ಬಾಲಿವುಡ್‌ನಲ್ಲಿ 99ರಷ್ಟು ಮಂದಿ ಒಳ್ಳೆಯವವರು, ಎಲ್ಲರೂ ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ, ಕಠಿಣ ಶ್ರಮದ ಕಡೆ ಹರಿಸುತ್ತಾರೆ ಹಾಗಾಗಿ ಸದ್ಯ ಟ್ರೆಂಡಿಂಗ್‌ನಲ್ಲಿರುವ #BoycottBollywood ಪದ ತೆಗೆದುಹಾಕುವಂತೆ ನಟ ಸುನಿಲ್ ಶೆಟ್ಟಿ ಮನವಿ ಮಾಡಿದ್ದಾರೆ.
ಬಾಲಿವುಡ್‌ನಲ್ಲಿ 99ರಷ್ಟು ಮಂದಿ ಒಳ್ಳೆಯವವರು, ಎಲ್ಲರೂ ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ, ಕಠಿಣ ಶ್ರಮದ ಕಡೆ ಹರಿಸುತ್ತಾರೆ ಹಾಗಾಗಿ ಸದ್ಯ ಟ್ರೆಂಡಿಂಗ್‌ನಲ್ಲಿರುವ #BoycottBollywood ಪದ ತೆಗೆದುಹಾಕುವಂತೆ ನಟ ಸುನಿಲ್ ಶೆಟ್ಟಿ ಮನವಿ ಮಾಡಿದ್ದಾರೆ. ಇದರಿಂದ ಬಾಲಿವುಡ್ ಇಮೇಜ್ ಅನ್ನು ಮತ್ತೆ ಪಡೆಯಲು ಸಾಧ್ಯ ಎಂದು ಹೇಳಿದ್ದಾರೆ. ಇತ್ತೀಚಿಗಷ್ಟೆ ನಟ ಸುನಿಲ್ ಶೆಟ್ಟಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಜೊತೆ ನಡೆಸಿದ ಸಂವಾದದಲ್ಲಿ ಮಾತನಾಡಿ ಬೈಕಾಟ್ ಬಾಲಿವುಡ್ ಪದ ತೆಗೆದು ಹಾಕುವಂತೆ ಕೇಳಿಕೊಂಡರು.
'ಟ್ರೆಂಡಿಂಗ್‌ನಲ್ಲಿರುವ ಹ್ಯಾಷ್ ಟ್ಯಾಗ್ ಅನ್ನು ತೆಗೆದು ಹಾಕಬೇಕಿದೆ. ನಮ್ಮ ಕಥೆ, ನಮ್ಮ ಸಂಗೀತ ಜಗತ್ತಿಗೆ ಸಂಪರ್ಕ ಹೊಂದಿದೆ. ಹಾಗಾಗಿ ಬಾಲಿವುಡ್‌ಗೆ ಅಂಟಿರುವ ಕಳಂಕ ತೊಡೆದು ಹಾಕಬೇಕಿದೆ. ದಯವಿಟ್ಟು ಈ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೂ ತಲುಪಿಸಿ' ಎಂದು ನಟ ಸುನಿಲ್ ಶೆಟ್ಟಿ ಯೋಗಿ ಆದಿತ್ಯನಾಥ್ ಅವರಿಗೆ ಹೇಳಿದರು.
ಬಾಲಿವುಡ್ ಸದ್ಯ ಸಂಕಷ್ಟದಲ್ಲಿದೆ. 2022ನಲ್ಲಿ ರಿಲೀಸ್ ಆದ ಹಿಂದಿ ಸಿನಿಮಾಗಳು ಹೆಚ್ಚು ಸಕ್ಸಸ್ ಕಂಡಿಲ್ಲ. ಕೆಲವು ಬೆರಳೆಣಿಕೆಯ ಸಿನಿಮಾಗಳು ಬಿಟ್ಟರೆ ಬೇರೆ ಯಾವುದೇ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿಲ್ಲ. ಹೀನಾಯ ಸೋಲು ಕಂಡಿವೆ. ಹಾಗಾಗಿ ಬಾಲಿವುಡ್ ಕಂಗಾಲಾಗಿದ್ದಾರೆ. 2023 ಕೂಡ ಹಾಗೆ ಆಗುತ್ತಾ ಎಂದು ಆತಂಕದಲ್ಲಿ ಎದುರು ನೋಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಬೈಕಾಟ್ ಟ್ರೆಂಡ್ ವೈರಲ್ ಆಗುತ್ತಿರುತ್ತದೆ. ಇತ್ತೀಚಿಗಷ್ಟೆ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದ ವಿವಾದ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಬೇಷರಂ ರಂಗ್ ಹಾಡು ರಿಲೀಸ್ ಆದ ಬೆನ್ನಲ್ಲೇ ಬಾಲಿವುಡ್ ಬಹಿಷ್ಕರಿಸುವಂತೆ, ಸಿನಿಮಾ ಬಹಿಷ್ಕರಿಸುವಂತೆ ಒತ್ತಾಯ ಕೇಳಿಬಂದಿತ್ತು. ದೀಪಿಕಾ ಬಿಕಿನಿ ಡಾನ್ಸ್ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು.
