Trisha Magic: ವಿಜಯ್ ಮಾತ್ರವಲ್ಲ, ನಟ ಸೂರ್ಯನ ಗೆಲುವಿನಲ್ಲೂ ಪಾಲು ಪಡೆದ ನಟಿ ತ್ರಿಷಾ ಕೃಷ್ಣನ್; ಈ ಮ್ಯಾಜಿಕ್ ಸೀಕ್ರೆಟ್ ಏನು?

Published : May 17, 2026, 07:38 PM IST
Suriya

ಸಾರಾಂಶ

ನಟಿ ತ್ರಿಷಾ ಕೃಷ್ಣನ್ ಕಾಲಿಟ್ಟಲ್ಲೆಲ್ಲಾ ಗೆಲವು ಎಂಬ ಮಾತು ಕೇಳಿ ಬರುತ್ತಿದೆ. ಇತ್ತೀಚೆಗೆ ದಳಪತಿ ವಿಜಯ್ ಅವರು ತಮಿಳುನಾಡಿನ ಅಸೆಂಬ್ಲಿ ಚುನಾವಣೆಯಲ್ಲಿ ಗೆಲವು ಸಾಧಿಸಿ ಮುಖ್ಯಮಂತ್ರಿ ಆಗಿದ್ದರ ಹಿಂದೆ ತ್ರಿಷಾ ಕಾಲ್ಗುಣ ಇದೆ ಎನ್ನಲಾಗುತ್ತದೆ. ಜೊತೆಗೆ, ಈಗ ತ್ರಿಷಾ ಜೊತೆ ಸೂರ್ಯ ನಟಿಸಿದ ಸಿನಿಮಾ ‘ಕರುಪ್ಪು’ ಸೂಪರ್ ಹಿಟ್ ಆಗಿದೆ. 

ಸೋಲಿನ ಸುಳಿಯಲ್ಲಿದ್ದ ಸೂರ್ಯನಿಗೆ ಮರುಜೀವ ನೀಡಿದ 'ಕರುಪ್ಪು'!

ದಕ್ಷಿಣ ಭಾರತದ ಚಿತ್ರರಂಗದ ಅಪ್ರತಿಮ ನಟ ಸೂರ್ಯ (Suriya) ಅಂದ್ರೆ ಕೇವಲ ಅಭಿಮಾನಿಗಳಿಗಷ್ಟೇ ಅಲ್ಲ, ಸಿನಿ ಪ್ರೇಮಿಗಳಿಗೂ ಒಂದು ಎಮೋಷನ್. ಆದರೆ, ಕಳೆದ ಕೆಲವು ವರ್ಷಗಳಿಂದ ಸೂರ್ಯ ಅವರಿಗೆ ಬಾಕ್ಸ್ ಆಫೀಸ್‌ನಲ್ಲಿ ಒಂದು ಸಾಲಿಡ್ 'ಮಾಸ್' ಹಿಟ್ ಸಿಕ್ಕಿರಲಿಲ್ಲ. 'ಜೈ ಭೀಮ್', 'ಸೂರರೈ ಪೋಟ್ರು' ಅಂತಹ ಸಿನಿಮಾಗಳು ಒಟಿಟಿಯಲ್ಲಿ ಸದ್ದು ಮಾಡಿದ್ದರೂ, ಬೆಳ್ಳಿತೆರೆಯ ಮೇಲೆ ಸೂರ್ಯನ ಗರ್ಜನೆ ಕೇಳಿ ದಶಕವೇ ಕಳೆದಿತ್ತು. ಈಗ ಆ ಎಲ್ಲಾ ಕಾಯುವಿಕೆಗೆ ಆರ್.ಜೆ. ಬಾಲಾಜಿ ನಿರ್ದೇಶನದ ‘ಕರುಪ್ಪು’ (Karuppu) ಸಿನಿಮಾ ತೆರೆ ಎಳೆದಿದೆ. ಹಣಕಾಸಿನ ಸಂಕಷ್ಟ, ಬಿಡುಗಡೆಯ ವಿಘ್ನಗಳನ್ನೆಲ್ಲಾ ಮೆಟ್ಟಿ ನಿಂತು ಈ ಸಿನಿಮಾ ಈಗ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ.

