
ನಟಿಯಾಗಿದ್ದ ಸ್ವರಾ ಭಾಸ್ಕರ್ ಈಗ ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್ ಪತ್ನಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಹೆಣ್ಣುಮಕ್ಕಳ ರಕ್ಷಣೆ, ಅವರ ಸ್ವಾತಂತ್ರ, ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಹೋರಾಟ ಎಂದೆಲ್ಲಾ ಭಾಷಣ ಬೀಗುತ್ತಾ ಹೆಸರು ಗಿಟ್ಟಿಸಿಕೊಂಡಾಕೆ, ಮದುವೆಯಾದ ಬಳಿಕ ಸ್ತ್ರೀ ಶಿಕ್ಷಣದ ವಿರೋಧಿ ಎಂದೇ ಫೇಮಸ್ ಆಗಿರುವ ಮೌಲಾನಾ ಸಜ್ಜದ್ ನೊಮಾನಿ ಅವರನ್ನು ಭೇಟಿಯಾಗಿ ಅವರ ಬಗ್ಗೆ ಹಾಡಿ ಕೊಂಡಾಡಿದ್ದರು. ಇದರಿಂದ ಸಾಕಷ್ಟು ಟ್ರೋಲ್ಗೆ ಒಳಗಾಗುತ್ತಲೇ ಇದ್ದಾರೆ. ನಾನು ಜಾತ್ಯಾತೀತದಲ್ಲಿ ನಂಬಿಕೆ ಇಟ್ಟವಳು. ಭಾರತದ ಸಂವಿಧಾನದಲ್ಲಿ ನಂಬಿಕೆ ಇಟ್ಟವಳು ಎಂದು ಭಾಷಣ ಮಾಡಿದ್ದ ಸ್ವರಾ, ನಟಿಯಾಗಿದ್ದ ಸಂದರ್ಭದಲ್ಲಿ ಬಹುತೇಕ ನಗ್ನ ಆಗಿದ್ದರ ವಿಡಿಯೋಗಳು ಶೇರ್ ಆಗಿದ್ದವು. ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿದ್ದ ಸಿಎಎ ವಿರೋಧ ಪ್ರತಿಭಟನೆಯಲ್ಲಿ ಮುಂಚೂಣಿ ವಹಿಸಿದ್ದ ಸ್ವರಾ ಅವರು, ನನ್ನ ಬಳಿ ಆಧಾರ್ ಕಾರ್ಡ್ ಇಲ್ಲ, ಪಾಸ್‌ಪೋರ್ಟ್ ಇಲ್ಲ, ರೇಷನ್ ಕಾರ್ಡ್ ಇಲ್ಲ, ಅಡ್ರೆಸ್ ಪ್ರೂಫ್ ಇಲ್ಲ, ಹುಟ್ಟಿದ ಪ್ರಮಾಣ ಪತ್ರ ಇಲ್ಲ... ಎನ್ನುವ ಮೂಲಕ ಮತ್ತಷ್ಟು ಟೀಕೆ ಎದುರಿಸಿದ್ದರು.
ಹೀಗೆ ಎಡವಟ್ಟು ಮಾಡಿಕೊಂಡು ಟ್ರೋಲ್ ಆಗುತ್ತಿರುವ ಮಾಜಿ ನಟಿ, ಇದೀಗ ಔರಂಗಜೇಬ್‌ನ ಚಿತ್ರಹಿಂಸೆಯನ್ನು ನಕಲಿ ಎನ್ನುವ ಮೂಲಕ, ಅದನ್ನು ಕುಂಭಮೇಳದ ಕಾಲ್ತುಳಿತಕ್ಕೆ ಹೋಲಿಕೆ ಮಾಡಿದ್ದಾರೆ. ಅಷ್ಟಕ್ಕೂ ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಛಾವ' ಚಿತ್ರ ಬ್ಲಾಕ್ಬಸ್ಟರ್ ಆಗಿ ನಾಗಾಲೋಟದಿಂದ ಓಡುತ್ತಿದೆ. ನಮ್ಮ ಇತಿಹಾಸವನ್ನು ತಿರುಚಿ ಪಠ್ಯಪುಸ್ತಕದಲ್ಲಿ ಬರೆದಿರುವ ಅಂಶಗಳು ಎಷ್ಟು ಮೋಸ ಎನ್ನುವಂಥ ಸತ್ಯ ಘಟನೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಛತ್ರಪತಿ ಶಿವಾಜಿ ಪುತ್ರ ಸಾಂಬಾಜಿಗೆ ಕ್ರೂರಿ ಔರಂಗಜೇಬ್ ನೀಡಿರುವ ಚಿತ್ರಹಿಂಸೆಯ ಕರಾಳ ಸ್ವರೂಪ ಬಟಾಬಯಲಾಗಿದೆ. ಈ ಸತ್ಯವನ್ನು ಅರಗಿಸಿಕೊಳ್ಳದ ಕೆಲವು ಮನಸ್ಸುಗಳು ಇಂದಿಗೂ ಔರಂಗಜೇಬ್ ಪರವೇ ನಿಂತಿರುವುದಕ್ಕೆ ಬೇರೆ ಸಾಕ್ಷಿ ಬೇಕಿಲ್ಲ.
