ಸ್ಯಾನಿಟರಿ ಪ್ಯಾಡ್ ಜಾಹೀರಾತಿನಲ್ಲಿ ನಟಿ, ಸಚಿವೆ ಸ್ಮೃತಿ ಇರಾನಿ; ಹಳೆ ವಿಡಿಯೋ ಶೇರ್ ಮಾಡಿ ಹೇಳಿದ್ದೇನು?

By Shruthi KrishnaFirst Published May 5, 2023, 1:38 PM IST
Highlights

ನಟಿ, ಸಚಿವೆ ಸ್ಮೃತಿ ಇರಾನಿ ಸ್ಯಾನಿಟರಿ ಪ್ಯಾಡ್ ಜಾಹೀರಾತಿನ ವಿಡಿಯೋ ಶೇರ್ ಮಾಡಿದ್ದಾರೆ. ಹಳೆ ವಿಡಿಯೋ ಶೇರ್ ಮಾಡಿ ಸ್ಮೃತಿ ಅಂತಹ ಯೋಜನೆಯು ಮಾಡೆಲ್‌ನ ಗ್ಲಾಮರ್ ಆಧಾರಿತ ವೃತ್ತಿಜೀವನವನ್ನು ಹೇಗೆ ಕೊಲ್ಲುತ್ತದೆ ಎಂದು ಹೇಳಿದ್ದಾರೆ. 

ಸಚಿವೆ ಸ್ಮೃತಿ ಇರಾನಿ ತನ್ನ ಹಳೆಯ ಸ್ಯಾನಿಟರಿ ಪ್ಯಾಡ್ ಜಾಹೀರಾತನ್ನು ಶೇರ್ ಮಾಡಿದ್ದಾರೆ. 25 ವರ್ಷಗಳ ಹಿಂದಿನ ಜಾಹೀರಾತು ಇದಾಗಿದ್ದು ಸ್ಮೃತಿ ಸಿಕ್ಕಾಪಟ್ಟೆ ತೆಳ್ಳಗೆ ಇದ್ದರು. ಸ್ಮೃತಿ ವಿಡಿಯೋ ಶೇರ್ ಮಾಡಿ, ಅಂತಹ ಯೋಜನೆಯು ಮಾಡೆಲ್‌ನ ಗ್ಲಾಮರ್ ಆಧಾರಿತ ವೃತ್ತಿಜೀವನವನ್ನು ಹೇಗೆ ಕೊಲ್ಲುತ್ತದೆ ಎಂದು ಹೇಳಿದ್ದಾರೆ. ಆ ಜಾಹೀರಾತು ಬಳಿಕ ಹಿಂದೆ ತಿರುಗಿದ್ದೇ ಇಲ್ಲ ಎಂದು ಬರೆದು ಕೊಂಡಿದ್ದಾರೆ. ಕ್ಯುಂಕಿ ಸಾಸ್ ಭೀ ಕಭಿ ಬಹು ಥಿ ಟಿವಿ ಶೋ ಮೂಲಕ ಖ್ಯಾತಿಗಳಿಸಿದ ಸ್ಮೃತಿ ಮಾಡಲಿಂಗ್‌ನಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಹಳೆಯ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಸ್ಮೃತಿ ವಿಡಿಯೋಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 25 ವರ್ಷಗಳ ಹಿಂದೆಯೇ ಇಂಥ ಜಾಹೀರಾತಿನಲ್ಲಿ ನಟಿಸುವ ನಿರ್ಧಾರ ತೆಗೆದುಕೊಂಡಿದ್ದು ಗ್ರೇಟ್ ಎಂದು ಹೇಳುತ್ತಿದ್ದಾರೆ. ಇನ್ನು ಅನೇಕರು ಇದು ನಿಜಕ್ಕೂ ಸ್ಮೃತಿನಾ ಎಂದು ಅಚ್ಚರಿಯಿಂದ ಕೇಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಬರೆದುಕೊಂಡಿರುವ ಸ್ಮೃತಿ ದೊಡ್ಡ ಕಂಪನಿಯ ಮೊದಲ ಜಾಹೀರಾತು ಎಂದು ಹೇಳಿದ್ದಾರೆ.  

