Oscars 2022: ಆಸ್ಕರ್‌ಗೆ ಎಂಟ್ರಿ ಕೊಟ್ಟ ಸೌತ್‌ನ ಎರಡು ಸಿನಿಮಾ, ಜೈಭೀಮ್, ಮರಕ್ಕಾರ್‌ ಹವಾ

By Suvarna NewsFirst Published Jan 22, 2022, 1:33 PM IST
Highlights
  • Oscars 2022: ಆಸ್ಕರ್‌ಗೆ ಎಂಟ್ರಿ ಕೊಟ್ಟ ಸೌತ್ ಇಂಡಸ್ಟ್ರಿಯ ಎರಡು ಸಿನಿಮಾ
  • ಜೈ ಭೀಮ್, ಮರಕ್ಕಾರ್‌ ಬೆಸ್ಟ್ ಫೀಚರ್ ಸಾಲಿನಲ್ಲಿ

TJ ಜ್ಞಾನವೇಲ್ ನಿರ್ದೇಶಿಸಿದ ಸೂರ್ಯ ಅವರ ಜೈ ಭೀಮ್(Jai Bhim), ನವೆಂಬರ್ 2021 ರಲ್ಲಿ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಡೈರೆಕ್ಟ್ ರಿಲೀಸ್ ಆಯಿತು. ಸರಳವಾದ ನಿಜ ಘಟನೆಯಾಧಾರಿತ ಸಿನಿಮಾ ಭಾಷೆಗಳ ಗಡಿಯನ್ನು ಮೀರಿ ಜನರ ಮೆಚ್ಚುಗೆ ಗಳಿಸಿತು. ಈ ಚಲನಚಿತ್ರವು ಇದೀಗ ಶಾರ್ಟ್‌ಲಿಸ್ಟ್ ಆಗಿದೆ. 2022 ರ ಆಸ್ಕರ್‌ನಲ್ಲಿ ಅತ್ಯುತ್ತಮ ಚಲನಚಿತ್ರಕ್ಕೆ ಅರ್ಹವಾಗಿದೆ. ಜೈ ಭೀಮ್ ಜೊತೆಗೆ, ಮೋಹನ್‌ಲಾಲ್‌ ಅಭಿನಯದ ಮರಕ್ಕರ್: ಅರಬಿಕ್‌ದಲಿಂಟೆ ಸಿಂಹಂ ಕೂಡ ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಅಂತಿಮ ನಾಮನಿರ್ದೇಶನ ಪಟ್ಟಿಯನ್ನು ಫೆಬ್ರವರಿ 8, 2022 ರಂದು ಪ್ರಕಟಿಸಲಾಗುತ್ತದೆ.

ಜೈ ಭೀಮ್ ಮತ್ತು ಮರಕ್ಕರ್: ಅರಬಿಕ್ದಲಿಂತೆ ಸಿಂಹಮ್ ಆಸ್ಕರ್ 2022: ಇರುಲರ್ ಬುಡಕಟ್ಟಿನ ಸದಸ್ಯರಿಗೆ ಅನ್ಯಾಯ ಮತ್ತು ಪೊಲೀಸ್ ದೌರ್ಜನ್ಯದ ಬಗ್ಗೆ ವಿವರಿಸಿದ ಸೂರ್ಯ ಅವರ ಜೈ ಭೀಮ್, 2021 ರ ಅತ್ಯುತ್ತಮ ತಮಿಳು ಚಲನಚಿತ್ರಗಳಲ್ಲಿ ಒಂದಾಗಿದೆ. TJ ಜ್ಞಾನವೇಲ್ ನಿರ್ದೇಶಿಸಿದ ಈ ಚಿತ್ರದಲ್ಲಿ ಸೂರ್ಯ, ಲಿಜೋಮೋಲ್ ಜೋಸ್ ಮತ್ತು ಮಣಿಕಂದನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. 94 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ಆಯ್ಕೆಯಾದ ಏಕೈಕ ತಮಿಳು ಚಲನಚಿತ್ರ ಜೈ ಭೀಮ್. ವಿಶ್ವದಾದ್ಯಂತ ಆಯ್ಕೆಯಾಗಿರುವ 276 ಚಿತ್ರಗಳ ಪೈಕಿ ಜೈ ಭೀಮ್ ಮತ್ತು ಮಲಯಾಳಂ ಚಿತ್ರ ಮರಕ್ಕರ್: ಅರಬಿಕದಲಿಂತೆ ಸಿಂಹಂ ಭಾರತದಿಂದ ಆಯ್ಕೆಯಾಗಿವೆ.

ಆಸ್ಕರ್ ನಾಮನಿರ್ದೇಶನ ಮತದಾನವು ಗುರುವಾರ (ಜನವರಿ 27) ಪ್ರಾರಂಭವಾಗುತ್ತದೆ. ಅಂತಿಮ ನಾಮನಿರ್ದೇಶನ ಪಟ್ಟಿಯನ್ನು ಮಂಗಳವಾರ, ಫೆಬ್ರವರಿ 8, 2022 ರಂದು ಪ್ರಕಟಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭವು ಭಾನುವಾರ, ಮಾರ್ಚ್ 27, 2022 ರಂದು ಹಾಲಿವುಡ್, US ನಲ್ಲಿ ನಿಗದಿಪಡಿಸಲಾಗಿದೆ.

ರಿಲೀಸ್‌ಗೆ ಮುನ್ನವೇ 100 ಕೋಟಿ ಕ್ಲಬ್ ಸೇರಿದ ಮಾಲಿವುಡ್ ಸಿನಿಮಾ, ಭಾರತದಲ್ಲೇ ಮೊದಲು

ಮರಕ್ಕರ್ ಬಗ್ಗೆ: ಅರಬಿಕಡಲಿಂಡೆ ಸಿಂಹಂ: ಮೋಹನ್ ಲಾಲ್ ಅವರ ಮರಕ್ಕರ್: ಅರಬಿಕಡಲಿಂಡೆ ಸಿಂಹಂ ಅನ್ನು ಪ್ರಿಯದರ್ಶನ್ ನಿರ್ದೇಶಿಸಿದ್ದಾರೆ. ಚಿತ್ರವು ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದೆ. ಕ್ಯಾಲಿಕಟ್‌ನಲ್ಲಿ 16 ನೇ ಶತಮಾನದಲ್ಲಿ ನಡೆದ ಘಟನೆಯ ಈ ಚಲನಚಿತ್ರವು ಸಾಮೂದಿರಿ ನೌಕಾಪಡೆಯ ಅಡ್ಮಿರಲ್ ಕುಂಜಾಲಿ ಮರಕ್ಕರ್ ಅವರನ್ನು ಜೀವನವನ್ನು ಆಧರಿಸಿದೆ. ಫಿಲ್ಮ್‌ನಲ್ಲಿ ಕೀರ್ತಿ ಸುರೇಶ್, ಕಲ್ಯಾಣಿ ಪ್ರಿಯದರ್ಶನ್, ಅರ್ಜುನ್ ಸರ್ಜಾ, ಸುನೀಲ್ ಶೆಟ್ಟಿ, ಮಂಜು ವಾರಿಯರ್ ಮತ್ತು ಸಿದ್ದಿಕ್ ಕೂಡ ಇದ್ದಾರೆ.

click me!