'ಜಾತ್ಯತೀತ' ಸ್ವರಾ ಭಾಸ್ಕರ್ ಖುಲ್ಲಂಖುಲ್ಲಾ ವಿಡಿಯೋ ಕೆದಕುತ್ತಲೇ ಹೀಗೆಲ್ಲಾ ರೋಸ್ಟ್ ಮಾಡೋದಾ ಯೂಟ್ಯೂಬರ್ ಶಬನಮ್?
ಇದೀಗ ಈ ಚಿತ್ರಹಿಂಸೆಗೆ ವ್ಯಂಗ್ಯವಾಡಿದ್ದಾರೆ ಈ ಮಾಜಿ ನಟಿ ಸ್ವರಾಭಾಸ್ಕರ್. 'ಛಾವ' ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಕುಂಭಮೇಳದ ಕಾಲ್ತುಳಿತಕ್ಕೆ ಹೋಲಿಸಿದ್ದಾರೆ. "ಕುಂಭಮೇಳದ ಕಾಲ್ತುಳಿತ ಪ್ರಕರಣ ನಡೆದು ಜನ ಸತ್ತರೂ ಬಳಿಕ ಜೆಸಿಬಿ ಬಳಸಿ ಶವಗಳನ್ನು ಮುಚ್ಚಿ ಹಾಕಿದರೂ ಎನ್ನುವ ಆರೋಪಕ್ಕಿಂತ 500 ವರ್ಷಗಳ ಹಿಂದೆ ಕೊಂಚ ಕಾಲ್ಪನಿಕವಾಗಿ ವೈಭವಿಕರಿಸಿ ತೋರಿಸಿರುವ ಚಿತ್ರಹಿಂಸೆ ನೋಡಿದರೆ ಇದೆಂಥಹ ಮೈಂಡ್‌ಸೆಟ್ ಎನಿಸುತ್ತದೆ" ಎಂದು ಬರೆದುಕೊಂಡಿದ್ದಾರೆ. ಇದರ ಅರ್ಥ ಔರಂಗಜೇಬ್ ಚಿತ್ರಹಿಂಸೆ ನೀಡಲಿಲ್ಲ. ಅದನ್ನು ಚಿತ್ರದಲ್ಲಿ ವೈಭವೀಕರಿಸಲಾಗಿದೆ ಎನ್ನುವ ಅರ್ಥದಲ್ಲಿ ಬರೆದುಕೊಂಡು ಔರಂಗಜೇಬ್ ಪರ ನಿಂತಿದ್ದಾರೆ ಸ್ವರಾ ಭಾಸ್ಕರ್!
ಈಕೆಯ ಪೋಸ್ಟ್ಗೆ ಹಲವಾರು ಮಂದಿ ಕಿಡಿ ಕಾರುತ್ತಿದ್ದಾರೆ. ನೀನೂ ಒಬ್ಬಳು ಹುಟ್ಟು ಹಿಂದೂ ಎನ್ನುವುದನ್ನು ಮರೆಯಬೇಡ ತಾಯೇ ಎಂದು ಹಲವರು ಹೇಳುತ್ತಿದ್ದಾರೆ. ನಿನ್ನ ಈಗಿನ ರೂಪ ನೋಡಿದರೆ ನೀನು ಯಾವ ರೀತಿಯ ಜೀವನ ನಡೆಸುತ್ತಿರುವಿ ಎನ್ನುವುದು ತಿಳಿದಿದೆ ಎಂದೆಲ್ಲಾ ತೀರಾ ವೈಯಕ್ತಿಕವಾಗಿರುವ ವಿಷಯವನ್ನೂ ಕಮೆಂಟ್ ಮೂಲಕ ಹೇಳುತ್ತಿದ್ದಾರೆ. 'ಗಾಂಧಿ ನಿನ್ನ ಕೊಲೆ ಮಾಡಿದವರು ಇನ್ನೂ ಬದುಕಿದ್ದಾರೆ..' ಎಂದು ಈಚೆಗೆ ಪೋಸ್ಟ್ ಮಾಡಿದ್ದ ಈಕೆಯ ಎಕ್ಸ್ ಅಕೌಂಟ್ ಡಿಲೀಟ್ ಮಾಡಲಾಗಿತ್ತು. ಸದ್ಯ ಇನ್ಸ್ಟಾಗ್ರಾಮ್ ಸೇರಿದಂತೆ ಇತರ ಕೆಲವು ಅಕೌಂಟ್ಗಳು ಚಾಲ್ತಿಯಲ್ಲಿದ್ದು, ಅದರಲ್ಲಿ ತಮ್ಮ ಭಾವನೆಗಳನ್ನು ಹರಿಬಿಡುತ್ತಿದ್ದಾರೆ.
ನನ್ನ ಬಟ್ಟೆ ರಾಷ್ಟ್ರಮಟ್ಟದ ಚರ್ಚೆ ಆಗತ್ತೆ ಎಂದು ಗೊತ್ತೇ ಇರ್ಲಿಲ್ಲ: ಸ್ವರಾ ಭಾಸ್ಕರ್ ವ್ಯಂಗ್ಯ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.