
ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್‌ನ ವಕೀಲರ ತಂಡ ವೀಶೇಷನ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಅ.26ರಂದು ಅರ್ಜಿ ವಿಚಾರಣೆ ನಡೆಯಲಿದೆ. ಆದರೆ ಈ ಬಾರಿಯೂ ಎನ್‌ಸಿಬಿ ಆರ್ಯನ್ ಖಾನ್ ಜಾಮೀನನ್ನು ಬಲವಾಗಿ ವಿರೋಧಿಸಿದೆ. ತನಿಖೆ ನ್ನೂ ನಡೆಯುತ್ತಿರುವ ಕಾರಣ ಈಗಾಗಲೇ ಸಾಕ್ಷಿಯನ್ನು ಪ್ರಭಾವಿಸಲು ಪ್ರಯತ್ನಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಸಾಕ್ಷಿ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಎನ್‌ಸಿಬಿ ಆರೋಪಿಸಿದೆ. ಗಮನಾರ್ಹವಾಗಿ ಅಂತಹ ಉದ್ದೇಶಿತ ಅಫಿಡವಿಟ್ ಈ ಅರ್ಜಿದಾರರೊಂದಿಗೆ ಸಂಪರ್ಕ ಹೊಂದಿದ ಪೂಜಾ ದದ್ಲಾನಿ ಅವರನ್ನು ಸ್ಪಷ್ಟವಾಗಿ ಹೆಸರಿಸಿದೆ ಎನ್ನಲಾಗಿದೆ. ತನಿಖೆ ನಡೆಯುತ್ತಿರುವಾಗ ಅಂತಹ ಪಂಚ್ ಸಾಕ್ಷಿಗಳ ಮೇಲೆ ಪ್ರಭಾವ ಬೀರುವಂತೆ ತೋರುತ್ತಿದೆ. ತನಿಖೆಯ ಹಂತದಲ್ಲಿ ಅಂತಹ ಹಸ್ತಕ್ಷೇಪವು ದುರುದ್ದೇಶಪೂರಿತವಾಗಿದೆ. ಅದೇ ರೀತಿ ಸತ್ಯದ ಅನ್ವೇಷಣೆಗೆ ಅಡ್ಡಿಯಾಗುತ್ತದೆ ಎಂದು ಎಂದು ಎನ್‌ಸಿಬಿ ಹೈಕೋರ್ಟ್‌ಗೆ ತಿಳಿಸಿದೆ.
ಅಪ್ಪ ಹಿಂದು, ಅಮ್ಮ ಮುಸ್ಲಿಂ: ಈಗ NCB ಆಫೀಸರ್ ಜಾತಿ ಪ್ರಶ್ನೆ ಯಾಕೆ ?
ಎನ್‌ಸಿಬಿ ಅವರು ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ತನಿಖೆಯನ್ನು ಹಳಿತಪ್ಪಿಸುವ ಪ್ರಯತ್ನಗಳು ಹೇಗೆ ನಡೆದಿವೆ ಎಂಬುದನ್ನು ಸೂಚಿಸಿದ್ದಾರೆ. ಆದರೂ ವಿಶೇಷ ನ್ಯಾಯಾಲಯದ ಮುಂದೆ ಸಲ್ಲಿಸಲಾದ ಮನವಿಯನ್ನು ನ್ಯಾಯಾಲಯವು ವಿಚಾರಣೆ ಮಾಡಿ ಅ.30ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ.
'ಆರ್ಯನ್'ಸ್ ಇಂಟರ್ನ್ಯಾಷನಲ್ ಲಿಂಕ್, ಕೇವಲ ಗ್ರಾಹಕರಲ್ಲ':
ವಿಚಾರಣೆಯ ಸಂದರ್ಭದಲ್ಲಿ ಎನ್‌ಸಿಬಿಯು ಆರ್ಯನ್ ಖಾನ್‌ನೊಂದಿಗೆ 'ಅಂತರರಾಷ್ಟ್ರೀಯ ಸಂಪರ್ಕ'ವನ್ನು ಬಹಿರಂಗಪಡಿಸಿದೆ ಎಂದು ವಿಚಾರಣೆಯ ಸಂದರ್ಭದಲ್ಲಿ ಹೇಳಿದೆ. ಇದು 'ಅಕ್ರಮ ಡ್ರಗ್ಸ್ ದಾಸ್ತಾನು ಕಡೆಗೆ ಪ್ರಾಥಮಿಕ ಸೂವನೆ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.