ಸುಧಾಮೂರ್ತಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಬಿಗ್‌ ಬಿ

By Web Desk  |  First Published Nov 25, 2019, 11:45 AM IST

'ಕೌನ್ ಬನೇಗಾ ಕರೋಡ್‌' ಯಲ್ಲಿ ಸುಧಾಮೂರ್ತಿ | ಅಮಿತಾಬ್‌ಗೆ ಕೌದಿಯನ್ನು ಉಡುಗೊರೆಯಾಗಿ ಕೊಟ್ಟ ಸುಧಾಮೂರ್ತಿ | ಸುಧಾಮೂರ್ತಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಬಿಗ್‌ಬಿ 


ಕರ್ನಾಟಕದ ಹೆಮ್ಮೆ, ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥಾಪಕಿ ಸುಧಾಮೂರ್ತಿ ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಭಾಗವಹಿಸಿದ್ದರು.  ಆಗ ಅಮಿತಾಬ್ ಅವರನ್ನು ಬರಮಾಡಿಕೊಂಡ ರೀತಿ ಮನಮುಟ್ಟುವಂತಿತ್ತು.  ಸುಧಾ ಮೂರ್ತಿ ವೇದಿಕೆಗೆ ಬಂದ ಕೂಡಲೇ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಬಿಗ್ ಬಿ ನಡೆಗೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತವಾಗಿದೆ. 

 

In honor of our , says that we take pride in saying we are from the country where hails. An unmissable episode awaits you in the at 9 PM only on Sony. pic.twitter.com/nfwED1Mfq3

— Sony TV (@SonyTV)

Tap to resize

Latest Videos

undefined

ಸೋನಿ ಟಿವಿ ಈಗಾಗಲೇ ಪ್ರೋಮೋ ಬಿಟ್ಟಿದ್ದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸುಧಾಮೂರ್ತಿಯವರ ಸಾಧನೆ, ಸಮಾಜ ಸೇವೆಯನ್ನು ಪ್ರೇಕ್ಷಕರಿಗೆ ವಿವರಿಸಿದ್ದಾರೆ. ಇದೇ ಸಂದರ್ಭದಲ್ಲಿ ಸುಧಾಮೂರ್ತಿ ಅಮಿತಾಬ್‌ಗೆ ಕೌದಿಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. 

ಕನ್ನಡದ ಹೆಮ್ಮೆ ಸುಧಾಮೂರ್ತಿ ಕೆಬಿಸಿಲಿ; ಅಮಿತಾಬ್‌ಗೆ ಸಿಕ್ತು ದೇವದಾಸಿಯರ ಕೌದಿ !

ಸುಧಾಮೂರ್ತಿ ಹೆಸರೇ ಒಂದು ಸ್ಫೂರ್ತಿ. ಇನ್ಫೋಸಿಸ್ ಫೌಂಡೇಶನ್ ಇದುವರೆಗೂ ಸಾಕಷ್ಟು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.  ಇದುವರೆಗೂ 60 ಸಾವಿರ ಲೈಬ್ರರಿಗಳನ್ನು, 16 ಸಾವಿರ ಶೌಚಾಲಯಗಳನ್ನು ಕಟ್ಟಿಸಿದ್ದಾರೆ. ದೇವದಾಸಿಯರಿಗೆ ಹೊಸ ಬದುಕು ಕಟ್ಟಿ ಕೊಟ್ಟಿದ್ದಾರೆ. ಅದೆಷ್ಟೋ ಹೆಣ್ಣುಮಕ್ಕಳಿಗೆ ದಾರಿದೀಪವಾಗಿದ್ದಾರೆ.  ಇನ್ಫೋಸಿಸ್ ಕಂಪನಿ ಸ್ತಾಪಿಸಿ ಬರೀ ದುಡ್ಡು ಮಾಡಿದ್ದರೆ ಇಷ್ಟು ಹೆಸರು ಮಾಡುತ್ತಿರಲಿಲ್ಲವೇನೋ. ಆದರೆ ಅವರ ಸಾಮಾಜಿಕ ಕೆಲಸ ಅವರನ್ನು ಇನ್ನೂ ಮೇಲಕ್ಕೇರಿಸಿದೆ. 

ಕೆಬಿಸಿ 11 ಅಂತಿಮ ಘಟ್ಟಕ್ಕೆ ತಲುಪಿದ್ದು ಸುಧಾಮೂರ್ತಿಯವರನ್ನು ಕರೆಸಿ ಸುಖಾಂತ್ಯ ಮಾಡುತ್ತಿದೆ. ಕೆಬಿಸಿ ಸೀಟ್‌ನಲ್ಲಿ ಸುಧಾಮೂರ್ತಿ ಕುಳಿತಿದ್ದು ಕನ್ನಡದ ಹೆಮ್ಮೆಯನ್ನು ಹೆಚ್ಚಿಸಿದೆ.  

ನವೆಂಬರ್ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!