ಮಕ್ಕಳ ಇಷ್ಟದ ಪ್ರಸಿದ್ಧ ಶಕ್ತಿಮಾನ್‌ ಧಾರಾವಾಹಿ ಮತ್ತೆ ಪ್ರಸಾರ!

Kannadaprabha News   | Asianet News
Published : Mar 31, 2020, 09:36 AM IST
ಮಕ್ಕಳ ಇಷ್ಟದ ಪ್ರಸಿದ್ಧ ಶಕ್ತಿಮಾನ್‌ ಧಾರಾವಾಹಿ ಮತ್ತೆ ಪ್ರಸಾರ!

ಸಾರಾಂಶ

21 ದಿನಗಳ ಕೊರೋನಾ ಲಾಕ್‌ಡೌನ್‌ನ ಜನ ಸಾಮಾನ್ಯರ ಬೇಸರ ತಣಿಸಲು ಈಗಾಗಲೇ ಡಿಡಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಯಣ, ಮಹಾಭಾರತ, ಶಾರುಖ್‌ ಖಾನ್‌ ಅವರ ಸರ್ಕಸ್‌ ಹಾಗೂ ಬ್ಯೋಮಕೇಶ್‌ ಬಕ್ಷಿಗಳ ಸಾಲಿಗೆ ಶೀಘ್ರವೇ ‘ಶಕ್ತಿಮಾನ್‌’ ಧಾರಾವಾಹಿಯೂ ಸೇರ್ಪಡೆಯಾಗುವ ಸಾಧ್ಯತೆಯಿದೆ. 

ಮುಂಬೈ (ಮಾ. 31): 21 ದಿನಗಳ ಕೊರೋನಾ ಲಾಕ್‌ಡೌನ್‌ನ ಜನ ಸಾಮಾನ್ಯರ ಬೇಸರ ತಣಿಸಲು ಈಗಾಗಲೇ ಡಿಡಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಯಣ, ಮಹಾಭಾರತ, ಶಾರುಖ್‌ ಖಾನ್‌ ಅವರ ಸರ್ಕಸ್‌ ಹಾಗೂ ಬ್ಯೋಮಕೇಶ್‌ ಬಕ್ಷಿಗಳ ಸಾಲಿಗೆ ಶೀಘ್ರವೇ ‘ಶಕ್ತಿಮಾನ್‌’ ಧಾರಾವಾಹಿಯೂ ಸೇರ್ಪಡೆಯಾಗುವ ಸಾಧ್ಯತೆಯಿದೆ.

ಅಭಿಮಾನಿಗಳ ಮನವಿಗೆ ಸ್ಪಂದಿಸಿದ ಡಿಡಿ, ಮತ್ತೆ ಹಳೇ ರಾಮಾಯಣ ಶುರು

ಈ ಬಗ್ಗೆ ಈ ಧಾರಾವಾಹಿಯಲ್ಲಿ ಶಕ್ತಿಮಾನ್‌ ಆಗಿ ಅಭಿನಯಿಸಿದ್ದ ಮುಖೇಶ್‌ ಖನ್ನಾ ಅವರು ಖಚಿತಪಡಿಸಿದ್ದಾರೆ. ಈ ಕುರಿತು ಸೋಮವಾರ ಟ್ವೀಟ್‌ ಮಾಡಿರುವ ಮುಖೇಶ್‌ ಖನ್ನಾ, ‘ದೇಶದ ಎರಡು ಪೌರಾಣಿಕಗಳಾದ ರಾಮಾಯಣ ಹಾಗೂ ಮಹಾಭಾರತ ಧಾರಾವಾಹಿಯನ್ನು 135 ಕೋಟಿ ಜನ ವೀಕ್ಷಿಸುತ್ತಿರುವುದು ಸಂತಸಕರ. ನನ್ನ ಅಭಿನಯದ ಶಕ್ತಿಮಾನ್‌ ಧಾರಾವಾಹಿಯು ಶೀಘ್ರವೇ ಮರು ಪ್ರಸಾರವಾಗಲಿದೆ ಎಂಬುದನ್ನು ತಿಳಿಸಲು ಹರ್ಷಿಸುತ್ತೇನೆ’ ಎಂದಿದ್ದಾರೆ.

ಆದರೆ, ಈ ಧಾರಾವಾಹಿ ಯಾವಾಗಿನಿಂದ ಪ್ರಸಾರವಾಗಲಿದೆ ಎಂಬ ನಿಖರ ಮಾಹಿತಿ ನೀಡಿಲ್ಲ. 1997ರಿಂದ 2005ರವರೆಗೂ 8 ವರ್ಷಗಳ ಕಾಲ ನಿರಂತರವಾಗಿ ಪ್ರಸಾರವಾಗಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!