ತಾನು ಓದಿದ ಶಾಲೆಗೆ ಸಹಾಯ ಮಾಡಬೇಕೆಂದು ಆಸೆ ಹೊತ್ತು 'ಕನ್ನಡದ ಕೋಟ್ಯಧಿಪತಿ'ಗೆ ಬಂದಿದ್ದ ಸಾಲಿಗ್ರಾಮ ತೇಜಸ್ ನುಡಿದಂತೆ ನಡೆದುಕೊಂಡಿದ್ದಾನೆ. 

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಕೋಟ್ಯಧಿಪತಿ' ವಿಶೇಷ ಸಂಚಿಕೆ ಮಾಡಲಾಗಿತ್ತು. ಈ ಸಂಚಿಕೆಗೆ ರಾಜ್ಯದ ಬೇರೆ ಬೇರೆ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳು ಭಾಗವಹಿಸಿದ್ದರು.  ಕಟ್ಟಾಯ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಓದುತ್ತಿರುವ ತೇಜಸ್ ಹಾಟ್ ಸೀಟ್ ಗೆ ಬಂದು 6. 40, 000 ಗೆದ್ದು ತನ್ನ ಶಾಲೆಗೆ ಸ್ವಲ್ಪ ಹಣವನ್ನು ನೀಡಿದ್ದಾನೆ. 

ಪಾಣಿಪತ್: ಅರ್ಜುನ್ ನಲ್ಲಿ ಧಮ್ ನಹೀ ಅಂತಿದ್ದಾರೆ ನೆಟ್ಟಿಗರು

ತೇಜಸ್ ಮೂಲತಃ ಸಾಲಿಗ್ರಾಮದ ಕೆಡಗ ಗ್ರಾಮದವರು. ತಂದೆ ತಾಯಿ ಕೂಲಿ ಮಾಡಿ ಜೀವನ ಸಾಗಿಸುವವರು. ಹಾಗಾಗಿ ತೇಜಸ್ ಸಂಬಂಧಿಕರ ಮನೆಯಲ್ಲಿ ಓದುತ್ತಿದ್ದಾನೆ. 

ಕೋಟ್ಯಾಧಿಪತಿಯಲ್ಲಿ ಗೆದ್ದ ಹಣದಿಂದ ತಾಯಿಗೆ ಆಪರೇಶನ್ ಮಾಡಿಸಬೇಕು ಹಾಗೂ ಶಾಲೆಗೆ ಕಾಂಪೌಂಡ್ ಇಲ್ಲ. ಅದನ್ನು ಕಟ್ಟಿಸಬೇಕು ಎಂದು ಹೇಳಿದ್ದರು. ಅದೇ ರೀತಿ ಗೆದ್ದ ಹಣದಲ್ಲಿ ಒಂದಷ್ಟು ಮೊತ್ತವನ್ನು ಶಾಲೆಗೆ ನೀಡಿದ್ದಾನೆ. ನಿಖರವಾದ ಮೊತ್ತದ ಬಗ್ಗೆ ಇನ್ನೂ ತಿಳಿದು ಬಂದಿಲ್ಲ. ತೇಜಸ್ ಈ ಕೆಲಸ ಸಾರ್ವಜನಿಕ ಮೆಚ್ಚುಗೆಗೆ ಕಾರಣವಾಗಿದೆ.