ಬಾಲಿವುಡ್‌ ನಲ್ಲಿ ಮತ್ತೊಂದು ಬ್ರೇಕ್ ಅಪ್, ಬೇರೆಯಾದ ತಮನ್ನಾ – ವಿಜಯ್ ವರ್ಮ?

Published : Mar 04, 2025, 04:55 PM ISTUpdated : Mar 04, 2025, 05:36 PM IST
ಬಾಲಿವುಡ್‌ ನಲ್ಲಿ ಮತ್ತೊಂದು ಬ್ರೇಕ್ ಅಪ್, ಬೇರೆಯಾದ ತಮನ್ನಾ – ವಿಜಯ್ ವರ್ಮ?

ಸಾರಾಂಶ

ಬಾಲಿವುಡ್ ನಟಿ ತಮನ್ನಾ ಭಾಟಿಯಾ ಮತ್ತು ನಟ ವಿಜಯ್ ವರ್ಮಾ ಪ್ರೇಮ ಸಂಬಂಧ ಮುರಿದುಬಿದ್ದಿದೆ. 2023ರಲ್ಲಿ 'ಲಸ್ಟ್ ಸ್ಟೋರೀಸ್ 2' ಚಿತ್ರದಲ್ಲಿ ಒಟ್ಟಿಗೆ ನಟಿಸಿದ ನಂತರ ಪ್ರೀತಿ ಮೊಳಕೆಯೊಡೆದಿತ್ತು. ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿನ ಫೋಟೋಗಳನ್ನು ಡಿಲೀಟ್ ಮಾಡಿರುವುದು ಅನುಮಾನಕ್ಕೆ ಕಾರಣವಾಗಿತ್ತು. ತಮನ್ನಾ ಕುಂಭಮೇಳಕ್ಕೆ ಒಬ್ಬಂಟಿಯಾಗಿ ಭೇಟಿ ನೀಡಿದ್ದು, ಇಬ್ಬರೂ ತಮ್ಮ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ಇನ್ನಷ್ಟೇ ಬರಬೇಕಿದೆ.

ಬಾಲಿವುಡ್ ನಲ್ಲಿ ಮತ್ತೊಂದು ಬ್ರೇಕ್ ಅಪ್ ಸುದ್ದಿ ಕೇಳಿ ಬಂದಿದೆ. ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಹಾಗೂ ಬಾಲಿವುಡ್ ನಟ ವಿಜಯ್ ವರ್ಮಾ ದೂರವಾಗಿದ್ದಾರೆ ಎನ್ನಲಾಗ್ತಿದೆ. ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಮದುವೆ ಆಗ್ತಾರೆ ಎನ್ನಲಾಗಿತ್ತು.  ಇಬ್ಬರು ಕೈ ಕೈ ಹಿಡಿದು ಸುತ್ತಾಡಿದ್ದರು. ಆದ್ರೀಗ ಬಾಲಿವುಡ್ನಲ್ಲಿ ಮತ್ತೊಂದು ಅದ್ಧೂರಿ ಮದುವೆ ನಿರೀಕ್ಷೆಯಲ್ಲಿದ್ದವರಿಗೆ ನಿರಾಶೆಯಾಗಿದೆ. ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಬ್ರೇಕ್ ಅಪ್ ಮಾಡ್ಕೊಂಡಿದ್ದಾರೆ ಎನ್ನುವ ಸುದ್ದಿ ಚುರುಕು ಪಡೆದಿದೆ. ವಾರಗಳ ಹಿಂದೆಯೇ ಇಬ್ಬರು ಬೇರೆಯಾಗಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡ್ತಿದೆ. ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ, ಮಾತುಕತೆ ಮೂಲಕ ಬೇರ್ಪಟ್ಟಿದ್ದಾರಂತೆ. ತಮನ್ನಾ ಹಾಗೂ ವಿಜಯ್ ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿಯಿದ್ದಾರೆ. ಹಾಗಾಗಿ ಇಬ್ಬರೂ ದಾರಿ ಬದಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಬ್ಬರು ಒಳ್ಳೆ ಸ್ನೇಹಿತರಾಗಿ ಇರುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. 

ತಮನ್ನಾ – ವಿಜಯ್ ಲವ್ ಸ್ಟೋರಿ : 2023 ರಲ್ಲಿ ಲಸ್ಟ್ ಸ್ಟೋರೀಸ್ 2 ನಲ್ಲಿ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇಲ್ಲಿಯೇ ಇಬ್ಬರ ಮಧ್ಯೆ ಪ್ರೀತಿ ಚಿಗುರಿತ್ತು. ಆಗಾಗ ಒಟ್ಟಿಗೆ ಕಾಣಿಸಿಕೊಳ್ತಿದ್ದ ಜೋಡಿ ನೋಡಿ ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದರು. ನಂತ್ರ ಇಬ್ಬರು ಮದುವೆ ಆಗ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ವಿಜಯ್ ವರ್ಮಾ ಹಾಗೂ ತಮನ್ನಾ, ನ್ಯೂ ಇಯರ್ ವೆಲ್ ಕಂ ಮಾಡಲು ಒಟ್ಟಿಗೆ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಅದ್ರ ಕೆಲ ಫೋಟೋಗಳನ್ನು ವಿಜಯ್ ಹಂಚಿಕೊಂಡಿದ್ರು. ಅಲ್ಲದೆ  ಶುಭಂಕರ್ ಮಿಶ್ರಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ, ವಿಜಯ್ ಸಂಬಂಧದಲ್ಲಿ ಯಾವುದೇ ಬಂಧನ ಇರಬಾರದು ಎಂದಿದ್ದರು. ಒಂದು ಸಂಬಂಧ ಗಟ್ಟಿಯಾಗಲು ಅನೇಕ ದಿನಗಳು ಬೇಕು. ಆದ್ರೆ ಅವ್ರ ಜೊತೆ ಹೊರಗೆ ಸುತ್ತಾಡದೆ, ಮನಸ್ಸಿನ ಭಾವನೆಯನ್ನು ಹಂಚಿಕೊಳ್ಳದೆ , ಕದ್ದುಮುಚ್ಚಿ ಓಡಾಡಲು ಸಾಧ್ಯವಿಲ್ಲ. ನಮ್ಮ ಸಂಬಂಧವನ್ನು ಪಬ್ಲಿಕ್ ಮಾಡಿದ್ದೇವೆ. ಆದ್ರೆ ಈಗ್ಲೂ ಅದು ಪ್ರೈವೇಟ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗದ ನೂರಾರು ಫೋಟೋಗಳು ನಮ್ಮ ಜೊತೆಗಿವೆ ಎಂದಿದ್ದರು. 

