Thalaivar 169: ಮಾಸ್​ ಲುಕ್​ನಲ್ಲಿ ಕಾಣಿಸಿಕೊಂಡ ರಜನಿಕಾಂತ್: ತಲೈವರ್​ ಲುಕ್‌ಗೆ ಫ್ಯಾನ್ಸ್​ ಫಿದಾ!

Suvarna News   | Asianet News
Published : Feb 17, 2022, 09:01 PM IST
Thalaivar 169: ಮಾಸ್​ ಲುಕ್​ನಲ್ಲಿ ಕಾಣಿಸಿಕೊಂಡ ರಜನಿಕಾಂತ್: ತಲೈವರ್​ ಲುಕ್‌ಗೆ ಫ್ಯಾನ್ಸ್​ ಫಿದಾ!

ಸಾರಾಂಶ

ರಜನಿಕಾಂತ್ ನಟನೆಯ 169ನೇ ಸಿನಿಮಾ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿದ್ದವು. ಈ ಬಗ್ಗೆ ಅನೇಕ ವರದಿಗಳು ಪ್ರಕಟಗೊಂಡಿದ್ದವು. ಈಗ ಅದು ನಿಜವಾಗಿದೆ. ಹೌದು! ದಳಪತಿ ವಿಜಯ್ ಅಭಿನಯದ 'ಬೀಸ್ಟ್' ಸಿನಿಮಾ ನಿರ್ದೇಶಿಸಿರುವ ನೆಲ್ಸನ್ ದಿಲೀಪ್ ಕುಮಾರ್ ಈ ಹೊಸ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.   

ದಕ್ಷಿಣ ಚಿತ್ರರಂಗದ (South Film Industry) ಸೂಪರ್ ಸ್ಟಾರ್ ನಟ, ತಲೈವಾ ರಜನಿಕಾಂತ್ (Rajanikanth) ಅಭಿನಯದ 'ಅಣ್ಣಾತ್ತೆ ಚಿತ್ರ' (Annaatthe) ಇತ್ತೀಚೆಗೆ ತೆರೆಕಂಡು ಸೂಪರ್ ಹಿಟ್​ ಆಗಿತ್ತು. ಅನಂತರ ರಜನಿಕಾಂತ್ ನಟನೆಯ 169ನೇ ಸಿನಿಮಾ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿದ್ದವು. ಈ ಬಗ್ಗೆ ಅನೇಕ ವರದಿಗಳು ಪ್ರಕಟಗೊಂಡಿದ್ದವು. ಈಗ ಅದು ನಿಜವಾಗಿದೆ. ಹೌದು! ದಳಪತಿ ವಿಜಯ್ ಅಭಿನಯದ 'ಬೀಸ್ಟ್' (Beast) ಸಿನಿಮಾ ನಿರ್ದೇಶಿಸಿರುವ ನೆಲ್ಸನ್ ದಿಲೀಪ್ ಕುಮಾರ್ (Nelson Dilipkumar) ಈ ಹೊಸ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಷ್ಟು ದಿನ ಕೇವಲ ಗಾಳಿ ಸುದ್ದಿಯಾಗಿದ್ದ ರಜನಿಕಾಂತ್ ಹಾಗೂ ದಿಲೀಪ್ ಕುಮಾರ್ ಸಿನಿಮಾ ಕೊನೆಗೂ ಸೆಟ್ಟೇರಿದೆ.

