್ ಅವರ ಮ್ಯಾನೇಜರ್ ಮನೆಗೆ ಅಳವಡಿಸಲಾಗಿದ್ದ ಸಿಸಿಟಿವಿ ವಿಡಿಯೋ ರೆಕಾರ್ಡಿಂಗ್ ಅನ್ನು ಲಗತ್ತಿಸಿದ್ದಾರೆ. ಮ್ಯಾನೇಜರ್ ದೂರಿನ ಆಧಾರದ ಮೇರೆಗೆ ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ವಿಶಾಲ್ ಮನೆ ಮೇಲೆ ದಾಳಿ ನಡೆಸಲು ಕಾರಣವೇನು ಎಂದು ತನಿಖೆ ಮಾಡುತ್ತಿದ್ದಾರೆ. ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆನೀಡುವ ಬರವಸೆ ನೀಡಿದ್ದಾರೆ ಎನ್ನಲಾಗಿದೆ. ಇದುವರೆಗೂ ವಿಶಾಲ್ ಮನೆ ಮೇಲೆ ನಡೆದ ದಿಢೀರ್ ದಾಳಿಗೆ ಕಾರಣವೇನು ಎನ್ನುವುದು ಬಹಿರಂಗವಾಗಿಲ್ಲ.  

ಪುನೀತ್‌ ರಾಜ್‌ಕುಮಾರ್ ನಿಧನದ ವೇಳೆ ಕೊಟ್ಟ ಮಾತು ಉಳಿಸಿಕೊಂಡ ತಮಿಳು ನಟ

ಈ ಘಟನೆ ವಿಶಾಲ್ ಅಭಿಮಾನಿಗಳಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಅನೇಕರು ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ಸೂಚಿಸಿದ್ದಾರೆ. ಕಠಿಣ ಶಿಕ್ಷೆ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಕೃತ್ಯದ ಹಿಂದೆ ತಲೆಮರೆಸಿಕೊಂಡಿರುವ ಈ ವ್ಯಕ್ತಿಗಳ ಗುರುತು ಇನ್ನು ಪತ್ತೆಯಾಗಿಲ್ಲ.

ನಾನು ಶಕ್ತಿಧಾಮದ ಸ್ವಯಂ ಸೇವಕನಾಗಿರ್ತೀನಿ, ರಾಜ್ ಕುಟುಂಬ ಅನುಮತಿ ನೀಡಲಿ; ಶಕ್ತಿಧಾಮ ಭೇಟಿ ಬಳಿಕ ವಿಶಾಲ್ ಮಾತು

ಇನ್ನು ನಟ ವಿಶಾಲ್ ಅವರ ಸಿನಿಮಾಗಳ ಬಗ್ಗೆ ಹೇಳುವುದಾದರೆ ವಿಶಾಲ್ ಸದ್ಯ ಲಾಠಿ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಬಿಡುಗಡ ದಿನಾಂಕ ಇನ್ನು ಬಹಿರಂಗವಾಗಿಲ್ಲ. ಈ ಸಿನಿಮಾ ಜೊತೆಗೆ ಮಾರ್ಕ್ ಆಂಟನಿ, ತುಪ್ಪರಿವಾಲನ್ 2 ನಲ್ಲಿ ಬ್ಯುಸಿಯಾಗಿದ್ದಾರೆ. ವಿಶಾಲ್ ಕೊನೆಯದಾಗಿ ವೀರಮೆ ವಾಗೈ ಸೂಡುಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಈ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Milind Soman: ವರ್ಷ 60, ಆರು ದಿನಗಳ ಅಂತರದಲ್ಲಿ 2 ಐರನ್ಮ್ಯಾನ್! ವಯಸ್ಸು ಕೇವಲ ಸಂಖ್ಯೆ ಎಂದ ಮಿಲಿಂದ್ ಸೋಮನ್
ಕಯಾದು ಲೋಹರ್ ಹೆಸರಿನ ಹಿಂದಿದೆ ಇಷ್ಟೊಂದು ಅರ್ಥ: ನಟಿಯ ಹೆಸರಿಗೂ ಪುರಾಣಕ್ಕೂ ಇದೆ ಲಿಂಕ್!