ದುರ್ಗಾ ಪೆಂಡಾಲ್ ನಲ್ಲಿ ಜಯಾ ಬಚ್ಚನ್, ರಾಣಿ ಮುಖರ್ಜಿ , ಶ್ವೇತಾ ನಂದಾ ಗಮನ ಸೆಳೆದಿದ್ದಾರೆ. ಒಂದ್ಕಡೆ ಕುಳಿತು ಮಾತನಾಡ್ತಿದ್ದ ಸೆಲೆಬ್ರಿಟಿ ನೋಡಿ ಐಶ್ ಫ್ಯಾನ್ಸ್ ಕೋಪಗೊಂಡಿದ್ದಾರೆ.
ಬಾಲಿವುಡ್ ನಲ್ಲಿ ವಿಜಯದಶಮಿ (Bollywood Vijayadashami) ರಂಗೇರಿದೆ. ದುರ್ಗೆ ಪೂಜೆ (Durga Puja)ಯಲ್ಲಿ ಸೆಲೆಬ್ರಿಟಿಗಳು ಬ್ಯುಸಿಯಾಗಿದ್ದಾರೆ. ನಟಿ ಕಾಜೋಲ್ ಹಾಗೂ ರಾಣಿ ಮುಖರ್ಜಿ ನೇತೃತ್ವದಲ್ಲಿ ನಡೆಯುವ ಮುಂಬೈನ ದುರ್ಗಾ ಪೆಂಡಾಲ್ ಎಲ್ಲರ ಗಮನ ಸೆಳೆದಿದೆ. ಪ್ರತಿ ವರ್ಷದಂತೆ ಈ ವರ್ಷವೂ ದುರ್ಗಾ ಪೆಂಡಾಲ್ ನಲ್ಲಿ ಸಾಕಷ್ಟು ತಮಾಷೆ, ನಗು, ಗಲಾಟೆ, ಪೂಜೆ, ಆರಾಧನೆ ನೋಡಲು ಸಿಕ್ಕಿದೆ.
ಸೋಶಿಯಲ್ ಮೀಡಿಯಾ (social media)ದಲ್ಲಿ ರಾಣಿ ಮುಖರ್ಜಿ (Rani Mukherjee), ಹಿರಿಯ ನಟಿ ಜಯಾ ಬಚ್ಚನ್ (Jaya Bachchan) ಮತ್ತು ಅವರ ಮಗಳು ಶ್ವೇತಾ ನಂದಾ, ದುರ್ಗಾ ಪೆಂಡಾಲ್ ನಲ್ಲಿ ಕುಳಿತು ಮಾತನಾಡ್ತಿರುವ ವಿಡಿಯೋ ವೈರಲ್ ಆಗಿದೆ. ಜಯಾ ಬಚ್ಚನ್, ಎಲ್ಲರ ಮಾತು ಕೇಳ್ತಾ, ನಗ್ತಿರೋದನ್ನು ನೋಡ್ಬಹುದು. ಇವರೆಲ್ಲ ಒಂದ್ಕಡೆ ಕುಳಿತು ಗಾಸಿಪ್ ಮಾಡ್ತಿರುವ ಹಾಗೆ ಕಾಣ್ತಿದೆ ಎಂದು ವಿಡಿಯೋಕ್ಕೆ ಶೀರ್ಷಿಕೆ ಹಾಕಲಾಗಿದೆ.
ನಮ್ರತಾ ಜೊತೆ ರೈನ್ ಡಾನ್ಸ್ ಮಾಡಿ ಚಳಿ ಆಗ್ತಿದೆ ಎಂದ ಕಾರ್ತಿಕ್!
ನಿನ್ನೆ ಅಕ್ಟೋಬರ್ 11ರಂದು ಅಮಿತಾಬ್ ಬಚ್ಚನ್ (Amitabh Bachchan) 81 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಜಯಾ ಬಚ್ಚನ್ ದುರ್ಗೆಯ ಆಶೀರ್ವಾದವನ್ನು ಪಡೆಯಲು ಪೆಂಡಾಲ್ಗೆ ಬಂದಿದ್ದರು. ಗೋಲ್ಡನ್ ಕಲರ್ ಸೀರೆಯುಟ್ಟಿದ್ದ ಜಯಾಗೆ ಬಿಳಿ ಹಾಗೂ ಮೆರೂನ್ ಬಣ್ಣದ ಸೀರೆಯುಟ್ಟ ಶ್ವೇತಾ ಸಾಥ್ ನೀಡಿದ್ದರು. ಅವರೆಲ್ಲ ಮಾತನಾಡ್ತಿದ್ದ ವಿಡಿಯೋ ವೈರಲ್ ಆಗಿದ್ದು, ಐಶ್ವರ್ಯ ರೈ ಬಚ್ಚನ್ (Aishwarya Rai Bachchan) ಫ್ಯಾನ್ಸ್ ಕಮೆಂಟ್ ಮೇಲೆ ಕಮೆಂಟ್ ಹಾಕಿದ್ದಾರೆ.
