ಕಾಕತಾಳೀಯ, 'ಬಾಲಿಕಾ ವಧು'ವಿನ ಇಬ್ಬರೂ ಲೀಡ್‌ ಆ್ಯಕ್ಟರ್ಸ್‌ ಈಗ ನೆನಪು ಮಾತ್ರ!

By Suvarna NewsFirst Published Sep 2, 2021, 1:34 PM IST
Highlights

* ಟಿವಿ ಇಂಡಸ್ಟ್ರಿಗೆ ಶಾಕ್ ಕೊಟ್ಟ ಸಿದ್ಧಾರ್ಥ್‌ ಶುಕ್ಲಾ ನಿಧನ ವಾರ್ತೆ

* ಬಾಲಿಕಾ ವಧು ಧಾರವಾಹಿ ಮೂಲಕ ಮನೆ ಮಾತಾಗಿದ್ದ ಸಿದ್ಧಾರ್ಥ್ ಶುಕ್ಲಾ

* ಐದು ವರ್ಷದ ಹಿಂದೆ ಕೊನೆಯುಸಿರೆಳೆದಿದ್ದ ಬಾಲಿಕಾ ವಧು ಸೀರಿಯಲ್ ನಟಿ

ಮುಂಬೈ(ಸೆ.02): ಹಿಂದಿ ಕಿರುತೆರೆಯ ಜನಪ್ರಿಯ ಧಾರವಾಹಿ, ಬಾಲಿಕಾ ವಧು ಬಗ್ಗೆ ಮಾತು ಬಂದಾಗೆಲ್ಲಾ ವೀಕ್ಷಕರು ನೆನಪಿಸಿಕೊಳ್ಳುವ ಮುಖವೇ ನಾಯಕಿ ನಟಿಯಾಗಿ ಕಾಣಿಸಿಕೊಂಡಿದ್ದ ಪ್ರತ್ಯುಷಾ ಬ್ಯಾನರ್ಜಿ. ಇದಾದ ಬಳಿಕ ಬರುವ ಹೆಸರೇ ಸಿದ್ಧಾರ್ಥ್‌ ಶುಕ್ಲಾ. ಪ್ರತ್ಯುಷಾ ನಿಧನದ ಬಳಿಕ, ಸಿದ್ಧಾರ್ಥ್‌ ಶುಕ್ಲಾರವರ ಅಕಾಲಿಕ ನಿಧನ ಅಭಿಮಾನಿಗಳಿಗೆ ಬಹುದೊಡ್ಡ ಶಾಕ್ ಕೊಟ್ಟಿದೆ. ಇವರಿಬ್ಬರ ಕೆಮಿಸ್ಟ್ರಿ ವೀಕ್ಷಕರಿಗೆ ಹೃದಯ ಗೆದ್ದಿತ್ತಾದರೂ, ಇಬ್ಬರೂ ಬಹಳ ಕಡಿಮೆ ಅವಧಿಗೆ ಈ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದರು.

'ಹುಡುಗಿ ಕತ್ತಲೆ ಕೋಣೆಯಲ್ಲಿ ನಿಮ್ಮ ಜತೆ ಇದ್ದರೂ ಆಕೆಗೆ ಸೇಫ್ ಎನ್ನಿಸಬೇಕು'

in an interview,
" Balika Vadhu & Shiv both will always remain special in my life & memories"
This was not just a show, This was Benchmark Performance of which made him Unique in industry💞 A special bonding with Costars pic.twitter.com/QLn1MC3pNe

— Nɪᴅʜɪ ✨ (@NidhiiTweets_)

ಈ ಧಾರವಾಹಿಯಲ್ಲಿ ಅವಿಕಾ ಗೌರ್ ನಾಯಕಿ ಆನಂದಿಯ ಬಾಲ್ಯದ ಪಾತ್ರ ನಿಭಾಯಿಸಿದ್ದರೆ, ಪ್ರತ್ಯುಷಾ ಆನಂದಿಯ ಹದಿಹರೆಯದ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೀಗಿರುವಾಗ ಅತ್ತ ಸಿದ್ಧಾರ್ಥ್‌ ಶುಕ್ಲಾಗೆ ಇದು ಚೊಚ್ಚಲ ಧಾರವಾಹಿ, ಇಲ್ಲಿ ಅವರು ಶಿವ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಸೈಲೆಂಟ್‌ ಹುಡುಗ ಗಿಣಿರಾಮದ ರಿತ್ವಿಕ್‌ಗೆ ಇದೆಂಥಾ ಹವ್ಯಾಸ!

