ಸಮಂತಾರಿಂದ ದೂರ ಆದ ಬಳಿಕ ನಾಗ ಚೈತನ್ಯ ಮತ್ತು ಶೋಭಿತಾ ಇಬ್ಬರೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಅನುಮಾನ ದಟ್ಟವಾಗಲು ಕಾರಣವಾಗಿದೆ. ಆದರೆ ಈ ಬಗ್ಗೆ ನಾಗ ಚೈತನ್ಯ ಅಥವಾ ಶೋಭಿತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೀಗ ಶೋಭಿತಾ ಅವರ ಹಳೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಗಾನಚೈತನ್ಯ ಜೊತೆ ಡೇಟಿಂಗ್ ವದಂತಿ ಬೆನ್ನಲ್ಲೇ ಈ ವಿಡಿಯೋ ವೈರಲ್ ಆಗಿದೆ.
ಟಾಲಿವುಡ್ ಸ್ಟಾರ್ ನಟಿ ಸಮಂತಾ (Samantha) ಮತ್ತು ನಟ ನಾಗಚೈತನ್ಯ (Naga Chaitanya) ಇಬ್ಬರು ಬೇರೆ ಬೇರೆಯಾಗಿ ಅನೇಕ ತಿಂಗಳುಗಳೇ ಕಳೆದಿದೆ. ಇಬ್ಬರ ಬ್ರೇಕಪ್ ಬಳಿಕ ನಾಗಚೈತನ್ಯ ಡೇಟಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ನಾಗಚೈತನ್ಯ ಸಮಂತಾಗೆ ವಿಚ್ಛೇದನ ನೀಡಿದ ಬಳಿಕ ಮತ್ತೋರ್ವ ನಟಿಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಮೇಡ್ ಇನ್ ಹೆವನ್ ನಟಿ ಶೋಭಿತಾ ದುಲಿಪಾಲಾ (Sobhita Dhulipala) ಜೊತೆ ನಾಗ ಚೈತನ್ಯ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ನಾಗ್ ಮತ್ತು ಶೋಭಿತಾ ಒಬ್ಬರಿಗೊಬ್ಬರು ಪ್ರೀತಿ ಮಾಡುತ್ತಿದ್ದು ಇಬ್ಬರು ಕದ್ದು ಮುಚ್ಚಿ ಓಡಾಡುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ವೈರಲ್ ಆಗಿದೆ. ಶೋಭಿತಾ ಇತ್ತೀಚಿಗೆ ನಾಗಚೈತನ್ಯ ಅವರ ಜುಬ್ಲಿಹಿಲ್ಸ್‌ನಲ್ಲಿರುವ ನಿವಾಸದಲ್ಲಿ ಒಟ್ಟಿಗೆ ಕಾಣಿಸಿಕೊಂಡ ಬಳಿಕ ಈ ಸುದ್ದಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದೆ.
ಇಬ್ಬರೂ ಕದ್ದುಮುಚ್ಚಿ ಓಡಾಡುತ್ತಿದ್ದಾರೆ, ಪ್ರವಾಸಕ್ಕೂ ಹೋಗುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚಿಗೆ ಇಬ್ಬರೂ ನಾಗ್ ನಿವಾಸದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಜೊತೆಗೆ ಕಾರಿನಲ್ಲಿ ಒಟ್ಟಿಗೆ ಹೊರಟು ಹೋಗಿದ್ದಾರೆ. ಸಮಂತಾರಿಂದ ದೂರ ಆದ ಬಳಿಕ ನಾಗ ಚೈತನ್ಯ ಮತ್ತು ಶೋಭಿತಾ ಇಬ್ಬರೂ ಹೆಚ್ಚಾಗಿ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಅನುಮಾನ ದಟ್ಟವಾಗಲು ಕಾರಣವಾಗಿದೆ. ಆದರೆ ಈ ಬಗ್ಗೆ ನಾಗ ಚೈತನ್ಯ ಅಥವಾ ಶೋಭಿತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೀಗ ಶೋಭಿತಾ ಅವರ ಹಳೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಗಾನಚೈತನ್ಯ ಜೊತೆ ಡೇಟಿಂಗ್ ವದಂತಿ ಬೆನ್ನಲ್ಲೇ ಈ ವಿಡಿಯೋ ವೈರಲ್ ಆಗಿದೆ.
