
ಸೂಪರ್‌ಸ್ಟಾರ್ ರಜನಿಕಾಂತ್ ಈ ಸಿನಿಮಾ ಮೆಚ್ಚಿದ್ದಾರೆ ಎಂದಿರುವ ಡಾ. ಸಂಪತ್, ‘ಚಿತ್ರವನ್ನು ಸಾಕಷ್ಟು ಸಾಹಸ ಮಾಡಿ ಸೂಪರ್ ರಜನಿಕಾಂತ್ ಅವರಿಗೆ ತೋರಿಸಿದೆ. ಅವರು ಯಾರಿಗೂ ತಿಳಿಯದೆ ವಿಶ್ರಾಂತಿ ಪಡೆಯುವ ಹಿಮಾಲಯದ ಸ್ಥಳವನ್ನು ಮಾಧ್ಯಮದ ಸ್ನೇಹಿತರ ಮೂಲಕ ತಿಳಿದುಕೊಂಡು ಅಲ್ಲಿಗೆ ಹೋಗಿ ಭೇಟಿ ಮಾಡಿದೆ. ಕನ್ನಡದವರು ಅಂತ ಗೊತ್ತಾಗಿ ಚಿತ್ರದ ದೃಶ್ಯಗಳನ್ನು ನೋಡಿ ಮೆಚ್ಚಿದರು. ರಜನಿಕಾಂತ್ ಅವರಿಗೆ ನನ್ನ ಸಿನಿಮಾ ಇಷ್ಟ ಆಗಿರುವುದು ನನ್ನ ಉತ್ಸಾಹಕ್ಕೆ ಕಾರಣವಾಗಿದೆ’ ಎಂದರು.
‘ಇದು ನನ್ನ ಮೊದಲ ಸಿನಿಮಾ. ಎರಡು ಗಂಟೆಯಲ್ಲಿ ಸಿನಿಮಾ ಮುಗಿಸಿದರೂ ಕಮರ್ಷಿಯಲ್ ಚಿತ್ರದಂತೆಯೇ ಮೂಡಿ ಬಂದಿದೆ. ಐಫೋನ್‌ನಲ್ಲಿ ಚಿತ್ರೀಕರಣ ಮಾಡಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದುಕೊಂಡಿರುವ ವಿಶ್ವದ ಮೊದಲ ಸಿನಿಮಾ ಇದು’ ಎನ್ನುತ್ತಾರೆ ಸಂಪತ್.
ಡಾ ಸಂಪತ್ ‘ಸಿನಿಮಾ ವೈಭವ’ ಹೆಸರಿನಲ್ಲಿ ವಿಶ್ವ ಚಿತ್ರರಂಗದ ಚರಿತ್ರೆಯಲ್ಲಿ ದಾಖಲಿಸಿದ್ದು, ಅದು ಸದ್ಯದಲ್ಲೇ ಬಿಡುಗಡೆ ಆಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.