ನಟ ರಜನಿಕಾಂತ್ ಬಹಳಷ್ಟು ವಿಭಿನ್ನ ಹಾಗೂ ಮೆಚ್ಚತಕ್ಕಂಥ ವ್ಯಕ್ತಿತ್ವ ಹೊಂದಿದ್ದಾರೆ. ಸಾಮಾನ್ಯವಾಗಿ ಸಮಾಜದಲ್ಲಿ ಎಲ್ಲರೂ ಚಿಕ್ಕಮಕ್ಕಳನ್ನು ದತ್ತು ಪಡೆಯುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ, ನಟ ರಜನಿಕಾಂತ್ ಅವರು 83 ವರ್ಷದ ವ್ಯಕ್ತಿಯನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿ..
ಭಾರತೀಯ ಚಿತ್ರರಂಗದ ದಂತಕತೆ, ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರು ಯಾರಿಗೆ ಗೊತ್ತಿಲ್ಲ? ನಟರಾಗಿ ಮಾತ್ರವಲ್ಲದೇ ಮಾನವೀಯತೆಯ ಮೂರ್ತಿಯಾಗಿ ಸಹ ನಟ ರಜನಿಕಾಂತ್ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ರಜನಿಕಾಂತ್ ಸಮಾಜಕ್ಕೆ, ಸಮಾಜದಲ್ಲಿರುವ ಹಲವು ಸಂಘ-ಸಂಸ್ಥೆಗಳಿಗೆ ಹಾಗೂ ವ್ಯಕ್ತಿಗಳಿಗೆ ಕೂಡ ದಾನಧರ್ಮ ಮಾಡಿರುವ ಉದಾಹರಣೆಗಳು ಬಹಳಷ್ಟಿವೆ. ಮುಂದೆ ಹೇಳಲಿರುವ ಘಟನೆ ಕೂಡ ಅದಕ್ಕೇ ಸಂಬಂಧಪಟ್ಟಿದ್ದು. ಅದರೆ ಸಂಪೂರ್ಣ ವಿಭಿನ್ನ ಹಾಗೂ ವಿಶಿಷ್ಠತೆಯಿಂದ ಕೂಡಿದೆ.
ಹೌದು ನಟ ರಜನಿಕಾಂತ್ ಬಹಳಷ್ಟು ವಿಭಿನ್ನ ಹಾಗೂ ಮೆಚ್ಚತಕ್ಕಂಥ ವ್ಯಕ್ತಿತ್ವ ಹೊಂದಿದ್ದಾರೆ. ಸಾಮಾನ್ಯವಾಗಿ ಸಮಾಜದಲ್ಲಿ ಎಲ್ಲರೂ ಚಿಕ್ಕಮಕ್ಕಳನ್ನು ದತ್ತು ಪಡೆಯುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ, ನಟ ರಜನಿಕಾಂತ್ ಅವರು 83 ವರ್ಷದ ವ್ಯಕ್ತಿಯನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿ, ಅವರನ್ನು ವಿನಂತಿಸಿ ಪ್ರಯತ್ನಿಸಿದ್ದರು. ಇಳಿವಯಸ್ಸಿನ 'ಪಿ ಕಲ್ಯಾಣ ಸುಂದರಂ' (Kalyanasundaram) ಎಂಬ ವ್ಯಕ್ತಿಯನ್ನು ದತ್ತು ಪಡೆಯಲು ಬಯಸಿದ್ದ ರಜನಿಕಾಂತ್, ಆ ಬಗ್ಗೆ 'ದಯವಿಟ್ಟು ನೀವು ನನಗೆ ತಂದೆಯಾಗಿ ನಮ್ಮ ಮನೆಗೆ ಬನ್ನಿ' ಎಂದು ಕೇಳಿಕೊಂಡಿದ್ದರು.
undefined
ಸದ್ಯವೇ ಕನ್ನಡ ಚಿತ್ರೋದ್ಯಮ ಬಂದ್; ಉಪೇಂದ್ರರ 'A' ರೀ-ರಿಲೀಸ್‌ಗೆ ಪೆಟ್ಟು ಕೊಡುವ ಹುನ್ನಾರವೇ?