ಅಂದಹಾಗೆ ವಿಡಿಯೋದಲ್ಲಿ ಶೋಭಿತಾ ವಿಮಾನದಲ್ಲಿ ಕುಳಿತಿದ್ದಾರೆ. ನಗುತ್ತಲೇ ಹಾಯ್ ಹೇಳುವ ಶೋಭಿತಾ ಬಳಿಕ ಮಿಡ್ಲ್ ಪಿಂಗರ್ ತೋರಿಸಿದ್ದಾರೆ. ಶೋಭಿತಾ ಅವರ ಈ ವಿಡಿಯೋ ಯಾವಾಗ ಮಾಡಿದ್ದು ಎನ್ನುವ ಬಗ್ಗೆ ಯಾವುದೇ ಸುಳಿವು ಇಲ್ಲ. ಆದರೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ಶೋಭಿತಾ ತನ್ನ ಬಗ್ಗೆ ಗಾಸಿಪ್ ಮಾಡಿದವರಿಗೆ ಹೀಗೆ ಮಿಡ್ಲ್ ಫಿಂಗರ್ ತೋರಿಸುವ ಮೂಲಕ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗುತ್ತಿದೆ. ಬೇಕು ಅಂತನೆ ಈ ವಿಡಿಯೋ ವೈರಲ್ ಮಾಡಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಮೂಲಗಳ ಪ್ರಕಾರ ನಟಿ ಶೋಭಿತಾ ಡೇಟಿಂಗ್ ವಿಚಾರವನ್ನು ತಳ್ಳಿ ಹಾಕಿದ್ದಾರೆ ಎನ್ನಲಾಗಿದೆ. ಆದರೆ ನಾಗಚೈತನ್ಯ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ನಾಗಚೈತನ್ಯ ಅಭಿಮಾನಿಗಳು ಸಮಂತಾ ಪಿಆರ್ ತಂಡದ ವಿರುದ್ಧ ರೋಚ್ಚಿಗೆದ್ದಿದ್ದರು. ನಾಗಚೈತನ್ಯ ಮತ್ತು ಶೋಭಿತಾ ಡೇಟಿಂಗ್ ವಿಚಾರವನ್ನು ಸಮಂತಾ ಅವರ ಪಿಆರ್ ಟೀಂ ಲೀಕ್ ಮಾಡಿದೆ ಎಂದು ನಾಗಚೈತನ್ಯ ಅಭಿಮಾನಿಗಳು ಆರೋಪಿಸುತ್ತಿದ್ದಾರೆ. ಸಮಂತಾ ಮತ್ತು ಅವರ ಪಿಆರ್ ತಂಡದ ಜೊತೆ ನಾಗಚೈತನ್ಯ ಅಭಿಮಾನಿಗಳ ಸಂಬಂಧ ಚೆನ್ನಾಗಿಲ್ಲ. ಹಾಗಾಗಿ ನಾಗಚೈತನ್ಯ ಡೇಟಿಂಗ್ ವಿಚಾರವನ್ನು ಹಬ್ಬಿಸಿದೆ ಎಂದು ನಾಗ್ ಅಭಿಮಾನಿಗಳ ಆರೋಪ.
ನಾಗಚೈತನ್ಯ-ಶೋಭಿತಾ ಬಗ್ಗೆ ವದಂತಿ ಹರಡಿಸಿದ್ರಾ ಸಮಂತಾ ಫ್ಯಾನ್ಸ್? ಗರಂ ಆದ ಸ್ಯಾಮ್
ಸಮಂತಾ ಪ್ರತಿಕ್ರಿಯೆ
ಇದರಿಂದ ಕೆರಳಿದ್ದ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು. 'ಹುಡುಗಿಯರ ಮೇಲಿನ ವಂದತಿಗಳು ನಿಜವಾಗಿರಲೇ ಬೇಕು. ಹುಡುಗರ ಮೇಲಿನ ವದಂತಿಯನ್ನು ಹುಡುಗಿಯರೇ ಮಾಡುತ್ತಾರೆ. ಹುಡುಗರೇ ಈಗಲಾದರೂ ತಿಳಿದುಕೊಳ್ಳಿ. ನಾವು ಇದರಿಂದ ತುಂಬಾ ದೂರ ಬಂದಿದ್ದೇವೆ. ನೀವು ಕೂಡ ಮೂವ್ ಆನ್ ಆಗಿ. ನಿಮ್ಮ ಕೆಲಸ ಮತ್ತು ಕುಟುಂಬದ ಕಡೆ ಗಮನ ಕೊಡಿ, ಮೂವ್ ಆನ್ ಆಗಿ' ಎಂದು ಸಮಂತಾ ಹೇಳಿದ್ದರು. ಸಮಂತಾ ಪ್ರತಿಕ್ರಿಯೆಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಸೂಪರ್ ಪ್ರತಿಕ್ರಿಯೆ ಎಂದು ಕಾಮೆಂಟ್ ಮಾಡಿ ಸಮಂತಾ ಬೆಂಬಲ ನೀಡಿದ್ದರು.
ಸಮಂತಾಗೆ ಗುಡ್‌ಬೈ ಬಳಿಕ ಶೋಭಿತಾ ಜೊತೆ ನಾಗಚೈತನ್ಯ ಲವ್ವಿಡವ್ವಿ?
ಶೋಭಿತಾ ಧೂಲಿಪಾಲಾ ಸದ್ಯ 'ಪೊನ್ನಿಯಿನ್ ಸೆಲ್ವನ್' ನಲ್ಲಿ ನಟಿಸಿದ್ದು ರಿಲೀಸ್‌ಗೆ ರೆಡಿಯಾಗಿದೆ. ಹಿಂದಿ ಚಿತ್ರ 'ಸಿತಾರಾ' ಮತ್ತು 'ಮಂಕಿ ಮ್ಯಾನ್' ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಈ ಸಿನಿಮಾ ಇನ್ನು ರಿಲೀಸ್ ಆಗಬೇಕಿದೆ. ಇತ್ತೀಚಿಗಷ್ಟೆ ಶೋಭಿತಾ ಮೇಜರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.