ಮಲ್ಲಿಕಾ ಶೆರಾವತ್ ಹೊಟ್ಟೆ ಮೇಲೆ ರೊಟ್ಟಿ ಬೇಯಿಸಲು ಮುಂದಾಗಿದ್ದ ಟಾಲಿವುಡ್ ನಿರ್ದೇಶಕರು..!

Published : Oct 12, 2024, 12:34 PM IST
ಮಲ್ಲಿಕಾ ಶೆರಾವತ್ ಹೊಟ್ಟೆ ಮೇಲೆ ರೊಟ್ಟಿ ಬೇಯಿಸಲು ಮುಂದಾಗಿದ್ದ ಟಾಲಿವುಡ್ ನಿರ್ದೇಶಕರು..!

ಸಾರಾಂಶ

ಐಟಂ ಸಾಂಗ್ ಗೆ ಪ್ರಸಿದ್ಧಿ ಪಡೆದಿರುವ ನಟಿ ಮಲ್ಲಿಕಾ ಶೆರಾವತ್ ಮತ್ತೆ ಹುಡುಗ್ರ ನಿದ್ರೆಗೆಡಿಸಿದ್ದಾರೆ. ಅವರ ಹೊಸ ಸಿನಿಮಾ ತೆರೆಗೆ ಬಂದಿದ್ದು, ಈ ಮಧ್ಯೆ ನಟಿ ಟಾಲಿವುಡ್ ನಿರ್ದೇಶಕರೊಬ್ಬರ ವಿಚಿತ್ರ ಬಯಕೆಯನ್ನು ಎಲ್ಲರ ಮುಂದಿಟ್ಟಿದ್ದಾರೆ.   

ಹಾಟ್ ಬ್ಯೂಟಿಫುಲ್ ಐಟಂ ಸಾಂಗ್ ನಟಿ ಮಲ್ಲಿಕಾ ಶೆರಾವತ್ (Hot beautiful item song  actress Mallika Sherawat) ಮತ್ತೆ ಫೀಲ್ಡ್ ಗೆ ಬಂದಿದ್ದಾರೆ. ಅಕ್ಟೋಬರ್ 11  ರಂದು ಬಿಡುಗಡೆಯಾದ ವಿಕ್ಕಿ ವಿದ್ಯಾ ಕಾ ವೋ (Vicky Vidya Ka Vo)  ಸಿನಿಮಾದಲ್ಲಿ ಅವರು ಹೆಜ್ಜೆ ಹಾಕಿದ್ದಾರೆ. ಈ ಸಿನಿಮಾದಲ್ಲಿ ರಾಜ್‌ಕುಮಾರ್ ರಾವ್ (Rajkumar Rao) ಮತ್ತು ತ್ರಿಪ್ತಿ ಡಿಮ್ರಿ (Tripti Dimri) ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ. ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇರುವ ಮಲ್ಲಿಕಾ ಶೆರಾವತ್, ತಮ್ಮ ಹಳೆ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಟಾಲಿವುಡ್ ಡೈರೆಕ್ಟರ್ ಒಬ್ಬರು ಮಲ್ಲಿಕಾ ಶೆರಾವತ್ ಅವರಿಂದ ಏನು ಬಯಸಿದ್ರು ಎಂಬುದನ್ನು ನಟಿ ಹೇಳಿದ್ದಾರೆ.

ಟಾಲಿವುಡ್ (Tollywood) ರಹಸ್ಯ ಬಿಚ್ಚಿಟ್ಟ ನಟಿ : ಮಲ್ಲಿಕಾ ಎಲ್ಲ ಭಾಷೆಗಳಲ್ಲಿ ನಟಿಸಿರುವ ನಟಿ. ಐಟಂ ಸಾಂಗ್ ಎಂದಾಗ ನೆನೆಪಾಗುವ ಕೆಲ ನಟಿಯರಲ್ಲಿ ಮಲ್ಲಿಕಾ ಸೇರಿದ್ದಾರೆ. ಶೂಟಿಂಗ್ ವೇಳೆ ಆಕ್ಟರ್ಸ್ ಗೆ ಚಿತ್ರವಿಚಿತ್ರ ಅನುಭವವಾಗುತ್ತದೆ.  ಕೆಲವೊಂದು ಕೆಟ್ಟದಾಗಿದ್ರೆ ಮತ್ತೆ ಕೆಲವು ತಮಾಷೆಯಿಂದ ಕೂಡಿರುತ್ತವೆ. ಮಲ್ಲಿಕಾ ಟಾಲಿವುಡ್‌ನ ತಮ್ಮ ವಿಚಿತ್ರ ಅನುಭವದ ಬಗ್ಗೆ ಹೇಳಿದ್ದಾರೆ. 