ನಟ ರಜನಿಕಾಂತ್ ಅವರು ಒಂದು ಸಮಾರಂಭದಲ್ಲಿ ಈ ಬಗ್ಗೆ ಮಾತನಾಡಿದ್ದರು. ಅಲ್ಲಿ 'ಪಿ ಕಲ್ಯಾಣ ಸುಂದರಂ' ಎಂಬ ವ್ಯಕ್ತಿಯೊಬ್ಬರಿಗೆ 'ಮ್ಯಾನ್ ಆಫ್ ದಿ ಮಿಲೇನಿಯಮ್' ಪ್ರಶಸ್ತಿ ಕೊಡಲಾಗಿತ್ತು. ಅಲ್ಲಿ ಆಹ್ವಾನಿತರಾಗಿ ಕುಳಿತಿದ್ದ ನಟ ರಜನಿಕಾಂತ್ ಅವರು 'ಅವರ ದಾನ-ಧರ್ಮಗಳನ್ನು ನೋಡಿ ಮನಸೋತ ರಜನಿ, ನೀವ್ಯಾಕೆ ನಮ್ಮ ಮನೆಗೆ ತಂದೆಯಾಗಿ ಬರಬಾರ್ದು? ನನಗೆ ತಂದೆಯಿಲ್ಲ, ಮಕ್ಕಳಿದ್ದಾರೆ. ದಯವಿಟ್ಟು ತಂದೆಯಾಗಿರಿ ಎಂದುಬೇಡಿಕೊಂಡಿದ್ರಂತೆ. ಆದರೆ ಆ ವ್ಯಕ್ತಿ ಕಲ್ಯಾಣ ಸುಂದರಂ ಬರಲಿಲ್ಲ. ನಟ ರಜನಿಕಾಂತ್ ಈ ಬಗ್ಗೆ ಸಾಕಷ್ಟು ಸಮಾರಂಭಗಳಲ್ಲಿ, ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
ಬಾಲಿವುಡ್‌ಗೆ ಬಂತು ಬಂಗಾರದ ಬೊಂಬೆ; ಕೋಮಲ್ ಝಾ ಗ್ಲಾಮರ್‌ಗೆ ಗಂಡ್‌ಹೈಕ್ಳ ಗುಂಡಿಗೆ ಗಡಗಡ!
ಹಾಗಿದ್ದರೆ ಹಿರಿಯ ವ್ಯಕ್ತಿ 'ಪಿ ಕಲ್ಯಾಣ ಸುಂದರಂ' ಅವರು ಮಾಡಿದ್ದ ದಾನ-ಧರ್ಮಗಳು ಯಾವವು? 12 ವರ್ಷಗಳ ಹಿಂದೆ, 83 ವರ್ಷದ ವ್ಯಕ್ತಿ 'ಪಿ ಕಲ್ಯಾಣ ಸುಂದರಂ' ಅವರಿಗೆ 'ಮ್ಯಾನ್ ಆಫ್ ದಿ ಮಿಲೇನಿಯಂ ಪ್ರಶಸ್ತಿ ಕೊಡಲಾಗಿತ್ತು. ಆ ವ್ಯಕ್ತಿ ಗ್ರಂಥಪಾಲಕರಾಗಿ ಕೆಲಸ ಮಾಡಿದ್ದ 30 ವರ್ಷಗಳ ಅಷ್ಟೂ ಹಣವನ್ನು ನಿರ್ಗತಿಕರಿಗೆ ದಾನ ಮಾಡಿದ್ದರು. ಜತೆಗೆ, 10 ವರ್ಷಗಳ ಕಾಲ ಹೊಟೆಲ್‌ನಲ್ಲಿ ಸರ್ವರ್ ಆಗಿ ಮಾಡಿದ್ದ ಕೆಲಸದಿಂದ ಬಂದ ಹಣವನ್ನು ಬಡಬಗ್ಗರಿಗೆ ಹಂಚಿದ್ದರು. ಇಷ್ಟೇ ಅಲ್ಲದೇ, 10 ವರ್ಷಗಳ ಪಿಂಚಣಿ ಹಣವನ್ನು ಸಹ ಚಾರಿಟಿಗೆ ಕೊಟ್ಟಿದ್ದರು.
ಉಪೇಂದ್ರರ A ಸಿನಿಮಾ ರೀಮೇಕ್‌ಗೆ ನಿರ್ಧರಿಸಿದ್ರು ಶಾರುಖ್ ಖಾನ್, ಯಾಕೆ ಮಾಡ್ಲಿಲ್ಲ?
ಪಿ ಕಲ್ಯಾಣ ಸುಂದರಂ ಅವರು ಮಾನವೀಯತೆ ಹಾಗೂ ದಾನಧರ್ಮಗಳ ಬಗ್ಗೆ ಅರಿತ ನಟ ರಜನಿಕಾಂತ್, ಆ ಹಿರಿಯ ವ್ಯಕ್ತಿಯನ್ನು ತಂದೆಯಾಗಿ ದತ್ತು ಪಡೆಯಲು ನಿರ್ಧರಿಸಿ ಸಕಲ ಪ್ರಯತ್ನ ಮಾಡಿದ್ದರು. ಆದರೆ, ಅದು ಫಲ ಕೊಡಲಿಲ್ಲ. ಏಕೆಂದರೆ, ಈ ಪಿ ಕಲ್ಯಾಣ ಸುಂದರಂ ಅವರು ನಟ ರಜನಿಕಾಂತ್ ಅವರ ಕೋರಿಕೆಯನ್ನು ಒಪ್ಪಿ ಅವರ ಮನೆಗೆ ಬಂದು ಇರಲು ಮನಸ್ಸು ಮಾಡಲಿಲ್ಲ.
ಪೋರ್ನ್ ಸ್ಟಾರ್ ಖ್ಯಾತಿಗೂ ಮೊದಲು ಸನ್ನಿ ಲಿಯೋನ್ ಏನ್ಮಾಡ್ತಿದ್ರು..?