ಮದುವೆಗೆ ಸಜ್ಜಾದ ಸಿದ್ಧಾರ್ಥ್-ಕಿಯಾರಾ; ಮೊದಲು ರಿಜಿಸ್ಟರ್ ಮ್ಯಾರೇಜ್ ನಂತರ ಅದ್ದೂರಿ ಆರತಕ್ಷತೆ

Published : Oct 11, 2022, 04:52 PM ISTUpdated : Oct 11, 2022, 04:55 PM IST
ಮದುವೆಗೆ ಸಜ್ಜಾದ ಸಿದ್ಧಾರ್ಥ್-ಕಿಯಾರಾ; ಮೊದಲು ರಿಜಿಸ್ಟರ್ ಮ್ಯಾರೇಜ್ ನಂತರ ಅದ್ದೂರಿ ಆರತಕ್ಷತೆ

ಸಾರಾಂಶ

 ಸಿದ್ಧಾರ್ಥ್ ಮಲ್ಹೋತ್ರ ಮತ್ತು ಕಿಯಾರಾ ಅಡ್ವಾಣಿ ಮುಂದಿನ ವರ್ಷ ಹಸೆಮಣೆ ಏರುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಮೂಲಕ ಮತ್ತೊಂದು ಮದುವೆ ಸಂಭ್ರಮಕ್ಕೆ ಸಜ್ಜಾಗುತ್ತಿದೆ ಬಾಲಿವುಡ್. 

ಬಾಲಿವುಡ್ ಖ್ಯಾತ ಕಲಾವಿದರಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರ ಲವ್ವಿ-ಡವ್ವಿ ವಿಚಾರ ಗುಟ್ಟಾಗಿ ಉಳಿದಿಲ್ಲ. ಇಬ್ಬರೂ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದಾರೆ ಎನ್ನುವ ವಿಚಾರ ಈಗಾಗಲೇ ಜಗಜ್ಜಾಹೀರಾಗಿದೆ. ಅಂದಹಾಗೆ ಇಬ್ಬರೂ ತಮ್ಮ ಪ್ರೀತಿ ವಿಚಾರವನ್ನು ಅನೇಕ ಸಮಯದ ವರೆಗೂ ಗೌಪ್ಯವಾಗಿ ಕಾಪಾಡಿಕೊಂಡು ಬಂದಿದ್ದರು. ಆದರೆ ಶೇರ್ಷಾ ಸಿನಿಮಾ ಬಳಿಕ ಇಬ್ಬರ ನಡುವಿನ ಪ್ರೀತಿ ವಿಚಾರ ಬಹಿರಂಗವಾಯಿತು. ಈ ಜೋಡಿ ಅಧಿಕೃತವಾಗಿ ಪ್ರೀತಿ ವಿಚಾರವನ್ನು ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಆದರೆ ಈ ಲವ್ ಬರ್ಡ್ ಬಗ್ಗೆ ಎಲ್ಲರಿಗೂ ಗೊತ್ತಿದೆ. 

ಸದ್ಯ ಸಿದ್ಧಾರ್ಥ್ ಮತ್ತು ಕಿಯಾರಾ ಬಗ್ಗೆ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಇಬ್ಬರು ಮುಂದಿನ ವರ್ಷ ಹಸೆಮಣೆ ಏರುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಮೂಲಕ ಮತ್ತೊಂದು ಮದುವೆ ಸಂಭ್ರಮಕ್ಕೆ ಸಜ್ಜಾಗುತ್ತಿದೆ ಬಾಲಿವುಡ್. ಮುಂದಿನ ವರ್ಷ ಏಪ್ರಿಲ್‌ನಲ್ಲಿ ಇಬ್ಬರೂ ಅದ್ದೂರಿಯಾಗಿ ಮದುವೆಯಾಗುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಅದ್ದೂರಿ ಮದುವೆಗೂ ಮೊದಲು ರಿಜಿಸ್ಟರ್ ಮ್ಯಾರೇಜ್ ಆಗಲಿದ್ದಾರೆ ಎನ್ನಲಾಗುತ್ತಿದೆ. 

ವರ್ಷಾಂತ್ಯಕ್ಕೆ ಕಿಯಾರಾ ಅಡ್ವಾಣಿ, ಸಿದ್ಧಾರ್ಥ್ ಮಲ್ಹೋತ್ರಾ ವಿವಾಹ ; ಸುಳಿವು ನೀಡಿದ ಶಾಹಿದ್!