ಅಂದಹಾಗೆ ಸದ್ಯ ಮುಂಬೈನಲ್ಲಿರುವ ಯೋಗಿ ಆದಿತ್ಯನಾಥ್ ಅವರು ಬಾಲಿವುಡ್‌ನ ಅನೇಕ ಸ್ಟಾರ್‌ಗಳ ಜೊತೆ ಸಂವಾದ ನಡೆಸುತ್ತಿದ್ದಾರೆ. ಉತ್ತರ ಪ್ರದೇಶ ಭಾರತದ ಅತ್ಯಂತ ಸಿನಿಮಾ ಸ್ನೇಹಿ ರಾಜ್ಯ ಎಂದು ಪ್ರಚಾರ ಮಾಡುವ ಸಲುವಾಗಿ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಎರಡು ದಿನಗಳ ಕಾಲ ಮುಂಬೈ ಭೇಟಿಗೆ ಆಗಮಿಸಿದ್ದಾರೆ.
ಅಕ್ಷಯ್ ಕಮಾರ್ ಜತೆ ಹೋಲಿಕೆ; ಹುಡುಗಾಟ ಮಾಡಿದ್ದು ನಿಜ, ಸತ್ಯ ಒಪ್ಪಿಕೊಂಡ ಸುನೀಲ್ ಶೆಟ್ಟಿ
ಸುನಿಲ್ ಶೆಟ್ಟಿ ಜೊತೆಗೆ ಜಾಕಿ ಶ್ರಾಫ್, ರಾಜ್ ಗೋಪಾಲ್ ಯಾದವ್, ಸೋನು ನಿಗಮ್, ಬೋನಿ ಕಪೂರ್ ಸೇರಿದಂತೆ ಅನೇಕರು ಭೇಟಿಯಾಗಿದ್ದರು. ಬೋನಿ ಕಪೂರ್ ಮಾತನಾಡಿ, ಯುಪಿಯಲ್ಲಿ ಶೂಟಿಂಗ್ ಮಾಡುವಾಗ ಉತ್ತಮ ಸಮಯ ಕಳೆದಿರುವುದಾಗಿ ಹೇಳಿದ್ದಾರೆ. 'ಸಿಎಂ ಆದಿತ್ಯನಾಥ್ ಅವರು ತಮ್ಮ ರಾಜ್ಯವನ್ನು ಕ್ರೈಮ್ ಮುಕ್ತ ಮಾಡಿರುವುದರಿಂತ ಉತ್ತರ ಪ್ರದೇಶ ಶೂಟಿಂಗ್‌ಗೆ ಆರಾಮಾದಾಯಕವಾಗಿ ಎಂದು ಹೇಳಿದ್ದಾರೆ. ನಾನು ಈಗಾಗಲೇ ಅಲ್ಲಿ ಎರಡು ಸಿನಿಮಾಗಳನ್ನು ಮಾಡಿದ್ದೀನಿ. ಇನ್ನೂ ಹೆಚ್ಚಿನ ಸಿನಿಮಾಗಳನ್ನು ಅಲ್ಲಿ ಮಾಡುವ ಉದ್ದೇಶ ಹೊಂದಿದ್ದೀನಿ' ಎಂದು ಹೇಳಿದರು.
100 ಕ್ಕೂ ಹೆಚ್ಚು ಚಿತ್ರ ಮಾಡಿದ್ರೂ ಸುನಿಲ್ ಶೆಟ್ಟಿ ನೀಡಿದ ಹಿಟ್ಸ್ ಮಾತ್ರ ಬೆರಳೆಣಿಕೆಯಷ್ಟು
ಇತ್ತೀಚಿಗಷ್ಟೆ ಬಾಲಿವುಡ್ ನಟ ಅಕ್ಷಯ್ಕುಮಾರ್ ಕೂಡ ಸಿಎಂ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ದರು. ಉತ್ತರ ರಾಜ್ಯದಲ್ಲಿ ಫಿಲ್ಮ್ ಸಿಟಿ ಕುರಿತು ಚರ್ಚೆ ಮಾಡಿದ್ದರು. ರಾಮ್ ಸೇತು ಸಿನಿಮಾವನ್ನು ವೀಕ್ಷಿಸುವಂತೆ ಕೇಳಿಕೊಂಡಿದ್ದರು. ಹಿಂದಿ ಸಿನಿಮಾರಂಗಕ್ಕೆ ಫಿಲ್ಮ್ ಸಿಟಿ ತುಂಬಾ ಅವಶ್ಯಕತೆ ಇದೆ ಎಂದು ಹೇಳಿದ್ದರು. ಇದೀಗ ಬಾಲಿವುಡ್ ನ ಅನೇಕ ಮಂದಿ ಭೇಟಿಯಾಗಿ ಸಂವಾದ ನಡೆಸಿರುವುದು ಅಚ್ಚರಿ ಮೂಡಿಸಿದೆ.