ನಿನ್ನನ್ನ ನೀನು ಸಾಯಿಸಿಕೊಳ್ಳಬೇಡ ಅಂದಿದ್ದೆ; ಸುಶಾಂತ್ ಸಿಂಗ್ ನೆನೆದು ಕಣ್ಣೀರಿಟ್ಟ ಸ್ಮೃತಿ ಇರಾನಿ

Latest Videos

'25 ವರ್ಷಗಳ ಹಿಂದೆ ನಿಮ್ಮ ಹಿಂದಿನ whispers. ದೊಡ್ಡ ಕಂಪನಿಯ ನನ್ನ ಮೊದಲ ಜಾಹೀರಾತು. ಆದಾಗ್ಯೂ, ಈ ವಿಷಯ ಇನ್ನೂ ಫ್ಯಾನ್ಸಿ ಆಗಿರಲಿಲ್ಲ. ವಾಸ್ತವವಾಗಿ, ಸ್ಯಾನಿಟರಿ ಪ್ಯಾಡ್ ಜಾಹೀರಾತು ಒಳಗೊಂಡಿರುವ ಮಾಡೆಲ್‌ಗೆ ಗ್ಲಾಮರ್ ಆಧಾರಿತ ವೃತ್ತಿಜೀವನ ನಾಶವಾಗುತ್ತಿದ್ದ ಕಾರಣ  ಅನೇಕರು ಈ ಯೋಜನೆಯನ್ನು ಬಲವಾಗಿ ವಿರೋಧಿಸಿದರು. ಕ್ಯಾಮೆರಾದ ಮುಂದೆ ನನ್ನ ಕಾರ್ಯವನ್ನು ಪ್ರಾರಂಭಿಸಲು ಉತ್ಸುಕನಾಗಿದ್ದ ನಾನು ಹೌದು ಎಂದು ಹೇಳಿದೆ.  ಮುಟ್ಟಿನ ನೈರ್ಮಲ್ಯದ ಬಗ್ಗೆ ಮಾತು ಏಕೆ ನಿಷೇಧಿತವಾಗಿರಬೇಕು. ಅಂದಿನಿಂದ ಹಿಂತಿರುಗಿ ನೋಡುವುದೇ ಇಲ್ಲ' ಎಂದು ಹೇಳಿದ್ದಾರೆ.

ಗರ್ಭಪಾತವಾಗಿದ್ದರೂ ಬಿಟ್ಟಿಲ್ಲ ಕೆಲಸಕ್ಕೆ ಕರೆದ್ರು, ಸಾಕ್ಷಿ ತೋರಿಸಬೇಕಾಯಿತು; ನಟಿ, ಸಚಿವೆ ಸ್ಮೃತಿ ಇರಾನಿ

1999 ರಲ್ಲಿ ಕ್ಯುಂಕಿ ಸಾಸ್ ಭೀ ಕಭಿ ಬಹು ಥಿ ಧಾರಾವಾಹಿಯಲ್ಲಿ ತುಳಸಿ ವಿರಾನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸ್ಮೃತಿ ದೊಡ್ಡ ಮಟ್ಟದ ಖ್ಯಾತಿಗಳಿಸಿದರು.  ಮೊದಲ ಧಾರಾವಾಹಿಯಲ್ಲೇ ಸ್ಮಿೃತಿ ಸಿಕ್ಕಾಪಟ್ಟೆ ಖ್ಯಾತಿಗಳಿಸಿದರು. 2000 ರಿಂದ 2008 ರವರೆಗೆ ಎಂಟು ವರ್ಷಗಳ ಕಾಲ ಧಾರವಾಹಿ ಲೋಕದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ನಟನೆ ಜೊತೆಗೆ ಜಾಹೀರಾತಿನಲ್ಲೂ ಮಿಂಚಿದರು.  ಬಳಿಕ ಸ್ಮೃತಿ ರಾಜಕೀಯಕ್ಕೆ ಜೀಗಿದರು. 2013 ರಲ್ಲಿ ನಟನೆಯನ್ನು ತೊರೆದು ರಾಜಕೀಯಕ್ಕೆ ಬಂದ ಸ್ಮೃತಿ ಸದ್ಯ ಸಕ್ರೀಯರಾಗಿದ್ದಾರೆ. ಆಗಾಗ ಸ್ಮೃತಿ ತನ್ನ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಿರುತ್ತಾರೆ, ನಟನೆಯ ವಿಡಿಯೋ ಅಥವಾ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. 

click me!