ಪತಿಯಿಂದ ದೂರವಿರೋ ಮೌನಿ ರಾಯ್… ಸೋಶಿಯಲ್ ಮೀಡಿಯಾದಲ್ಲಿ ತೋಡಿಕೊಂಡ್ರು ವಿರಹ ವೇದನೆ

ಕುಂಭಮೇಳಕ್ಕೆ ಒಂಟಿಯಾಗಿ ಬಂದಿದ್ದ ತಮನ್ನಾ : ತಮನ್ನಾ ಹಾಗೂ ವಿಜಯ್ ವರ್ಮಾ ಬೇರೆಯಾಗಿದ್ದಾರೆ ಎನ್ನುವ ಅನುಮಾನ ಅನೇಕ ದಿನಗಳಿಂದ ಅಭಿಮಾನಿಗಳನ್ನು ಕಾಡ್ತಿದೆ. ಇದಕ್ಕೆ ಕಾರಣ ಸೋಶಿಯಲ್ ಮೀಡಿಯಾ. ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಇನ್ಸ್ಟಾಗ್ರಾಮ್ ನಲ್ಲಿ ಒಟ್ಟಿಗಿರುವ ಫೋಟೋ ಹಂಚಿಕೊಳ್ಳುವುದನ್ನು ನಿಲ್ಲಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿದ್ದ ಫೋಟೋಗಳು ಡಿಲೀಟ್ ಆಗಿವೆ. ಇದು ಇಬ್ಬರು ಬೇರೆಯಾಗಿದ್ದಾರೆ ಎಂಬುದಕ್ಕೆ ಸ್ಪಷ್ಟನೆ ನೀಡ್ತಿದೆ. ಇದಲ್ಲದೆ ತಮನ್ನಾ ಭಾಟಿಯಾ ಪ್ರಯಾಗರಾಜ್ ಮಹಾ ಕುಂಭ ಮತ್ತು ಇತರ ಕೆಲವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ್ದರು. ಆದ್ರೆ ಅವ್ರ ಜೊತೆ ವಿಜಯ್ ವರ್ಮಾ ಇರಲಿಲ್ಲ. ಇದು ಕೂಡ ಫ್ಯಾನ್ಸ್ ತಲೆಯಲ್ಲಿ ಅನುಮಾನದ ಹುಳು ಬೆಳೆಯಲು ಕಾರಣವಾಗಿತ್ತು. 

ನಗುವ ನಯನ... ಹಾಡುವ ಮೂಲಕ ಕನ್ನಡಿಗರ ಮನಗೆದ್ದ ಬಾಲಿವುಡ್​ ನಟ ಅನಿಲ್​ ಕಪೂರ್​:

ಸಿನಿಮಾದಲ್ಲಿ ತಮನ್ನಾ ಬ್ಯುಸಿ : ಸದ್ಯ ತಮನ್ನಾ ಒಡೇಲಾ 2 ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ತಮನ್ನಾ ಹಾಗೂ ವಸಿಷ್ಟ ಸಿಂಹ ಒಟ್ಟಾಗಿ ಒಡೇಲಾ-2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನ ಮಾಡಿದ ಬಳಿಕ ಚಿತ್ರದ ಟೀಸರ್‌ಅನ್ನು ಪ್ರಯಾಗ್‌ರಾಜ್‌ನಲ್ಲಿಯೇ ಅನಾವರಣ  ಮಾಡಲಾಗಿದೆ. ಇದಲ್ಲದೆ ಡೇರಿಂಗ್ ಪಾರ್ಟನರ್ಸ್ ವೆಬ್ ಸೀರಿಸ್ನಲ್ಲಿಯೂ ತಮನ್ನಾ ಕಾಣಿಸಿಕೊಳ್ಳಲಿದ್ದಾರೆ. ಸ್ತ್ರೀ 3ನಲ್ಲಿ ಮಿಂಚಿದ್ದ ತಮನ್ನಾ, ಜೈಲರ್ 2ನಲ್ಲಿಯೂ ನಟಿಸಲಿದ್ದಾರೆ. ಇತ್ತ ವಿಜಯ್ ವರ್ಮಾ ಕೂಡ ಸಿನಿಮಾದಲ್ಲಿ ಬ್ಯುಸಿಯಿದ್ದು, ಬ್ರೇಕ್ ಅಪ್ ಬಗ್ಗೆ ಜೋಡಿಯಿಂದ ಯಾವುದೇ ರಿಯಾಕ್ಷನ್ ಬಂದಿಲ್ಲ.  
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?