ನಟಿ ತಮನ್ನಾ ಭಾಟಿಯಾ ಸದ್ಯ ಜೈಲರ್ ಸಿನಿಮಾದ ಕಾವಾಲಾ ಹಾಡಿನ ಮೂಲಕ ಸದ್ದು ಮಾಡುತ್ತಿದ್ದಾರೆ. ಈ ಹಾಡಿನಲ್ಲಿ ತಮನ್ನಾ ಮಾಡಿರುವ ಡಾನ್ಸ್ ವೈರಲ್ ಆಗಿದೆ.
ಮಿಲ್ಕಿ ಬ್ಯೂಟಿ ತಮನ್ನಾ ಲಸ್ಟ್ ಸ್ಟೋರಿ 2 ಬಳಿಕ ಜೈಲರ್ ಸಿನಿಮಾ ಮೂಲಕ ಸದ್ದು ಮಾಡುತ್ತಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ತಮನ್ನಾ ನಟಿಸಿದ್ದು ಸದ್ಯ ಹಾಡು ರಿಲೀಸ್ ಆಗಿದೆ. ಕಾವಾಲಾ ಸಾಂಗ್‌ಗೆ ಹೆಜ್ಜೆ ಹಾಕಿರುವ ತಮನ್ನಾ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ‘ಕಾವಾಲಾ..’ ಹಾಡು ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸುತ್ತಿದೆ. ಈ ಹಾಡಿನಲ್ಲಿ ತಮನ್ನಾ ಭಾಟಿಯಾ ಡಾನ್ಸ್‌ಗೆ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಈ ಹಾಡಿನ ಹವಾ ಎಷ್ಟರ ಮಟ್ಟಿಗೆ ಇದೆ ಎಂದರ ತಮನ್ನಾ ಹೋದಲ್ಲಿ ಬಂದಲ್ಲ ಈ ಹಾಡಿಗೆ ಹೆಜ್ಜೆ ಹಾಕುವಂತೆ ಕೇಳುತ್ತಿದ್ದಾರೆ. ಇತ್ತೀಚೆಗೆ ಮುಂಬೈ ಏರ್ಪೋರ್ಟ್ನಲ್ಲಿ ಅವರು ಅಭಿಮಾನಿಯ ಜೊತೆ ‘ಕಾವಾಲಾ’ ಹಾಡಿಗೆ ಹೆಜ್ಜೆ ಹಾಕಿ ಗಮನ ಸೆಳೆಸಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ. ಅಭಿಮಾನಿಯ ಜೊತೆ ತಮನ್ನಾ ಅವರು ಕೂಲ್ ಆಗಿ ನಡೆದುಕೊಂಡಿದ್ದಾರೆ.
ತಮನ್ನಾ ಏರ್ಪೋರ್ಟ್ ಒಳಗೆ ತೆರಳುತ್ತಿದ್ದರು. ಆ ವೇಳೆ ಪಾಪರಾಜಿಗಳು ಒಂದು ಮನವಿ ಮಾಡಿಕೊಂಡರು. ಅಭಿಮಾನಿಯೊಬ್ಬರ ಡ್ಯಾನ್ಸ್ ನೋಡಿಕೊಂಡು ಹೋಗುವಂತೆ ತಮನ್ನಾಗೆ ರಿಕ್ವೆಸ್ಟ್ ಮಾಡಲಾಯಿತು. ‘ಅಯ್ಯೋ ನನ್ನ ವಿಮಾನ ತಪ್ಪಿಹೋಗುತ್ತೆ..’ ಎಂದು ತಮನ್ನಾ ಹೇಳಿದರು. ಆಗ ಅಲ್ಲಿದ್ದ ಅಭಿಮಾನಿಯೊಬ್ಬರು ‘ಕಾವಾಲಾ..’ ಹಾಡಿಗೆ ಸ್ಟೆಪ್ ಹಾಕಿದರು. ಅವರ ಜೊತೆ ತಮನ್ನಾ ಕೂಡ ಡ್ಯಾನ್ಸ್ ಮಾಡಿ ಗಮನ ಸೆಳೆದರು. ‘ಇವರು ನನಗಿಂತ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ’ ಎಂದು ಅಭಿಮಾನಿಗೆ ತಮನ್ನಾ ಮೆಚ್ಚುಗೆ ಸೂಚಿಸಿದರು.
Lust Stories 2 : ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಪಡೆದ ಸಂಭಾವನೆ ಎಷ್ಷು?
ತಮನ್ನಾ ಸಿನಿಮಾಗಳ ಬಗ್ಗೆ ಹೇಳುವುದಾದರೆ ಲಸ್ಟ್ ಸ್ಟೋರಿ 2 ಮೂಲಕ ಕೊನೆಯದಾಗಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸುಜೋಯ್ ಘೋಷ್ ನಿರ್ದೇಶನದಲ್ಲಿ ತಮನ್ನಾ ಲಸ್ಟ್ ಸ್ಟೋರಿ 2ನಲ್ಲಿ ನಟಿಸಿದ್ದಾರೆ. ಜೀ ಕರ್ದಾ ಸಿನಿಮಾದಲ್ಲೂ ತಮನ್ನಾ ನಟಿಸಿದ್ದು ಈಗಾಗಲೇ ಒಟಿಟಿಯಲ್ಲಿ ರಿಲೀಸ್ ಆಗಿದೆ.
ಕುಟುಂಬದ ಜೊತೆ 'ಲಸ್ಟ್ ಸ್ಟೋರಿ' ನೋಡಿದ ಅನುಭವ ಬಿಚ್ಚಿಟ್ಟ ನಟಿ ತಮನ್ನಾ.
ಸದ್ಯ ತಮನ್ನಾ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಜೊತೆ ನಟಿಸಿರುವ ಭೋಲಾ ಶಂಕರ್ ಸಿನಿಮಾ ಕೂಡ ರಿಲೀಸ್‌ಗೆ ರೆಡಿಯಾಗಿದೆ. ಈ ಸಿನಿಮಾ ಜೊತೆಗೆ ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗೆ ಜೈಲರ್ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾದಲ್ಲಿ ಕನ್ನಡದ ಸ್ಟಾರ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮೊದಲ ಬಾರಿಗೆ ಸೂಪರ್ ಸ್ಟಾರ್ ಜೊತೆ ತೆರೆಹಂಚಿಕೊಂಡಿದ್ದಾರೆ.