ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಸೊನಲ್; ಮದುವೆ ಹಣ ದಾನ

Suvarna News   | Asianet News
Published : May 25, 2021, 04:03 PM IST
ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಸೊನಲ್; ಮದುವೆ ಹಣ ದಾನ

ಸಾರಾಂಶ

ಮರಾಠಿ ನಟಿ ಸೊನಾಲಿ ಕುಲಕರ್ಣಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಗೆ ಎಂದು ಎತ್ತಿಟ್ಟಿದ್ದ ಸಂಪೂರ್ಣ ಹಣವನ್ನು ಭಾರತಗ ಕೋವಿಡ್ ಹೋರಾಟಕ್ಕೆ ದಾನ ಮಾಡಿದ್ದಾರೆ.  

ಕೊರೋನಾ ಎರಡೂ ಅಲೆಗಳು ಜನರ ಜೀವನವನ್ನು ಬುಡಮೇಲು ಮಾಡಿದೆ. ಎಲ್ಲವೂ ಸ್ಥಗಿತಗೊಂಡು ಮನೆಯಲ್ಲಿಯೇ ಕೂರುವಂತ ಪರಿಸ್ಥಿತಿ ಎದುರಾಗಿದೆ. ಈಗಾಗಲೆ ನಿಶ್ಚಯವಾಗಿರುವ ಮದುವೆಗಳು ಸರಳವಾಗಿ ನಡೆಯುತ್ತಿವೆ. ಈ ನಡುವೆಯೂ ಈ ನಟಿ ಮಾನವೀಯ ಕೆಲಸಕ್ಕೆ ಮುಂದಾಗಿ, ತಮ್ಮ ಹೃದಯ ವೈಶಾಲ್ಯತೆ ತೋರಿದ್ದಾರೆ.

ಹೌದು! ಮರಾಠಿ ನಟಿ ಸೊನಲ್ ದುಬೈನ ಉದ್ಯಮಿ ಕುನಾಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆ ಆಗಿದ್ದು ಮೇ.7ರಂದು. ಆದರೆ ಅಭಿಮಾನಿಗಳಿಗೆ ವಿಚಾರ ತಿಳಿಸಿದ್ದು ಇತ್ತೀಚಿಗೆ. ಲಾಕ್‌ಡೌನ್‌ ಮದುವೆ ಆದ ಕಾರಣ ಮದುವೆಗೆ ಎಂದು ಮೀಸಲಿಟ್ಟ ಹಣ ಹಾಗೆಯೇ ಉಳಿದಿದೆ. ಒಂದೊಳ್ಳೆ ರೀತಿಯಲ್ಲಿ ಹಣ ಉಪಯೋಗ ಆಗಬೇಕು ಎಂದು ಸೊನಲ್ ಅದನ್ನು ದಾನ ಮಾಡಿದ್ದಾರೆ.  ಇನ್‌ಸ್ಟಾಗ್ರಾಂನಲ್ಲಿಈ ಬಗ್ಗೆ ಬರೆದುಕೊಂಡಿದ್ದಾರೆ.

ಕತ್ರೀನಾ ಕಳುಹಿಸಿದ್ದ ಬ್ರೇಕಪ್‌ ಮೆಸೇಜ್‌ಗೆ ಸಿಟ್ಟಾದ ಸಲ್ಮಾನ್‌ ಮಾಡಿದ್ದೇನು? 

'ಕೋವಿಡ್‌19ನಿಂದ ಆಗಿರುವ ಪರಿಣಾಮಗಳನ್ನು ಗಮನದಲ್ಲಿ ಇಟ್ಟುಕೊಂಡು ನಾವು ಈ ನಿರ್ಧಾರಕ್ಕೆ ಬಂದೆವು. ಆಡಂಬರಕ್ಕಿಂತ ಮದುವೆ ಮುಖ್ಯ, ಸರಳವಾಗಿಯಾದರೂ ಸೈ ಎಂದು ನಾವು ನಿರ್ಧರಿಸಿದೆವು. ಮದುವೆಗೆ ಎಂದು ಕೂಡಿಟ್ಟ ಹಣವನ್ನು ತೊಂದರೆಯಲ್ಲಿರುವವರಿಗೆ ಸಹಾಯ ಮಾಡಲು ಬಳಸಿಕೊಳ್ಳುತ್ತೇವೆ. ಪೋಷಕರ ಒಪ್ಪಿಗೆ ಪಡೆದು ನಾವು ದುಬೈನಲ್ಲಿರುವ ಸಣ್ಣ ಮಂದಿರವೊಂದರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟೆವು. ಇದು ಎರಡು ದಿನಗಳಲ್ಲಿ ಪ್ಲ್ಯಾನ್ ಆಗಿದ್ದು. ನಮ್ಮ ಮದುವೆ ಕೇವಲ 15 ನಿಮಿಷಗಳಲ್ಲಿ ನಡೆಯಿತು,' ಎಂದು ಬರೆದುಕೊಂಡಿದ್ದಾರೆ.

2006ರಲ್ಲಿ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಸೊನಲ್ ಸುಮಾರು 50ಕ್ಕೂ ಹೆಚ್ಚು ಮರಾಠಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.  ಹಿಂದಿಯ 'ಗ್ರ್ಯಾಂಡ್ ಮಸ್ತಿ', 'ಸಿಂಘಂ ರಿಟರ್ನ್ಸ್‌' ಸಿನಿಮಾದಲ್ಲೂ ನಟಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?