
ಎರಡು ಕೋಲು ಹಿಡಿದು ಎಕ್ಸ್‌ಪರ್ಟ್ ಮಾರ್ಷಲ್ ಆರ್ಟ್ ಪರಿಣಿತೆಯಂತೆ ಬೀಸಿದ ಅಜ್ಜಿ ಈಗ ಸೋನು ಸೂದ್ ಮಾರ್ಷಲ್ ಆರ್ಟ್ ಸ್ಕೂಲ್‌ನ ಗುರು. ಭರಸವೆ ನೀಡಿದಂತೆ ಅಜ್ಜಿಗೆ ನೆರವಾಗಿದ್ದಾರೆ ಬಾಲಿವುಡ್ ನಟ ಸೋನು ಸೂದ್.
ವಾರಿಯರ್ ಆಜಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆದ ಶಾಂತ ಪವಾರ್ ಅಕ ಬಿದಿರಿನ ಕೋಲು ಹಿಡಿದು ಮಕ್ಕಳಿಗೆ ಕೋಲಿನ ತಮ್ಮ ಕಲೆಯನ್ನು ಹೇಳಿಕೊಡುತ್ತಿದ್ದಾರೆ. ಸೋನು ಸೂದ್ ಗಣೇಶ ಚತುರ್ಥಿ ಹಬ್ಬದ ದಿನ 85ರ ಅಜ್ಜಿಗಾಗಿ ಸ್ಕೂಲ್ ತೆರೆದುಕೊಟ್ಟಿದ್ದಾರೆ.
ಕರ್ನಾಟಕದ ದಿವ್ಯಾಂಗ ಮಹಿಳೆಗೆ ತರಕಾರಿ ಅಂಗಡಿ ತೆರೆಯಲು ನಟ ಸೋನು ನೆರವು
ನನ್ನ ಕನಸು ಸೋನು ಸೂದ್‌ನಿಂದಾಗಿ ನಿಜವಾಗಿದೆ. ಈ ಸ್ಕೂಲ್‌ಗೆ ಸೋನು ಹೆಸರಿಟ್ಟಿದ್ದೇನೆ. ಸೋನುಗೆ ಧನ್ಯವಾದಗಳು ಎಂದು ವಿಡಿಯೋ ಮೂಲಕ ಥ್ಯಾಂಕ್ಸ್ ಹೇಳಿದ್ದಾರೆ ಶಾಂತ.
ಕೆಲವು ಮಕ್ಕಳು ಅಜ್ಜಿಯ ಬಳಿ ನಿಂತು ಕೋಲಿನ ಮಾರ್ಷಲ್ ಆರ್ಟ್ ಕಲಿಯೋದನ್ನು ವಿಡಿಯೋದಲ್ಲಿ ಕಾಣಬಹುದು. ಈ ಹಿಂದೆ ಆಜಿಯ ವಿಡಿಯೋ ವೈರಲ್ ಆಗಿದ್ದಾಗ ಸೋನು ಅವರಿಗಾಗಿ ಸ್ಕೂಲ್ ತೆರೆದುಕೊಡುವ ಭರವಸೆ ನೀಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.