Jacqueline Fernandez In Love: ವಂಚಕ ಸುಕೇಶ್ - ಜಾಕ್ವೆಲಿನ್‌ ಜೊತೆ ಪ್ರೀತಿ ಸಂಬಂಧ

Published : Jan 02, 2022, 05:00 AM IST
Jacqueline Fernandez In Love: ವಂಚಕ ಸುಕೇಶ್ - ಜಾಕ್ವೆಲಿನ್‌ ಜೊತೆ ಪ್ರೀತಿ ಸಂಬಂಧ

ಸಾರಾಂಶ

200 ಕೋಚಿ ವಂಚಕನ ಪ್ರೀತಿಯ ಕಥೆ ಶ್ರೀಲಂಕಾ ಸುಂದರಿ ಜೊತೆ ಲವ್ ವಂಚಕನ ಪ್ರೀತಿಗೆ ಬಿದ್ದರಾ ಜಾಕ್ವೆಲಿನ್ ಫರ್ನಾಂಡಿಸ್

ನವದೆಹಲಿ(ಜ.02): 200 ಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಬೆಂಗಳೂರು ಮೂಲದ ಸುಕೇಶ್‌ ಚಂದ್ರಶೇಖರ್‌ ತಾನು ವಂಚಕನಲ್ಲ, ನಟಿ ಜಾಕ್ವೆಲಿನ್‌ ಫರ್ನಾಂಡೀಸ್‌ ಜೊತೆ ಪ್ರೀತಿ ಸಂಬಂಧ ಹೊಂದಿದ್ದೆ ಎಂದಿದ್ದಾನೆ. ಆತನ ವಕೀಲ ಅನಂತ್‌ ಮಾಲಿಕ್‌ ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಅದರಲ್ಲಿ ವಂಚನೆ ಪ್ರಕರಣಕ್ಕೂ ನಟಿ ಜೊತೆಗಿನ ಖಾಸಗಿ ಸಂಬಂಧಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾನೆ. ಈ ಪ್ರಕರಣದಲ್ಲಿ ಇಡಿ ವಿಚಾರಣೆ ಎದುರಿಸುತ್ತಿರುವ ಜಾಕ್ವೆಲಿನ್‌ ವಿದೇಶಕ್ಕೆ ತೆರಳದಂತೆ ನಿರ್ಬಂಧಿಸಿರುವ ಎಲ್‌ಒಸಿಯ(ಲುಕ್‌ಔಟ್‌ ಸಕ್ರ್ಯೂಲರ್‌) ರದ್ದು ಕೋರಿ ಮಾಡಿದ್ದ ಮನವಿಯನ್ನು ಇಡಿ ತಿರಸ್ಕರಿಸಿದ ಬೆನ್ನಲ್ಲೇ ಸುಕೇಶ್‌ನಿಂದ ಈ ಹೇಳಿಕೆ ಹೊರಬಿದ್ದಿದೆ.

ಜಾಕ್ವೆಲಿನ್ ಫರ್ನಾಂಡಿಸ್ ಅವರು ಗುಸ್ಸಿ, ಚಾನೆಲ್, ಎರಡು ರಿಂದ ಮೂರು ಡಿಸೈನರ್ ಬ್ಯಾಗ್‌ಗಳನ್ನು ಉಡುಗೊರೆಯಾಗಿ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಜಿಮ್ ಧರಿಸಲು ಗುಸ್ಸಿ ಬಟ್ಟೆಗಳು, ಒಂದು ಜೋಡಿ ಲೂಯಿ ವಿಟಾನ್ ಬೂಟುಗಳು, ಎರಡು ಜೋಡಿ ವಜ್ರದ ಕಿವಿಯೋಲೆಗಳು ಮತ್ತು ಬಹುವರ್ಣದ ಸ್ಟೋನ್ ಕಂಕಣ ಮತ್ತು ಎರಡು ಹರ್ಮ್ಸ್ ಬಳೆಗಳು. ಮಿನಿ ಕೂಪರ್ ಅನ್ನು ಸಹ ಪಡೆದಿದ್ದಾರೆ. ಅದನ್ನು ಹಿಂದಿರುಗಿಸಿರುವುದಾಗಿ ನಟಿ ಹೇಳಿದ್ದಾರೆ.

