
ಬಾಲಿವುಡ್ ಮಾಸ್ ಮ್ಯಾನ್ ಹಾಗೂ ಫ್ಯಾಮಿಲಿ ಮ್ಯಾನ್ ಎಂದು ಖ್ಯಾತಿ ಪಡೆದಿರುವ ಅಜಯ್ ದೇವಗನ್ ಚಿತ್ರರಂಗದಲ್ಲಿ ಎಷ್ಟೇ ಬ್ಯುಸಿ ಇದ್ದರೂ ಫ್ಯಾಮಿಲಿಗೆ ಹೆಚ್ಚಾಗಿ ಪ್ರಾಮುಖ್ಯತೆ ನೀಡುತ್ತಾರೆ. ಫ್ಯಾಮಿಲಿ ಜೊತೆ ಹೆಚ್ಚು ಸಮಯ ಕಳೆಯುತ್ತಾರೆ.
ಅಜಯ್-ಕಾಜೋಲ್ ಸುಖ ಸಂಸಾರದ ಬಗ್ಗೆ ಯಾರಿಗೂ ಗೊತ್ತಿರದ ಗುಟ್ಟು!
ಅಜಯ್ ದೇವಗನ್ ಮುದ್ದು ಮಗ ಯುಗ್ ಜೊತೆ Ajmer Sharif ದರ್ಗಾಗೆ ಭೇಟಿ ನೀಡಿದ್ದಾರೆ. ಸ್ಟಾರ್ ನಟನನ್ನು ಕಂಡು ಅಭಿಮಾನಿಗಳು ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದಿದ್ದಾರೆ. ಆದರೆ ಇದರಿಂದ ಯುಗ್ ಗೆ ಸ್ವಲ್ಪ ಕಿರಿಕಿರಿಯಾಗಿದ್ದು ಅಜಯ್ ಅಭಿಮಾನಿಗಳ ಮೇಲೆ ಗರಂ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬಾಲಿವುಡ್ ಸೆಲೆಬ್ರಿಟಿಗಳ ಏರ್‌ಪೋರ್ಟ್ ಲುಕ್ ವೈರಲ್ ಅಗುತ್ತದೆ. ಈ ಹಿಂದೆ ಅಜಯ್ ಪುತ್ರಿ ಧರಿಸಿದ ಉಡುಪಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಅಗುತ್ತಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಅಜಯ್ 'ಟೋಟಲ್ ಧಮಾಲ್' ಚಿತ್ರ ಪ್ರಚಾರದಲ್ಲಿ ಮಾಧ್ಯಮಗಳ ಮುಂದೆ ರಿಯಾಕ್ಟ್ ಮಾಡಿದ್ದರು. 'ನನ್ನನ್ನು ನೀವು ಜಡ್ಜ್ ಮಾಡಬಹುದು ಆದರೆ ನನ್ನ ಮಕ್ಕಳನ್ನಲ್ಲ. ಕಾಜೋಲ್ ಹಾಗೂ ನಾನು ಸಿನಿಮಾದವರಾಗಿರುವುದರಿಂದ ನಮ್ಮ ಜೀವನದಲ್ಲಿ ಇದೆಲ್ಲಾ ಮಾಮೂಲಿ. ಅದರೆ ಮಕ್ಕಳ ಉಡುಗೆ-ನಡಿಗೆ ಬಗ್ಗೆ ಮಾತನಾಡಿದರೆ ಯಾರಿಗೆ ತಾನೆ ಕೋಪ ಬರುವುದಿಲ್ಲ' ಎಂದು ಗರಂ ಆಗಿ ಉತ್ತರಿಸಿದ್ದರು.
ಕಳೆದ ವರ್ಷ ತೆರೆ ಕಂಡ 'ರೇಡ್' ಚಿತ್ರ ಬಾಕ್ಸ್ ಆಫೀಸ್ ಕಲೆಕ್ಷನ್ ಮುಟ್ಟಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.