ಮಗನ ಮಾಜಿ ಗರ್ಲ್ ಫ್ರೆಂಡ್ ಜೊತೆ ಜಯಾ ಹರಟೆ, ನಾಚಿಕೆಯಾಗಲ್ವಾ ಎಂದ ಐಶ್ ಫ್ಯಾನ್ಸ್

ಹೊಟ್ಟೆ ಮೇಲೆ ರೊಟ್ಟಿ : ಪ್ರೇಕ್ಷಕರನ್ನು ಸೆಳೆಯಲು ನಿರ್ದೇಶಕರು ಏನೇನೋ ಕಸರತ್ತು ಮಾಡ್ತಾರೆ. ಅದ್ರಲ್ಲೂ ಐಟಂ ಸಾಂಗ್ ಎಂದಾಗ ಇಂಥ ಪ್ರಯೋಗ ಹೆಚ್ಚಾಗುತ್ತದೆ. ಮಲ್ಲಿಕಾ ಶೆರಾವತ್ ಪ್ರಕಾರ, ಟಾಲಿವುಡ್ ಸಿನಿಮಾ ಒಂದರ ಸಾಂಗ್ ಶೂಟಿಂಗ್ ನಡೆಯುತ್ತಿತ್ತು.  ಸಾಂಗ್ ಮಾಮೂಲಿಯಾಗಿರುತ್ತದೆ ಎಂದು ಭಾವಿಸಿದ್ದ ಮಲ್ಲಿಕಾ, ಶೂಟಿಂಗ್ ಗೆ ಒಪ್ಪಿದ್ದರು. ಆದ್ರೆ ಅಲ್ಲಿ ನಡೆದಿದ್ದೇ ಬೇರೆ. ಮಲ್ಲಿಕಾ ಶೆರಾವತ್ ಬಳಿ ಬಂದ ನಿರ್ದೇಶಕರು, ಮೇಡಂ, ನೀವು ಎಷ್ಟು ಹಾಟ್ ಆಗಿದ್ದೀರಿ ಎಂದು ತೋರಿಸಲು ನಾವು ಬಯಸುತ್ತೇವೆ. ಈ ದೃಶ್ಯದಲ್ಲಿ ನಾಯಕ ನಿಮ್ಮ ಹೊಟ್ಟೆ ಮೇಲೆ ರೊಟ್ಟಿ ಬೇಯಿಸುತ್ತಾರೆ ಎಂದಿದ್ದರಂತೆ. ಇದನ್ನು ಕೇಳಿ ಶಾಕ್ ಆದ ಮಲ್ಲಿಕಾ, ಶೂಟಿಂಗ್ ಗೆ ಗುಡ್ ಬೈ ಹೇಳಿದ್ದರು. ಮಲ್ಲಿಕಾ ಶೆರಾವತ್, ಯಾವ ಸಿನಿಮಾ, ಯಾವ ನಿರ್ದೇಶಕರು ಎಂಬುದನ್ನು ಹೇಳಿಲ್ಲ.