ಸಾವಿರಾರು ಕೋಟಿ ವಂಚಕನ ಜೊತೆ ಸಿಕ್ಕಾಪಟ್ಟೆ ಕ್ಲೋಸ್, ಜಾಕಿಗಿದು ಬೇಕಿತ್ತಾ

ನಟಿ ಜಾಕ್ವೆಲಿನ್ ಫರ್ನಾಂಡಿಸ್ ದುಬಾರಿ ಉಡುಗೊರೆಗಳ ಆಸೆಗೆ ಬಿದ್ದು ಈಗ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಜಾರಿ ನಿರ್ದೇಶನಾಲಯ ಆರೋಪಿ ಸುಕೇಶ್ ಚಂದ್ರಶೇಖರ್ ಹಾಗೂ ಅತನ ಪತ್ನಿ ಲೀನಾ ಮರಿಯಾ ಪೌಲ್ ಹಾಗೂ ಇನ್ನೂ ಆರು ಮಂದಿಯ ವಿರುದ್ಧ ಬರೋಬ್ಬರಿ 7 ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. 200 ಕೋಟಿ ಹಣ ವಂಚನೆ ಕೇಸ್‌ನಲ್ಲಿ ಇವರೆಲ್ಲರ ವಿರುದ್ಧ ಕೇಸ್ ದಾಖಲಾಗಿದೆ, ಚಾರ್ಜ್‌ಶೀಟ್ ಪ್ರಕಾರ ಆರೋಪಿ ಸುಕೇಶ್ ತಾನು ಜಾಕ್ವೆಲಿನ್‌ಗೆ ಕೊಟ್ಟ ದುಬಾರಿ ಉಡುಗೊರೆಗಳ ಕುರಿತು ಸೀಕ್ರೆಟ್ ರಿವೀಲ್ ಮಾಡಿದ್ದಾನೆ.

ಶ್ರೀಲಂಕಾ ಸುಂದರಿ ಬಾಲಿವುಡ್‌ನ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ 52 ಲಕ್ಷ ರುಪಾಯಿಯ ಕುದುರೆ ಹಾಗೂ 9 ಲಕ್ಷ ರೂಪಾಯಿಯ ಪರ್ಷಿಯನ್ ಬೆಕ್ಕು ಉಡುಗೊರೆಯಾಗಿ ನೀಡಿರುವುದಾಗಿ ಹೇಳಿದ್ದಾನೆ. ಚಾರ್ಜ್‌ಶೀಟ್‌ನಲ್ಲಿ ನಟಿ ಹಾಗೂ ಡ್ಯಾನ್ಸರ್ ನೋರಾ ಫತೇಹಿ ಅವರ ಹೆಸರನ್ನೂ ನಮೂದಿಸಲಾಗಿದೆ. ನಟಿಗೆ ಸುಕೇಶ್ ಚಂದ್ರಶೇಖರ್ ದುಬಾರಿ ಕಾರು ಉಡುಗೊರೆಯಾಗಿ ನೀಡಿರುವುದಾಗಿ ಹೇಳಿದ್ದಾರೆ.

ಸುಕೇಶ್ ಚಂದ್ರಶೇಖರ್ ಅವರು ವಿವಿಧ ಸಂದರ್ಭಗಳಲ್ಲಿ ಹೋಟೆಲ್ ವಾಸ್ತವ್ಯದ ಜೊತೆಗೆ ಖಾಸಗಿ ಜೆಟ್ ಟ್ರಿಪ್‌ಗಳನ್ನು ಏರ್ಪಡಿಸಿದ್ದರು ಎಂದು ಜಾಕ್ವೆಲಿನ್ ಫರ್ನಾಂಡೀಸ್ ಬಹಿರಂಗಪಡಿಸಿದ್ದಾರೆ ಎಂದು ಇಡಿ ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ. 2020 ರ ಡಿಸೆಂಬರ್‌ನಲ್ಲಿ ಸುಖೇಶ್ ಚಂದ್ರಶೇಖರ್ ನೋರಾ ಫತೇಹಿಗೆ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದರು ಎಂಬ ಅಂಶವೂ ಬೆಳಕಿಗೆ ಬಂದಿದೆ.

