ಗಾಯಕಿ ಮಂಗ್ಲಿ ಹುಟ್ಟುಹಬ್ಬದ ವಿವಾದ, ವಿಡಿಯೋ ಮಾಡಿ ಕ್ಲಾರಿಟಿ ಕೊಟ್ಟ ಸಿಂಗರ್

Published : Jun 12, 2025, 10:49 AM IST
Mangli

ಸಾರಾಂಶ

ಗಾಯಕಿ ಮಂಗ್ಲಿ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಮಾದಕ ವಸ್ತುಗಳ ಬಳಕೆ ಆರೋಪ ಕೇಳಿಬಂದಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮಂಗ್ಲಿ ಈ ಆರೋಪಗಳನ್ನು ನಿರಾಕರಿಸಿದ್ದು, ಇದು ಕುಟುಂಬದ ಸಮಾರಂಭವಾಗಿತ್ತು ಮತ್ತು ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಗ್ರ್ಯಾಂಡ್‌ ಆಗಿ ಬರ್ತಡೇ ಆಚರಿಸಿಕೊಂಡ ಪ್ರಸಿದ್ಧ ಗಾಯಕಿ ಮಂಗ್ಲಿ ಈಗ ವಿವಾದದಲ್ಲಿ ಸಿಲುಕಿದ್ದಾರೆ. ಹೈದರಾಬಾದ್ ನ ಚೆವೆಲ್ಲ ಮಂಡಲದ ತ್ರಿಪುರ ರೆಸಾರ್ಟ್‌ನಲ್ಲಿ ಜೂನ್ 10ರಂದು ರಾತ್ರಿ ಅವರ ಹುಟ್ಟುಹಬ್ಬದ ಪಾರ್ಟಿ ನಡೆದಿತ್ತು. ಈ ಪಾರ್ಟಿಯಲ್ಲಿ ವಿದೇಶಿ ಮದ್ಯ, ಮಾದಕ ವಸ್ತುಗಳು, ಗಾಂಜಾ ಸರಬರಾಜು ಆಗಿದೆ ಎಂಬುದು ಈಗ ವಿವಾದಕ್ಕೆ ಕಾರಣವಾಗಿದೆ. ಹೀಗಾಗಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಮಧ್ಯರಾತ್ರಿ ನಡೆದ ಈ ಕಾರ್ಯಕ್ರಮಕ್ಕೆ ಮುಂಚಿತ ಅನುಮತಿ ಇಲ್ಲದೆ ಪಾರ್ಟಿ ನಡೆಸಲಾಗಿದೆ ಎಂಬ ಆರೋಪದ ಮೇರೆಗೆ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ, ಮಂಗ್ಲಿ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಘಟನೆ ಸಾರ್ವಜನಿಕ ಹಾಗೂ ಮಾಧ್ಯಮಗಳ ಗಮನ ಸೆಳೆದಿದೆ. ಇದರ ಬೆನ್ನಲ್ಲೇ ಗಾಯಕಿ ಮಂಗ್ಲಿ ಸ್ಪಷ್ಟನೆ ನೀಡಲು ಮುಂದಾಗಿದ್ದು, ಈ ಬಗ್ಗೆ ವಿಡಿಯೋ ರಿಲೀಸ್ ಮಾಡಿದ್ದಾರೆ.

ರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದು, ಈ ಕಾರ್ಯಕ್ರಮವು ಸಂಪೂರ್ಣವಾಗಿ ಖಾಸಗಿಯಾಗಿ ಕುಟುಂಬದ ಸಮಾರಂಭವಾಗಿತ್ತು, ಯಾವುದೇ ಮಾದಕ ದ್ರವ್ಯಗಳ ಬಳಕೆಯೂ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಪಾರ್ಟಿ ನನ್ನ ಪೋಷಕರ ಆಶಯದಂತೆ ಆಯೋಜಿಸಲಾಗಿತ್ತು. ಕುಟುಂಬದವರು, ಸಂಬಂಧಿಕರು ಮತ್ತು ಆಪ್ತ ಸ್ನೇಹಿತರು ಮಾತ್ರ ಪಾಲ್ಗೊಂಡಿದ್ದರು. ಇದು ಸಾರ್ವಜನಿಕ ಅಥವಾ ವಾಣಿಜ್ಯ ಕಾರ್ಯಕ್ರಮವೇ ಅಲ್ಲ. ನಾನು ನನ್ನ ಕುಟುಂಬದೊಂದಿಗೆ ಸಮಯ ಕಳೆಯಲು ಈ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಆಯೋಜಿಸಿದ್ದೆ ಎಂದು ಹೇಳಿದ್ದಾರೆ.

ಮಾದಕ ದ್ರವ್ಯ ಸೇವನೆ ಸಂಬಂಧಿತ ಆರೋಪಗಳನ್ನು ತಳ್ಳಿ ಹಾಕಿದ ಮಂಗ್ಲಿ, "ನನ್ನ ಕಾರ್ಯಕ್ರಮದಲ್ಲಿ ಯಾವುದೇ ಮಾದಕ ವಸ್ತುಗಳು ಬಳಸಲಾಗಿಲ್ಲ. ಪೊಲೀಸರು ಶೋಧನೆ ನಡೆಸಿದಾಗ ಕೂಡ ಯಾವುದೇ ಅಕ್ರಮ ವಸ್ತುಗಳು ಪತ್ತೆಯಾಗಿಲ್ಲ" ಎಂದು ಹೇಳಿದ್ದಾರೆ. ಅಲ್ಲದೇ, ಮಾದಕ ದ್ರವ್ಯ ಸೇವನೆಗೆ ಪಾಸಿಟಿವ್ ಬಂದ ವ್ಯಕ್ತಿಯು ಬೇರೆ ಸ್ಥಳದಲ್ಲಿ ಮತ್ತು ಬೇರೆ ಸಮಯದಲ್ಲಿ ಅದನ್ನು ಸೇವಿಸಿದ್ದನೆಂಬ ಮಾಹಿತಿ ವರದಿಯಾಗಿದ್ದು, ಅದನ್ನು ಪೊಲೀಸರು ದೃಢಪಡಿಸಿದ್ದಾರೆ ಎಂದು ಅವರು ತಿಳಿಸಿದರು. ಪ್ರಸ್ತುತ ತನಿಖೆ ನಡೆಯುತ್ತಿದೆ ಮತ್ತು ನಾವು ಅಧಿಕಾರಿಗಳೊಂದಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ ಎಂದಿದ್ದಾರೆ.

ಅನುಮತಿ ತೆಗೆದುಕೊಂಡಿಲ್ಲ ಎಂಬ ವಿಚಾರವಾಗಿ ಮಾತನಾಡಿದ ಮಂಗ್ಲಿ ವಿವರಿಸಿ, ಮದ್ಯ ಮತ್ತು ಧ್ವನಿವ್ಯವಸ್ಥೆ ಅಳವಡಿಸಲಾಗಿತ್ತು, ಆದರೆ ಇವುಗಳಿಗೆ ಪೂರ್ವಾನುಮತಿ ಅಗತ್ಯವಿರುತ್ತದೆ ಎಂಬ ಮಾಹಿತಿ ನನಗೆ ತಿಳಿದಿರಲಿಲ್ಲ. ಈ ವಿಷಯವನ್ನು ಯಾರಾದರೂ ನನಗೆ ತಿಳಿಸಿದ್ದರೆ, ನಾನು ಖಂಡಿತವಾಗಿಯೂ ಅಗತ್ಯ ಅನುಮತಿಗಳನ್ನು ಪಡೆದುಕೊಳ್ಳುತ್ತಿದ್ದೆ. ಇದು ಕೇವಲ ಮೇಲ್ವಿಚಾರಣೆಯ ಲೋಪದಿಂದ ಸಂಭವಿಸಿದ ಘಟನೆ ಎಂದು ಹೇಳಿದರು.