ಮಾತು ಮುಂದುವರೆಸಿದ ಮಲ್ಲಿಕಾ ಶೆರಾವತ್, ಹೆಣ್ಣಿನ ಚೆಲುವನ್ನು ಬಿಂಬಿಸುವ ಅವರ ಕಲ್ಪನೆ ಕೇಳಿ ಆಶ್ಚರ್ಯವಾಯಿತು. ನನಗೆ ಇದು ಇಷ್ಟವಾಗ್ಲಿಲ್ಲ. ಕೆಲಸ ಬಿಟ್ಟು ಬಂದೆ ಎಂದಿದ್ದಾರೆ. ಅದೇ ಸಂದರ್ಶನದಲ್ಲಿ  ಮಲ್ಲಿಕಾ ಶೆರಾವತ್, ಚಲನಚಿತ್ರಗಳಲ್ಲಿನ ಮಹಿಳೆಯರ ಸೌಂದರ್ಯವನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬುದನ್ನು ಹೇಳಿದ್ದಾರೆ. ಚಿತ್ರರಂಗವು ಮಹಿಳೆಯರ ಲೈಂಗಿಕತೆಯನ್ನು ದಶಕಗಳಿಂದ ಬಳಸಿಕೊಳ್ಳುತ್ತಿದೆ. ಮಹಿಳೆಯರನ್ನು ಕಾರು, ಸಾಬೂನು, ತೊಳೆಯುವ ಯಂತ್ರ ಮತ್ತು ಟೂತ್‌ಪೇಸ್ಟ್ ಸೇರಿದಂತೆ ಎಲ್ಲ ವಸ್ತುಗಳ ಮಾರಾಟ ಮಾಡಲು ಬಳಸಲಾಗುತ್ತದೆ ಎಂದಿದ್ದಾರೆ. 

ತೆರೆಯಲ್ಲಿ ಅಬ್ಬರಿಸಿದ ಮಾರ್ಟಿನ್: ಬಹುನಿರೀಕ್ಷೆಯ ಧ್ರುವ ಸರ್ಜಾ ಸಿನಿಮಾ ಹೇಗೆ ಮೂಡಿಬಂದಿದೆ?

2022 ರಲ್ಲಿ ರಜತ್ ಕಪೂರ್ ಅವರ RK/RKayನಲ್ಲಿ ಮಲ್ಲಿಕಾ ಕಾಣಿಸಿಕೊಂಡಿದ್ರು. ನಂತ್ರ ಬ್ರೇಕ್ ತೆಗೆದುಕೊಂಡಿದ್ದ ಮಲ್ಲಿಕಾ ಮತ್ತೆ ಬಂದಿದ್ದಾರೆ. ಸಂದರ್ಶನದಲ್ಲಿ ಮಲ್ಲಿಕಾ, ತಮ್ಮ ಬಾಲ್ಯ ಸೇರಿದಂತೆ ಅನೇಕ ವಿಷ್ಯಗಳ ಬಗ್ಗೆ ಮಾತನಾಡಿದ್ದಾರೆ. ಬಾಲ್ಯದಿಂದಲೂ ಒಬ್ಬಂಟಿಯಾಗಿ ಹೋರಾಡಿದರು ಮಲ್ಲಿಕಾ ಶೆರಾವತ್. ಅವರಿಗೆ ತಂದೆಯಾಗ್ಲಿ, ತಾಯಿಯಾಗ್ಲಿ ಬೆಂಬಲ ನೀಡಿರಲಿಲ್ಲ. ಹರ್ಯಾಣದಲ್ಲಿ ಪಿತೃಪ್ರಧಾನ ಸಮಾಜ ಕಠೋರವಾಗಿದೆ. ಪುರುಷರು ಮಹಿಳೆಯರನ್ನು ತುಳಿಯೋದು ಮಾಮೂಲಿ. ಆದ್ರೆ ಮಹಿಳೆಯರು ಕೂಡ ಮಹಿಳೆಯರನ್ನು ಬೆಳೆಯಲು ಬಿಡೋದಿಲ್ಲ. ಪಿತೃಪ್ರಧಾನ ಸಮಾಜದ ಕಪಿಮುಷ್ಠಿಯಲ್ಲಿ ಅವರನ್ನು ಬಚ್ಚಿಡುವ ಪ್ರಯತ್ನ ಮಾಡ್ತಾರೆ ಎಂದು ಮಲ್ಲಿಕಾ ಖಂಡಿಸಿದ್ದಾರೆ. ನನ್ನ ಮನೆಯಲ್ಲೇ ನನ್ನ ಹಾಗೂ ನನ್ನ ಸಹೋದರನ ಮಧ್ಯೆ ತುಂಬಾ ತಾರತಮ್ಯ ನಡೆದಿದೆ. ನಾನು ಹುಟ್ಟಿದ ಮೇಲೆ ನನ್ನ ತಾಯಿ ಖಿನ್ನತೆಗೆ ಒಳಗಾಗಿದ್ದರು  ಎಂದು ಮಲ್ಲಿಕಾ ಮನಸ್ಸು ಬಿಚ್ಚಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?