ಸುಶಾಂತ್ ಸಿಂಗ್ DP ಚೇಂಜ್: ಸ್ವರ್ಗಲೋಕದಲ್ಲಿ ಇಂಟರ್‌ನೆಟ್ ಎಂದ ನೆಟ್ಟಿಗರು

By Suvarna News  |  First Published Aug 21, 2021, 3:38 PM IST
  • ಸುಶಾಂತ್ ಸಿಂಗ್ ರಜಪೂತ್ ಫೇಸ್‌ಬುಕ್ ಡಿಪಿ ಚೇಂಜ್
  • ಸ್ವರ್ಗಲೋಕದಲ್ಲೂ ಇಂಟರ್‌ನೆಟ್ ಇದೆ ಎಂದ ನೆಟ್ಟಿಗರು

ನಟ ಸುಶಾಂತ್ ಸಿಂಗ್ ರಜಪೂತ್ ಅವರ ಫೇಸ್ಬುಕ್ ಪ್ರೊಫೈಲ್ ನಲ್ಲಿ ಬದಲಾವಣೆಗಳನ್ನು ಮಾಡಿರುವುದನ್ನು ಗಮನಿಸಿದ ಅವರ ಅಭಿಮಾನಿಗಳು ಗುರುವಾರ ಅಚ್ಚರಿಪಟ್ಟಿದ್ದಾರೆ. ದಿವಂಗತ ನಟನ ಡಿಪಿ ಅಪ್‌ಡೇಟ್ ಮಾಡಿದಂತೆ ಕಂಡುಬಂದಿದೆ ಎಂದು ಅವರ ಅಭಿಮಾನಿಗಳು ತಲೆ ಕೆರೆದುಕೊಳ್ಳುತ್ತಿದ್ದಾರೆ.

ಸುಶಾಂತ್ ಜೂನ್ 2020 ರಲ್ಲಿ ಸಾವನ್ನಪ್ಪಿದ್ದಾರೆ. ನಂತರ ಅವರ ತಂಡ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸ್ವಾಧೀನಪಡಿಸಿಕೊಂಡಿತು. ಅವರ ಮರಣದ ಎರಡು ದಿನಗಳ ನಂತರ, ಅವರ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡ ಒಂದು ಪೋಸ್ಟ್‌ನಲ್ಲಿ 'ನಿಮ್ಮಂತಹ ಅಭಿಮಾನಿಗಳು ಸುಶಾಂತ್‌ಗೆ ನಿಜವಾದ 'ಗಾಡ್‌ಫಾದರ್' ಆಗಿದ್ದರು. ಅವರಿಗೆ ನೀಡಿದ ಭರವಸೆಯಂತೆ, ಈ ಜಾಗವನ್ನು ಅವರ ಎಲ್ಲಾ ಆಲೋಚನೆಗಳು, ಕಲಿಕೆಗಳು, ಕನಸುಗಳು ಮತ್ತು ಶುಭಾಶಯಗಳ ಸಂಗ್ರಹವಾಗಿ ಪರಿವರ್ತಿಸಲಾಗಿದೆ, ಅವರು ಯಾವಾಗಲೂ ಜನರು ತಿಳಿದುಕೊಳ್ಳಬೇಕೆಂದು ಬಯಸಿದ್ದರು. ಹೌದು, ಅವರು ಈ ಜಗತ್ತಿನಲ್ಲಿ ಬಿಟ್ಟುಹೋದ ಎಲ್ಲಾ ಧನಾತ್ಮಕ ಶಕ್ತಿಯನ್ನು ನಾವು ದಾಖಲಿಸುತ್ತಿದ್ದೇವೆ ಎಂದು ಬರೆಯಲಾಗಿತ್ತು. ಆಗಸ್ಟ್ ನಲ್ಲಿ, ಅವರ ಬಯೋ ಅನ್ನು ಸುಶಾಂತ್ ಸಿಂಗ್ ರಜಪೂತ್ (21 ಜನವರಿ 1986 - 14 ಜೂನ್ 2020) ಒಬ್ಬ ಭಾರತೀಯ ನಟ, ಡ್ಯಾನ್ಸರ್, ಉದ್ಯಮಿ ಎಂದು ಬದಲಾಯಿಸಲಾಗಿತ್ತು.

Tap to resize

Latest Videos

undefined

ಪವಿತ್ರ ರಿಷ್ತಾ 2: ಸುಶಾಂತ್ ಸಿಂಗ್‌ ಪಾತ್ರಕ್ಕೆ ಶಾಹೀರ್

ಡಿಪಿ ಬದಲಾವಣೆಯು ಕೆಲವು ಅಭಿಮಾನಿಗಳನ್ನು ಆಶ್ಚರ್ಯಚಕಿತಗೊಳಿಸಿತು. ಇದ್ಯಾರು ಮಾಡಿದರೆಂದು ಅಚ್ಚರಿಯಾಗಿದ್ದಾರೆ. ಓ ದೇವರೇ ನಾನು ಆಘಾತಕ್ಕೊಳಗಾಗಿದ್ದೇನೆ ಎಂದು ನೆಟ್ಟಿಗರು ಬರೆದಿದ್ದಾರೆ. ಇದು ಹೇಗೆ ಸಾಧ್ಯ? ಎಂದು ಇನ್ನೊಬ್ಬ ಅಭಿಮಾನಿ ಕೇಳಿದ್ದಾರೆ. ಸ್ವರ್ಗದಲ್ಲಿಯೂ ಟಂಟರ್‌ನೆಟ್ ಇದೆಯಾ ? ಎಂದು ಪ್ರಶ್ನಿಸಿದ್ದಾರೆ ನೆಟ್ಟಿಗರು.

ಸುಶಾಂತ್ ಸಿಂಗ್ ರಜಪೂತ್ ಜೂನ್ 14 ರಂದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ನಟನ ಕುಟುಂಬವು ಆತನ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಿಸಿತ್ತು. ಆಕೆ ನಟನ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದಾಳೆ. ಆತನ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ. ರಿಯಾ ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಡ್ರಗ್ಸ್ ಸಂಬಂಧಿತ ಪ್ರಕರಣದಲ್ಲಿ ನಟಿ ಜಾಮೀನು ಪಡೆದಿದ್ದಾರೆ.

click me!