ಸ್ಮಗ್ಲಿಂಗ್​ ಕಥೆಯ ಸುತ್ತ ಸಿನಿಮಾದ ಕಥೆ ಸಾಗಲಿದೆ ಎನ್ನಲಾಗುತ್ತಿದ್ದು, ಈ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಚಿಕ್ಕದಾದ ಟೀಸರ್ ಮೂಲಕ ದಿಲೀಪ್ ಕುಮಾರ್ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಈ ಟೀಸರ್‌ (Teaser) ವಿಡಿಯೋದಲ್ಲಿ ಮೊದಲಿಗೆ ಸಂಗೀತ ನಿರ್ದೇಶಕ ಅನಿರುದ್ಧ್ ಅವರನ್ನು ತೋರಿಸಿದರೆ ಆ ಬಳಿಕ ನಿರ್ದೇಶಕ ನೆಲ್ಸನ್​ ಅವರನ್ನು ತೋರಿಸಲಾಗಿದೆ. ಬಳಿಕ ರಜನಿಕಾಂತ್​ ಅವರು ಸ್ಟೈಲಿಶ್​ ಆಗಿ ಕನ್ನಡಕ ಧರಿಸಿ ಮಿಂಚಿದ್ದಾರೆ. ಈ ಪುಟ್ಟ ಟೀಸರ್ ಥ್ರಿಲ್ಲಿಂಗ್ ಆಗಿದ್ದು, ಅಭಿಮಾನಿಗಳನ್ನು ಖುಷಿಯ ಅಲೆಯಲ್ಲಿ ತೇಲಿಸುತ್ತಿದೆ. ಇದು ವಿಶಿಷ್ಟವಾದ ಸಿನಿಮಾ ಆಗಿರಲಿದ್ದು, ಏಪ್ರಿಲ್ ಕೊನೆಯ ವಾರ ಅಥವಾ ಮೇ ಆರಂಭದಲ್ಲಿ ಚಿತ್ರ ಸೆಟ್ಟೇರಲಿದೆಯಂತೆ. 

Dhanush Aishwary Split: ಮಗಳು-ಅಳಿಯನ ವಿಚ್ಚೇದನೆಯಿಂದ ರಜನಿಗೆ ತೀವ್ರ ಬೇಸರ..!

ನೆಲ್ಸನ್​ ದಿಲೀಪ್​ ಕುಮಾರ್ ಅವರು 'ಬೀಸ್ಟ್' ಚಿತ್ರದ ಕೊನೆಯ ಹಂತದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಏಪ್ರಿಲ್​ 14ರಂದು ತೆರೆಗೆ ಬರುವ ನಿರೀಕ್ಷೆ ಇದೆ. ಗಾಢ ವಿಷಾದದ ಹಾಸ್ಯ ಚಿತ್ರಗಳಿಗೆ ಹೆಸರುವಾಸಿಯಾಗಿರುವ ನೆಲ್ಸನ್​ ದಿಲೀಪ್​ ಅವರು ಈ ಮೊದಲು 'ಡಾಕ್ಟರ್' (Doctor) ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ ಕಾಲಿವುಡ್‌ನಲ್ಲಿ ಸೂಪರ್​ ಹಿಟ್​ ಆಗಿತ್ತು. ಇದೀಗ ದಿಲೀಪ್, ರಜನಿಕಾಂತ್ ಅವರ​ ಜತೆ ಕೈಜೋಡಿಸುತ್ತಿದ್ದಾರೆ ಅನ್ನೋದು ವಿಶೇಷ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಹೀಗಾಗಿ, ತಾತ್ಕಾಲಿಕವಾಗಿ 'ತಲೈವರ್​ 169' (Thalaivar 169) ಎಂದು ಕರೆಯಲಾಗುತ್ತಿದೆ. ಹೆಸರಿಡದ ಈ ಚಿತ್ರಕ್ಕೆ ಅನಿರುದ್ಧ್  ರವಿಚಂದರ್ (Anirudh Ravichander)​ ಸಂಗೀತ ಸಂಯೋಜಿಸುತ್ತಿದ್ದಾರೆ. 



ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಆರಂಭದಲ್ಲಿ ಕಥೆಯನ್ನು ಹೇಳಿದಾಗ ರಜನಿಕಾಂತ್‌ ಅವರು ಇಷ್ಟಪಟ್ಟಿರಲಿಲ್ಲ. ಈ ಕಥೆಯಲ್ಲಿ ಬರುವ ನಿರೂಪಣೆ ತಮ್ಮ ಮ್ಯಾನರಿಸಂಗೆ ಹೊಂದಾಣಿಕೆ ಆಗುವುದಿಲ್ಲವೆಂದು ರಜನಿ ಭಾವಿಸಿದ್ದರು. ಹೀಗಾಗಿ ನೆಲ್ಸನ್ ಕಥೆಯನ್ನು ಪಕ್ಕಕ್ಕಿಟ್ಟು 'ಬೀಸ್ಟ್' ಚಿತ್ರದಲ್ಲಿ ಬ್ಯುಸಿಯಾಗಿದ್ದರು. ಬಳಿಕ ನೆಲ್ಸನ್ ದಿಲೀಪ್ ಕುಮಾರ್ ಕೂಡ ಕಥೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡು ಮತ್ತೆ ರಜನಿಗೆ ಕಥೆ ಹೇಳಿದರು. ಇದು ಸೂಪರ್‌ಸ್ಟಾರ್‌ಗೆ ಇಷ್ಟವಾಗಿ ಚಿತ್ರ ಮಾಡಲು ಒಪ್ಪಿಗೆ ಸೂಚಿಸಿದರು. ಅನಂತರವೇ ಈ ವಿಷಯವನ್ನು ನಿರ್ದೇಶಕ ನೆಲ್ಸನ್ ದಿಲೀಪ್​ ಕುಮಾರ್ ಸಾಮಾಜಿಕ ಜಾಲತಾಣ (Social Media) ಖಾತೆಯಲ್ಲಿ ಹಂಚಿಕೊಂಡಿದ್ದರು.

Annaatthe: ಕಥೆ ವಿವರಣೆ ಕೇಳಿ ಕಣ್ಣಿರಿಟ್ಟಿದ್ದ ರಜನಿ

ಈ ಬಗ್ಗೆ 'ನನ್ನ ಮುಂದಿನ ಸಿನಿಮಾ ಲೆಜೆಂಡರಿ ಸೂಪರ್‌ಸ್ಟಾರ್ ಜೊತೆ ಎಂದು ಹೇಳುವುದಕ್ಕೆ ಖುಷಿಯಾಗುತ್ತಿದೆ. ಸನ್ ಪಿಕ್ಚರ್ಸ್ ಜೊತೆ ಹಾಗೂ ಸ್ನೇಹಿತ ಅನಿರುದ್ಧ್ ಜೊತೆ ಮತ್ತೆ ಸಿನಿಮಾ ಕೆಲಸ ಮಾಡುತ್ತಿದ್ದೇನೆ' ಎಂದು ಟ್ವೀಟ್ (Tweet) ಮಾಡಿದ್ದರು. ರಜನಿಕಾಂತ್ ಬ್ಯಾಕ್ ಟು ಬ್ಯಾಕ್ ಚಿತ್ರಗಳಿಗೆ ಅನಿರುದ್ಧ್ ಸಂಗೀತ ಸಂಯೋಜಿಸುತ್ತಿದ್ದು, 'ರಜನಿಯ 169ನೇ ಸಿನಿಮಾಗಾಗಿ ನಾವು ಮತ್ತೆ ಬಂದಿದ್ದೇವೆ. ಒನ್ ಅಂಡ್ ಓನ್ಲಿ ಸೂಪರ್‌ಸ್ಟಾರ್ ರಜನಿಕಾಂತ್, ನೆಲ್ಸನ್ ದಿಲೀಪ್ ಕುಮಾರ್ ಜೊತೆಯಾಗಿದ್ದೇವೆ' ಎಂದು ಅನಿರುದ್ಧ್ ಟ್ವೀಟ್ ಕೂಡಾ ಮಾಡಿದ್ದಾರೆ. ಇನ್ನು ಈಗಾಗಲೇ ರಜನಿ, ನೆಲ್ಸನ್ ಹಾಗೂ ಅನಿರುದ್ಧ್ ಕಾಂಬಿನೇಷನ್‌ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ (Fans) ಸಾಕಷ್ಟು ಕುತೂಹಲ ಮೂಡಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!