ನಟಿ ರಮ್ಯಾ ಮುದ್ದಿನ ಜೆರ್ಮನ್ ಶೆಫರ್ಡ್ ನಾಯಿ ಕೊನೆಯುಸಿರೆಳೆದಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡ ನಟಿ ಡಿಪ್ರೆಶನ್‌ಗೆ ಹೋಗಿದ್ದಾರೆ.
ಸ್ಯಾಂಡಲ್‌ವುಡ್ ಬ್ಯೂಟಿ ಕ್ವೀನ್ ರಮ್ಯಾ ನಾಯಿ ಸಾಕಿದ್ರಾ? ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರಾ? ಇಲ್ವಲ್ಲಾ? ಏನ್ ಹೇಳುತ್ತಿದ್ದೀರಾ? ನಿಮ್ಮೆಲ್ಲಾ ಕನ್ಫ್ಯೂಷನ್‌ಗೆ ಇಲ್ಲಿದೆ ಉತ್ತರ...
ಕಾಲಿವುಡ್ ಚಿತ್ರರಂಗದ ಅದ್ಭುತ ನಿರೂಪಕಿ, ಮಾಡೆಲ್ ಕಮ್ ನಟಿ ರಮ್ಯಾ ಅವರು ಇಂದು ಬೆಳಗ್ಗೆ ತಮ್ಮ ಮುದ್ದಿನ ಸಾಕು ನಾಯಿ ಮಿಲೋವನ್ನು ಕಳೆದುಕೊಂಡಿದ್ದಾರೆ. ಮಿಲೋ ಅನುಭವಿಸುತ್ತಿದ್ದ ನೋವಿನ ಬಗ್ಗೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿ, ದುಃಖ ತೋಡಿಕೊಂಡಿದ್ದಾರೆ.
ಹಸಿವಿನಿಂದ ಅಲೆಯುತ್ತಿದ್ದ ಸಾವಿರಾರು ನಾಯಿಗಳಿಗೆ ಆಹಾರ, ನೀರು ಪೋರೈಕೆ
'ನನ್ನ ರಾಜ ಮಿಲೋ. ರಾಷ್ಟ್ರವೇ ತಡೆಯಲಾಗದ ವೈರಸ್ ವಿರುದ್ಧ ಹೋರಾಡುತ್ತಿದ್ದರೆ, ನನ್ನ ಮುದ್ದು ನಾಯಿ ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದ. ಬ್ಯಾಕ್ ಟು ಬ್ಯಾಕ್ ಸರ್ಜರಿಗಳನ್ನು ಮಾಡಿಸಲಾಗಿತ್ತು. ಆದರೂ ಅವನನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಕಾರಣ ಇಂದು ಬೆಳಗ್ಗೆ ನಮ್ಮನ್ನು ಬಿಟ್ಟು, ಮತ್ತೊಂದು ಪ್ರಪಂಚಕ್ಕೆ ತೆರಳಿದ. ' ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಮಿಲೋ ಅನುಭವಿಸುತ್ತಿದ್ದ ನೋವನ್ನು ನೋಡಲಾಗದೆ ರಮ್ಯಾ, ದಿನೆ ದಿನೇ ಖಿನ್ನತೆಗೆ ಹೋಗುತ್ತಿದ್ದರಂತೆ. ಮಿಲೋ ಚಿಕಿತ್ಸೆ ವೇಳೆ ಅನುಭವಿಸುತ್ತಿದ್ದ ನೋವಿಗೆ ನನ್ನ ಹೃದಯವೇ ಚೂರು ಚೂರು ಆಗುತ್ತಿತ್ತು. ಭೂಮಿ ಮೇಲೆ Un-conditional ಲವ್ ನೀಡಿದ ಓನ್ಲಿ ಪರ್ಸನ್ ಅಂದ್ರೆ ಮಿಲೋ. ನಮ್ಮ ಕುಟುಂಬದವರನ್ನು ರಕ್ಷಿಸಿ, ಸದಾ ನಮಗಾಗಿ ಕಾಯುತ್ತಿದ್ದ. ವಿ ಮಿಸ್ ಯು ಎಂದು ಹೇಳಿಕೊಂಡಿದ್ದಾರೆ.
ಸಾಕು ಸಾಯಿಗೆ ಭಾವನಾತ್ಮಕವಾಗಿ ರಮ್ಯಾ ಸಂತಾಪ ಸೂಚಿಸಿದ್ದಕ್ಕೆ ನೆಟ್ಟಿಗರ ಮನಸ್ಸೂ ಕರಗಿದೆ. ರಮ್ಯಾಳ ಸ್ನೇಹಿತರು ಹಾಗೂ ಕುಟುಂಬಸ್ಥರೂ ಈ ಪ್ರೀತಿಯ ಶ್ವಾನದ ಸಾವಿಗೆ ಸಂತಾಪ ಸೂಚಿಸಿದ್ದಾರೆ.