ಡ್ರಗ್ಸ್ ಮತ್ತು ಮನಿ ಲ್ಯಾಂಡರಿಂಗ್ ಕೇಸ್‌ನಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಮತ್ತು ರಾಣಾ ದಗ್ಗುಬಾಟಿ ಹಾಗೂ ನಿರ್ದೇಶಕ ಪೂರಿ ಜಗನ್ನಾಥ್ ವಿಚಾರಣೆ.
'ಗಿಲ್ಲಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ರಕುಲ್ ಪ್ರೀತ್ ಸಿಂಗ್ ಈಗ ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿಯೂ ಸಖತ್ ಬ್ಯುಸಿಯಾಗಿದ್ದಾರೆ. ಈ ನಡುವೆ ರಕುಲ್ ಬ್ಯಾಕ್ ಟು ಬ್ಯಾಕ್ ಇಡಿ ವಿಚಾರಣೆಯಲ್ಲಿ ಭಾಗಿಯಾಗುತ್ತಿದ್ದಾರೆ. ಅದೂ ನಾಲ್ಕು ವರ್ಷಗಳ ಹಿಂದೆ ನಡೆದಿರುವ ಘಟನೆಗೆ ಎನ್ನಲಾಗಿದೆ.
ಹೌದು! ನಾಲ್ಕು ವರ್ಷಗಳ ಹಿಂದೆ ಮಾದಕ ವಸ್ತು ಜಾಲದ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಆಗಸ್ಟ್ ತಿಂಗಳಿನಲ್ಲಿ ರಕುಲ್‌ಗೆ ಇಡಿ ವಿಚಾರಣೆಯಲ್ಲಿ ಭಾಗಿಯಾಗುವಂತೆ ನೋಟಿಸ್ ನೀಡಲಾಗಿತ್ತು. ಮಾದಸ ವಸ್ತು ಸೇವನೆ, ಸರಬರಾಜು ಮತ್ತು ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ರಕುಲ್ ಮಾತ್ರವಲ್ಲ ತೆಲುಗು ಚಿತ್ರರಂಗದ 10 ಮಂದಿಗೆ ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿ ಮಾಡಿದೆ ಎನ್ನಲಾಗಿದೆ.
2017ರಲ್ಲಿಯೂ ರಕುಲ್‌ಗೆ ಡ್ರಗ್ಸ್ ಪ್ರಕರಣದ ಬಗ್ಗೆ ವಿಚಾರಣೆ ನಡೆದಿತ್ತು. ಮಂಗಳವಾರ (ಆಗಸ್ಟ್ 31) ಹೈದರಾಬಾದ್ ಇಡಿ ಆಫೀಸ್‌ನಲ್ಲಿ ನಿರ್ದೇಶಕ ಪೂರಿ ಜಗನ್ನಾಥ್‌ಗೆ ಈ ಪ್ರಕರಣವಾಗಿ ವಿಚಾರಣೆ ನಡೆಯಿತ್ತು.
ಡ್ರಗ್ಸ್ ಮಾಫಿಯಾ: ನಟ ರಾಣಾ ದಗ್ಗುಬಾಟಿ ಮತ್ತು ನಟಿ ರಕುಲ್‌ಗೆ ನೋಟಿಸ್!30 ವರ್ಷದ ರಕುಲ್, ಕಡಿಮೆ ಅವಧಿಯಲ್ಲಿಯೇ 34 ಸಿನಿಮಾಗಳಲ್ಲಿ ಅಭಿನಯಿಸಿ ಐಷಾರಾಮಿ ಮನೆ ಹಾಗೂ ಕಾರು ಖರೀದಿಸಲು ಹೇಗೆ ಸಾಧ್ಯ ಎನ್ನುವುದು ನೆಟ್ಟಿಗರ ಪ್ರಶ್ನೆ ಆಗಿತ್ತು. ರಕುಲ್ ಈ ಪ್ರಕರಣದಲ್ಲಿ ಇರುವುದಿಲ್ಲ ಎಂದು ಈ ಹಿಂದೆಯೂ ನಟಿ ಸಮಂತಾ ಸಪೋರ್ಟ್ ಮಾಡಿದ್ದರು. ಸೆಪ್ಟೆಂಬರ್ 8ರಂದು ರಾಣಾ ದಗ್ಗುಬಾಟಿ, ಸೆಪ್ಟೆಂಬರ್ 9ರಂದು ಶ್ರೀನಿವಾಸ್ ರವಿತೇಜಾ, ಸಪ್ಟೆಂಬರ್ 13ರಂದು ಎಫ್ ಕ್ಲಬ್ ಮ್ಯಾನೇಜರ್ ಮತ್ತು ನವದೀಪ್‌ಗೆ, ಸೆಪ್ಟೆಂಬರ್ 15ರಂದು ತಾನಿಶ್‌ಗೆ ಹಾಗೂ ಸೆಪ್ಟೆಂಬರ್ 20ರಂದು ತರುಣ್ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ.