
ಬಹುಭಾಷಾ ನಟ, ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್ ಗೆ ಇಂದು 65 ನೇ ಹುಟ್ಟುಹಬ್ಬದ ಸಂಭ್ರಮ. ಇವರ ಸಿನಿಮಾಗಳನ್ನು ನೋಡಿದ್ದೇವೆ. ಎಂಜಾಯ್ ಮಾಡಿದ್ದೇವೆ. ತೆರೆ ಮೇಲಷ್ಟೇ ಇವರನ್ನು ನೋಡಿ ಮೆಚ್ಚಿಕೊಂಡಿದ್ದೇವೆ. ತೆರೆ ಹಿಂದಿನ ಬದುಕಿನ ಬಗ್ಗೆ ಒಂದಷ್ಟು ಇಂಟರೆಸ್ಟಿಂಗ್ ಕಹಾನಿ ಇಲ್ಲಿದೆ ನೋಡಿ.
* ಕಮಲ್ ಹಾಸನ್ ಮೂಲ ಹೆಸರು ಪಾರ್ಥಸಾರಥಿ
* ಇವರು ಹುಟ್ಟಿದ್ದು ತಮಿಳು ಅಯ್ಯಂಗಾರ್ ಕುಟುಂಬದಲ್ಲಿ. ತಂದೆ ಡಿ ಶ್ರೀನಿವಾಸನ್ ಕ್ರಿಮಿನಲ್ ಲಾಯರ್. ತಾಯಿ ರಾಜಲಕ್ಷ್ಮೀ ಗೃಹಿಣಿ.
'ಕನ್ನಡದ ಕೋಟ್ಯಧಿಪತಿ'ಯಲ್ಲಿ ಗೆದ್ದ ಹಣ ಸರ್ಕಾರಿ ಶಾಲೆಗೆ!
* 1959 ರಲ್ಲಿ ಕಲತ್ತೂರ್ ಕನ್ನಮ್ಮ ಎನ್ನುವ ಸಿನಿಮಾದಲ್ಲಿ ಬಾಲ್ಯ ನಟನಾಗಿ ಅಭಿನಯಿಸಿದ್ದಾರೆ.
* 1994 ರ ದಶಕದಲ್ಲಿ 1 ಕೋಟಿ ಸಂಭಾವನೆ ಪಡೆದ ಏಕೈಕ ನಟ ಇವರು.
* ಕಮಲ್ ಹಾಸನ್ 'ಅಲವಂದನ್' ಸಿನಿಮಾದಿಂದ ಇನ್ಸ್ಪೈರ್ ಆಗಿ ಹಾಲಿವುಡ್ ಕಿಲ್ ಬಿಲ್ ಎನ್ನುವ ಸಿನಿಮಾ ಮಾಡಿರುದಾಗಿ ಹಾಲಿವುಡ್ ನಿರ್ದೇಶಕ ಕ್ವಾಂಟೀನ್ ಹೇಳಿದ್ದಾರೆ.
* ಕಮಲ್ ಹಾಸನ್ ಪದ್ಮಶ್ರೀ, ಪದ್ಮ ಭೂಷಣ ಸೇರಿದಂತೆ ಇದುವರೆಗೂ 4 ನ್ಯಾಷನಲ್ ಅವಾರ್ಡ್, 19 ಫಿಲ್ಮ್ ಫೇರ್ ಅವಾರ್ಡ್, 9 ತಮಿಳು ಪ್ರಶಸ್ತಿಗಳನ್ನು ಪಡೆದಿದ್ದಾರೆ. '
* ಇವರ ಎಂಟು ಸಿನಿಮಾಗಳು ಆಸ್ಕರ್ ಗೆ ನಾಮಿನೇಟ್ ಆಗಿವೆ.
*ಮಕ್ಕಲ್ ನಿಧಿ ಮಯ್ಯಮ್ ಎನ್ನುವ ರಾಜಕೀಯ ಪಕ್ಷವೊಂದನ್ನು ಕಟ್ಟಿದ್ದಾರೆ. ನ್ಯಾಯಕ್ಕಾಗಿ ಜನರ ವೇದಿಕೆ ಎಂದರ್ಥ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.