ಜಯಾ, ರಾಣಿ ಮುಖರ್ಜಿ ಜೊತೆ ಮಾತನಾಡ್ತಿರೋದು, ಐಶ್ವರ್ಯ ರೈ ಬಚ್ಚನ್ ಇಲ್ಲಿ ಮಿಸ್ ಆಗಿರೋದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ. ಒಂದ್ಕಾಲದಲ್ಲಿ ರಾಣಿ ಮುಖರ್ಜಿಯನ್ನು ರಿಜೆಕ್ಟ್ ಮಾಡಿದ್ದ ಜಯಾ ಬಚ್ಚನ್ ಈಗ ಅವರ ಜೊತೆಯೇ ಹರಟೆ ಹೊಡೆಯುತ್ತಿದ್ದಾರೆ. ಹಣ ಎಲ್ಲವನ್ನು ಮಾಡಿಸುತ್ತೆ. ಐಶ್ವರ್ಯ ರೈ ಬಚ್ಚನ್ ಇವರಿಗೆ ಏನ್ ಮಾಡಿದ್ರು, ಒಳ್ಳೆ ಹುಡುಗಿ ಬಾಳಲ್ಲಿ ಆಟವಾಡಿದ್ರು ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಇವರು ರಾಣಿ ಮುಖರ್ಜಿಯನ್ನೇ ಸೊಸೆ ಮಾಡ್ಕೊಳ್ಬೇಕಿತ್ತು, ಮೊದಲಿಂದ್ಲೂ ಜಯಾಗೆ ಐಶ್ ಇಷ್ಟವಿರಲಿಲ್ಲ, ಶ್ವೇತಾ ಯಾಕೆ ಎಲ್ಲ ಕಡೆ ಇರ್ತಾರೆ, ಒಂದು ಮನೆ ಹಾಳ್ ಮಾಡಿ, ದುರ್ಗಾ ಪೂಜೆಗೆ ಬಂದಿದ್ದಾರೆ, ಶ್ವೇತಾ ಗಂಡನ ಮನೆ ಬಿಟ್ಟು ತವರುಮನೆಯಲ್ಲೇ ಶ್ವಾಶ್ವತವಾಗಿ ಉಳಿದುಕೊಂಡಂತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡ್ತಿದ್ದಾರೆ.
ನುಗ್ಗೆಕಾಯಿ ನೋಡಿ ವರ್ತೂರು ಹೇಳಿದ್ದೇನು? ವೇದಿಕೆ ಮೇಲೆ ಮಿಂಚಿದ ತನಿಷಾ
ಉತ್ತರ ಮುಂಬೈನಲ್ಲಿರುವ ದುರ್ಗಾ ಪೆಂಡಾಲ್ ಕಳೆದ 8 ದಿನಗಳಿಂದಲೂ ಸುದ್ದಿಯಲ್ಲೇ ಇದೆ. ರಣಬೀರ್ ಕಪೂರ್, ಆಲಿಯಾ ಭಟ್, ಜಯಾ ಬಚ್ಚನ್, ಶ್ವೇತಾ ನಂದಾ, ರಿಯಾ ಚಕ್ರವರ್ತಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ದುರ್ಗಾ ಪೆಂಡಾಲ್ ಗೆ ಬಂದು ಹೋಗ್ತಿದ್ದಾರೆ. ಕಾಜೋಲ್ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಭಕ್ತರ ಮೇಲೆ ಕೂಗಾಟ ನಡೆಸಿ, ಅವರ ಮೇಲೆ ಕೋಪಗೊಂಡ ಕಾಜೋಲ್ ಟ್ರೋಲ್ ಆಗ್ತಿದ್ದಾರೆ. ಕಾಜೋಲ್ ಎರಡನೇ ಜಯಾ ಬಚ್ಚನ್ ಎನ್ನುವ ಮಾತುಗಳು ಕೇಳಿ ಬರ್ತಿವೆ.
ಹಾಗೆ ಜಯಾ ಬಚ್ಚನ್ ಕೂಡ ಸದ್ಯ ಎಲ್ಲಿ ಹೋದ್ರೂ ಟ್ರೋಲ್ ಆಗ್ತಿದ್ದಾರೆ. ಅದಕ್ಕೆ ಕಾರಣ ಅಭಿಷೇಕ್ ಮತ್ತು ಐಶ್ವರ್ಯ ರೈ ದೂರವಾಗಿದ್ದಾರೆ ಎನ್ನುವ ಸುದ್ದಿ. ಇಬ್ಬರೂ ಬೇರೆ ವಾಸವಾಗಿದ್ದು, ಅದಕ್ಕೆ ಜಯಾ ಬಚ್ಚನ್ ಹಾಗೂ ಶ್ವೇತಾ ನಂದಾ ಕಾರಣವೆಂದು ಫ್ಯಾನ್ಸ್ ಭಾವಿಸಿದ್ದಾರೆ. ಜಯಾ ಬಚ್ಚನ್ ಮಗಳ ಜೊತೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ತಿದ್ದಾರೆಯೇ ವಿನಃ ಸೊಸೆ ಐಶ್ ಜೊತೆ ಸಾರ್ವಜನಿಕ ಕಾರ್ಯಕ್ರಮಗಳಿಗೆ ಬರ್ತಿಲ್ಲ.