ಪ್ರಮುಖ ಧಾರವಾಹಿಯ ಲೀಡ್‌ ಆಕ್ಟರ್ಸ್‌ ಈಗಿಲ್ಲ

ಕಾಕತಾಳೀಯವೆಂಬಂತೆ ಬಾಲಿಕಾ ವಧು ಸೀರಿಯಲ್‌ನ ಪ್ರಮುಖ ನಟ, ನಟಿ ಈಗ ನೆನಪಾಗಿ ಉಳಿದುಕೊಂಡಿದ್ದಾರೆ. ಹೌದು 2016 ರ ಏಪ್ರಿಲ್ 1ರಂದು ಪ್ರತ್ಯುಷಾರ ನಿಧನ ವಾರ್ತೆ ಟಿವಿ ಇಂಡಸ್ಟ್ರಿಯನ್ನು ನಡುಗಿಸಿತ್ತು. ಪ್ರತ್ಯುಷಾರವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿಗಳು ಉಲ್ಲೇಖಿಸಿದ್ದರೆ, ಅವರ ತಂದೆ ತಾಯಿ ಮಾತ್ರ ಇದೊಂದು ಕೊಲೆ ಎಂದಿದ್ದರು. ಹೀರುವಾಗ ಪ್ರತ್ಯುಷಾರ ಹೆತ್ತವರು ಕಳೆದ ಐದು ವರ್ಷಗಳಿಂದ ಈ ಪ್ರಕರಣವನ್ನು ಬೇಧಿಸಿ, ಮಗಳಿಗೆ ನ್ಯಾಯ ಕೊಡಿಸುವ ಯತ್ನದಲ್ಲಿದ್ದಾರೆ.

The chemistry of Shiv and Anandi❤.... pic.twitter.com/vtJElIUkkU

— Parii♥️ (@Pariispyarii)

ಇನ್ನು ಇತ್ತ ಸಿದ್ಧಾರ್ಥ್‌ ಶುಕ್ಲಾ ಬಗ್ಗೆ ನೋಡುವುದಾದರೆ, ಬಿಗ್‌ ಬಾಸ್‌ 13ರಲ್ಲಿ ಗೆದ್ದ ಬಳಿಕ ಅವರು ಬಹಳಷ್ಟು ಆಕ್ಟಿವ್ ಆಗಿದ್ದರು. ಅನೇಕ ಟಿವಿ ಶೋಗಳಲ್ಲಿ ಅತಿಥಿಯಾಗಿ ಕರೆಯಲಾಗುತ್ತಿತ್ತು.  ರಿಯಾಲಿಟಿ ಶೋಗಳಾದ ಬಿಗ್‌ ಬಾಸ್‌ ಒಟಿಟಿ ಹಾಗೂ ಡಾನ್ಸ್‌ ದಿವಾನೆ 3ರಲ್ಲೂ ಕಾಣಿಸಿಕೊಂಡಿದ್ದರು. ಆದರೀಗ 40 ವರ್ಷದ ಸಿದ್ಧಾರ್ಥ್‌ ಶುಕ್ಲಾರವರಿಗೆ ಗುರುವಾರ ಬೆಳಗ್ಗೆ ತೀವ್ರ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಹೀಗಿರುವಾಗ ಸಿದ್ಧಾರ್ಥ್‌ ಶುಕ್ಲಾರವರ ಅಕಾಲಿಕ ನಿಧನ ವಾರ್ತೆ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.  

ಮರೆಯಲಾಗದ ಪಾತ್ರ ಮಾಡಿದ್ದ ಸುರೇಖಾ ಸಿಕ್ರಿ

 3 ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತ ಬಾಲಿವುಡ್‌ ಹಿರಿಯ ನಟಿ, ‘ಬಾಲಿಕಾ ವಧು’ ಧಾರಾವಾಹಿ ಖ್ಯಾತಿಯ ಸುರೇಖಾ ಸಿಕ್ರಿ ಕೂಡಾ ಈ ಸೀರಿಯಲ್‌ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೀಗ ಅವರು ಕೂಡಾ ನೆನಪು ಮಾತ್ರ. ಎರಡು ಬಾರಿ ಬ್ರೈನ್‌ ಸ್ಟ್ರೋಕ್‌ಗೆ ತುತ್ತಾಗಿ, ಅವರ ಆರೋಗ್ಯಹದಗೆಟ್ಟಿತ್ತು. ಆದರೆ 2021ರ ಜುಲೈ 16ರಂದು ಅವರು ಕೂಡಾ ಹೃದಯಾಘಾತಕ್ಕೀಡಾಗಿ ಕೊನೆಯುಸಿರೆಳೆದಿದ್ದರು. 

ದೆಹಲಿಯಲ್ಲಿ ಜನಿಸಿದ ಸಿಕ್ರಿ ಉತ್ತರಾಖಂಡದಲ್ಲಿ ತಮ್ಮ ಬಾಲ್ಯ ಕಳೆದು, ಉತ್ತರ ಪ್ರದೇಶದ ಆಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದಿದ್ದರು. ನಂತರ 1968ರಲ್ಲಿ ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮಾದಲ್ಲಿ ನಟನೆ ಕಲಿತರು. ಬಳಿಕ ಧಾರಾವಾಹಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾದರು. 1978ರಲ್ಲಿ ಬಿಡುಗಡೆಯಾದ ‘ಕಿಸ್ಸಾ ಕುರ್ಸಿ’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.. ತಮಸ್‌, ಮಮ್ಕೋ, ಬಧಾಯಿ ಹೋ ಸಿನಿಮಾಗಳಲ್ಲಿನ ನಟನೆಗಾಗಿ ಇವರಿಗೆ ಮೂರು ಬಾರಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರ ಪ್ರಶಸ್ತಿಯೂ ಲಭಿಸಿದೆ. ಬಧಾಯಿ ಹೋ ಚಿತ್ರದ ನಟನೆಗಾಗಿ ಫಿಲ್ಮ್‌ ಫೇರ್‌ ಪ್ರಶಸ್ತಿ ಸಹ ಲಭಿಸಿತ್ತು.

click me!