ಇದಲ್ಲದೆ, ಚಾರಿಟಿ ಕಾರ್ಯಕ್ರಮವೊಂದರಲ್ಲಿ ಚಂದ್ರಶೇಖರ್ ಅವರ ಪತ್ನಿ ಲೀನಾ ಮರಿಯಾ ಪಾಲ್ ಅವರು ನೋರಾ ಫತೇಹಿಗೆ ಗುಸ್ಸಿ ಬ್ಯಾಗ್ ಮತ್ತು ಒಂದು ಐಫೋನ್ ಉಡುಗೊರೆಯಾಗಿ ನೀಡಿದ್ದಾರೆ ಎಂದು ಇಡಿ ಚಾರ್ಜ್ ಶೀಟ್ ಬಹಿರಂಗಪಡಿಸುತ್ತದೆ. ಲೀನಾ ಮಾರಿಯಾ ಪೌಲ್ ತನ್ನ ಪತಿಗೆ ಕರೆ ಮಾಡಿ ಫೋನ್ ಅನ್ನು ಸ್ಪೀಕರ್‌ಗೆ ಹಾಕಿದ್ದರು ಎಂದು ನೋರಾ ಹೇಳಿದ್ದಾರೆ. ನಂತರ ಅವರು ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಅವರು ದೊಡ್ಡ ಅಭಿಮಾನಿಗಳು ಎಂದು ಹೇಳಿದರು ಎನ್ನಲಾಗಿದೆ.

ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ ಸುಕೇಶ್ ಚಂದ್ರಶೇಖರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ರಾನ್‌ಬಾಕ್ಸಿಯ ಮಾಜಿ ಪ್ರವರ್ತಕರು, ಶಿವಿಂದರ್ ಸಿಂಗ್ ಮತ್ತು ಮಲ್ವಿಂದರ್ ಸಿಂಗ್ ಅವರ ಸಂಗಾತಿಗಳಿಗೆ ₹200 ಕೋಟಿ ವಂಚಿಸಿದ್ದಾರೆ ಎಂದು ಆರೋಪದ ಮೇಲೆ ಕೇಸ್ ದಾಖಲಿಸಲಾಗಿತ್ತು. ಪೊಲೀಸ್ ಎಫ್ಐಆರ್ ಆಧರಿಸಿ ಜಾರಿ ನಿರ್ದೇಶನಾಲಯ ಕೇಸ್ ದಾಖಲಿಸಿತ್ತು. ಪ್ರಕರಣದಲ್ಲಿ ವ್ಯಕ್ತಿಯು ಗೃಹ ಸಚಿವಾಲಯದ ಅಧಿಕಾರಿಯಾಗಿ ತನ್ನನ್ನು ತಾನು ಪರಿಚಯಿಸಿಕೊಂಡು ಪ್ರಕರಣದಲ್ಲಿ ಪತಿಯಂದಿರನ್ನು ಬಿಡುಗಡೆ ಮಾಡಲು ನೆರವಾಗುವುದಾಗಿ ವಂಚಿಸಿದ್ದರು. ಈ ವಿಚಾರವಾಗಿ ಸುಕೇಶ್ 2019ರಲ್ಲಿ ಅರೆಸ್ಟ್ ಆಗಿದ್ದರು.  ರೆಲಿಗೇರ್ ಫಿನ್‌ವೆಸ್‌ ಲಿಮಿಟೆಡ್‌ಗೆ 2000 ಕೋಟಿ ವಂಚಿಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?