ಹಣಕಾಸಿನ ವಿಘ್ನ ಮೆಟ್ಟಿ ನಿಂತ ಸೂರ್ಯ!

ಈ ಸಿನಿಮಾ ಸುಲಭವಾಗಿ ಚಿತ್ರಮಂದಿರಕ್ಕೆ ಬರಲಿಲ್ಲ. ಬಿಡುಗಡೆಯ ದಿನವೇ ಸಾಲಗಾರರ ಕಾಟ, ಫೈನಾನ್ಶಿಯರ್ಸ್‌ಗಳ ಕಿರಿಕಿರಿ ಇತ್ತು. ಸಿನಿಮಾ ರಿಲೀಸ್ ಆಗುವುದೇ ಅನುಮಾನ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ತೆರೆಯ ಮೇಲೆ ಮಾತ್ರವಲ್ಲದೆ ರಿಯಲ್ ಲೈಫ್‌ನಲ್ಲೂ ತಾನೊಬ್ಬ ಹೀರೊ ಎಂದು ಸೂರ್ಯ ಸಾಬೀತುಪಡಿಸಿದರು. ಸ್ವತಃ ತಾವೇ ಮಧ್ಯಸ್ಥಿಕೆ ವಹಿಸಿ, ಹಣಕಾಸಿನ ಬಿಕ್ಕಟ್ಟನ್ನು ಬಗೆಹರಿಸಿ ಸಿನಿಮಾ ಅಭಿಮಾನಿಗಳ ಮುಂದೆ ಬರುವಂತೆ ನೋಡಿಕೊಂಡರು. ಸೂರ್ಯ ಅವರ ಆ ಛಲಕ್ಕೆ ಈಗ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಪ್ರತಿಫಲ ಸಿಕ್ಕಿದೆ.

ಎರಡೇ ದಿನಕ್ಕೆ 70 ಕೋಟಿ ರೂ. ಬೇಟೆ!

ಚಿತ್ರದ ಕಲೆಕ್ಷನ್ ನೋಡಿದರೆ ಯಾರಿಗಾದರೂ ಮೈ ಜುಂ ಎನ್ನುತ್ತದೆ. ಮೊದಲ ದಿನ ವಿಶ್ವಾದ್ಯಂತ 29 ಕೋಟಿ ರೂಪಾಯಿ ಗಳಿಸಿದ್ದ ಈ ಸಿನಿಮಾ, ಎರಡನೇ ದಿನ ಅಕ್ಷರಶಃ ಸುನಾಮಿ ಎಬ್ಬಿಸಿದೆ. ಶನಿವಾರದಂದು ಬರೋಬ್ಬರಿ 40 ಕೋಟಿ ರೂಪಾಯಿಗೂ ಅಧಿಕ ಹಣವನ್ನು ತನ್ನ ಜೇಬಿಗೆ ಇಳಿಸಿಕೊಂಡಿದೆ. ಅಂದರೆ ಮೊದಲ ದಿನಕ್ಕೆ ಹೋಲಿಸಿದರೆ ಶೇ.55ರಷ್ಟು ಭಾರಿ ಏರಿಕೆ ಕಂಡಿದೆ. ಕೇವಲ ಎರಡು ದಿನಗಳಲ್ಲಿ ಈ ಸಿನಿಮಾ 70 ಕೋಟಿ ರೂಪಾಯಿ ಕ್ಲಬ್ ಸೇರುವ ಮೂಲಕ ಸೂರ್ಯನ ಕೆರಿಯರ್‌ನಲ್ಲೇ ಅತಿ ದೊಡ್ಡ 'ಕಂಬ್ಯಾಕ್' ಸಿನಿಮಾ ಎನಿಸಿಕೊಂಡಿದೆ.