"ಪಾರ್ಟಿಯಲ್ಲಿ ವಿದೇಶಿ ಮದ್ಯವಿಲ್ಲ. ಭಾರತೀಯ ಮದ್ಯವನ್ನಷ್ಟೇ ಬಳಸಲಾಗಿತ್ತು. ನಾನು ತಿಳಿದೂ ಏಕೆ ತಪ್ಪು ಮಾಡುತ್ತೇನೆ? ಇದು ನನ್ನ ಕುಟುಂಬದ ಕಾರ್ಯಕ್ರಮವಾಗಿತ್ತು, ಯಾವುದೇ ದುರುದ್ದೇಶದಿಂದ ಏನೂ ನಡೆದಿಲ್ಲ" ಎಂಬುದಾಗಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

ಈ ಕಾರ್ಯಕ್ರಮದ ಸಂದರ್ಭದಲ್ಲಿ ಕೆಲವು ಲೋಪಗಳು ಕಂಡುಬಂದಿದ್ದು, ಪೊಲೀಸರು ತಕ್ಷಣವೇ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ ಪರಿಣಾಮ, ವಿಷಯವು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಯಿತು. ಆದರೆ ಈ ಸಮಾರಂಭವನ್ನು ಉದ್ದೇಶಪೂರ್ವಕ ತಪ್ಪು ಅಥವಾ ಕಾನೂನು ಉಲ್ಲಂಘನೆಯೆಂದು ಪರಿಗಣಿಸುವುದು ನ್ಯಾಯಸಮ್ಮತವಲ್ಲ ಎಂದು ಹೇಳಿದರು.

ಮಾಧ್ಯಮಗಳಿಗೆ ಉದ್ದೇಶಿಸಿ ಮಂಗ್ಲಿಯವರು ಮನವಿ ಮಾಧ್ಯಮಗಳಲ್ಲಿ ನನ್ನ ಸ್ನೇಹಿತರಿಗೆ ನಾನು ಕೈಜೋಡಿಸಿ ವಿನಂತಿಸುತ್ತೇನೆ. ದಯವಿಟ್ಟು ಯಾವುದೇ ಪುರಾವೆಗಳಿಲ್ಲದೆ ನನ್ನ ಮೇಲೆ ಆರೋಪಗಳನ್ನು ಹೊರಿಸಬೇಡಿ. ಸತ್ಯ ಬೆಳಕಿಗೆ ಬರುತ್ತದೆ, ನಾನು ಎಲ್ಲರಿಗೂ ಮಾದರಿಯಾಗಿರಬೇಕೆಂದು ಬಯಸುವ ವ್ಯಕ್ತಿ. ನನ್ನ ತಂದೆ-ತಾಯಿಯ ಸಮ್ಮುಖದಲ್ಲಿ ನಾನು ಎಂದೂ ದುಷ್ಕೃತ್ಯಗಳಿಗೆ ಜಾಗ ನೀಡುವುದಿಲ್ಲ ಕೊಡುವುದಿಲ್ಲ ಎಂದಿದ್ದಾರೆ. ಈ ಸ್ಪಷ್ಟನೆ ನೀಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಇದು ನಿಜ.. 50 ಕೋಟಿ ಸಂಭಾವನೆಗೆ ಅರ್ಹ RGV ನಯಾಪೈಸೆ ಪಡೆಯದೇ ಹೀರೋ ಆಗ್ತಿದಾರೆ!
ಗುಮ್ಮಡಿ ನರಸಯ್ಯ ಬಯೋಪಿಕ್‌ನಲ್ಲಿ ಶಿವಣ್ಣ: ಮೊದಲು ವಿರೋಧಿಸಿದ್ದ ನಾಯಕನೇ ಈಗ ಏನ್ ಹೇಳಿದ್ರು?