ಕರ್ನಾಟಕದಲ್ಲೂ ಸೂರ್ಯನ ಅಬ್ಬರ!

ಕೇವಲ ತಮಿಳುನಾಡು ಮಾತ್ರವಲ್ಲದೆ, ಕರ್ನಾಟಕದಲ್ಲೂ ಸೂರ್ಯನ ಕ್ರೇಜ್ ಎಷ್ಟಿದೆ ಎಂಬುದು ಈ ಚಿತ್ರದ ಮೂಲಕ ಸಾಬೀತಾಗಿದೆ. ಕರ್ನಾಟಕದಲ್ಲಿ ಎರಡನೇ ದಿನಕ್ಕೆ 3.60 ಕೋಟಿ ರೂ. ಗಳಿಕೆಯಾಗಿದೆ. ತಮಿಳುನಾಡಿನಲ್ಲಿ 16.25 ಕೋಟಿ ರೂ., ಕೇರಳದಲ್ಲಿ 2.15 ಕೋಟಿ ರೂ. ಹಾಗೂ ಆಂಧ್ರ-ತೆಲಂಗಾಣದಲ್ಲಿ 50 ಲಕ್ಷ ರೂ. ಗಳಿಕೆಯಾಗಿದೆ. ದೇಶಾದ್ಯಂತ ಒಟ್ಟು 6,288 ಶೋಗಳು ಪ್ರದರ್ಶನ ಕಾಣುತ್ತಿದ್ದು, ಪ್ರತಿಯೊಂದು ಶೋ ಕೂಡ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

ಯಶಸ್ಸಿನ ಹಳಿಗೆ ಮರಳಿದ ಸಿಂಗಂ!

ತ್ರಿಷಾ ಮತ್ತು ಸೂರ್ಯ ಅವರ ಕೆಮಿಸ್ಟ್ರಿ, ಆರ್.ಜೆ. ಬಾಲಾಜಿ ಅವರ ಅದ್ಭುತ ನಿರ್ದೇಶನ ಮತ್ತು ಪಕ್ಕಾ ಕಮರ್ಶಿಯಲ್ ಕಥೆ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದೆ. 'ಸಿಂಗಂ' ಸರಣಿಯ ನಂತರ ಸೂರ್ಯನಿಗೆ ಇಂತಹ ಭರ್ಜರಿ ಆರಂಭ ಸಿಕ್ಕಿರಲಿಲ್ಲ. ಚಿತ್ರಕ್ಕೆ ಸಿಗುತ್ತಿರುವ ಪಾಸಿಟಿವ್ ಟಾಕ್ ನೋಡಿದರೆ, ಮೊದಲ ವಾರಾಂತ್ಯದ ವೇಳೆಗೆ ಈ ಸಿನಿಮಾ ನೂರು ಕೋಟಿ ಕ್ಲಬ್ ಸೇರುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಒಟ್ಟಿನಲ್ಲಿ, ಸೂರ್ಯ ಫ್ಯಾನ್ಸ್‌ಗೆ ಈಗ ಹಬ್ಬವೋ ಹಬ್ಬ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

7ನೇ ವಯಸ್ಸಲ್ಲೇ ಟೀಚರ್‌ನಿಂದ ಲೈಂಗಿಕ ಕಿರುಕುಳ, 10 ವರ್ಷ ನರಕ ಅನುಭವಿಸಿದ್ದೆ: ನಟಿ ಮೀರಾ ಶಾಕಿಂಗ್ ಹೇಳಿಕೆ
ಪುಷ್ಪಾ ಇಂಪಾಸಿಬಲ್‌ನ ಮುಗ್ಧೆ ಮನ್ವಾಳ ರಿಯಲ್ ಅವತಾರ ನೋಡಿದ್ರೆ ದಂಗಾಗ್ತೀರಾ: ಫೋಟೋಸ್ ನೋಡಿ