ಬಾಲಿವುಡ್ ಹಂಗಾಮ ವರದಿ ಮಾಡಿರುವ ಪ್ರಕಾರ, ಸಿದ್ಧಾರ್ಥ್ ಮತ್ತು ಕಿಯಾರಾ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಮುಕ್ತರಾಗಿದ್ದಾರೆ. ಇಬ್ಬರೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡಿದ್ದಾರೆ. ಮುಂದಿನ ವರ್ಷ ಏಪ್ರಿಲ್ ನಲ್ಲಿ ಹಸೆಮಣೆ ಏರಲಿದ್ದಾರೆ. ಚಿತ್ರರಂಗದ ಗಣ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಮುದುವೆಯಾಗಲಿದ್ದಾರೆ.  ಮೊದಲು ಇಬ್ಬರೂ ರಿಸಿಸ್ಟರ್ ಮ್ಯಾರೇಜ್ ಮಾಡಿಕೊಳ್ಳುತ್ತಿದ್ದಾರೆ. ಬಳಿಕ ಅದ್ದೂರಿ ಆರತಕ್ಷತೆ  ಮತ್ತು ಕಾಕ್ಟೇಲ್ ಪಾರ್ಟಿ ನಡೆಯಲಿದೆ. ಈಗಾಗಲೇ ಯಾರನ್ನು ಆಹ್ವಾನಿಸಬೇಕು ಎನ್ನುವ ಲಿಸ್ಟ್ ಸಿದ್ಧವಾಗುತ್ತಿದೆ. ಮದುವೆ ಸಂಭ್ರಮವೆಲ್ಲಾ ದೆಹಲಿಯಲ್ಲಿ ನಡೆಯಲಿದೆ' ಎಂದು ಮೂಲಗಳು ತಿಳಿಸಿವೆ ಎಂದು ವರದಿ ಮಾಡಿದೆ. 

ಏರ್ಪೋರ್ಟ್‌ನಲ್ಲಿ ಕಿಯಾರಾ-ಸಿದ್ಧಾರ್ಥ್ ಮಲ್ಹೋತ್ರಾ; ಪಾಪಾರಾಜಿಗಳ ಮೇಲೆ ಸಿಡುಕಿದ ನಟ!

ಸಿದ್ದಾರ್ಥ್ ಮತ್ತು ಕಿಯಾರಾ ಇಬ್ಬರು ಕಳೆದ ಮೂರು ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ. ಇಬ್ಬರೂ ಎಲ್ಲು ತಮ್ಮ ಪ್ರೀತಿ ವಿಚಾರವನ್ನು ಬಹಿರಂಗ ಪಡಿಸಿಲ್ಲ. ಈ ಲವ್ ಬರ್ಡ್ಸ್  ಆಗಾಗ ವಿದೇಶಿ ಪ್ರಯಾಣ, ಸಮಾರಂಭಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಶೇರ್ಷಾ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ನೆಚ್ಚಿನ ಜೋಡಿಯಾಗಿದ್ದರು. ಈ ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಅಭಿಮಾನಿಗಳ ಹೃದಯ ಗೆದ್ದಿತ್ತು. ಇಬ್ಬರು ಆದಷ್ಟು ಬೇಗ ಮದುವೆಯಾಗಿ ಎಂದು ಅಭಿಮಾನಿಗಳು ಹಾರೈಸಿದ್ದರು. ಇದೀಗ ಆ ಸಮಯ ಬಂದೇ ಬಿಟ್ಟಿದೆ. ಮುಂದಿನ ವರ್ಷ ಇಬ್ಬರೂ ಪತಿ-ಪತ್ನಿಯರಾಗಲಿದ್ದಾರೆ. ಈ ಬಗ್ಗೆ ಕಿಯಾರಾ ಅಥವಾ ಸಿದ್ಧಾರ್ಥ್ ಕಡೆಯಿಂದ ಅಧಿಕೃತ ಹೇಳಿಕೆಯೊಂದೆ ಬಾಕಿ ಇದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಿರಿಕ್ ಕಿಲಾಡಿ ಉತ್ತರ ಕೊಟ್ಟ ದೀಪಿಕಾ ಪಡುಕೋಣೆ; ಶಾಕಿಂಗ್‌ ಮೂಡ್‌ಗೆ ನೆಟ್ಟಿಗರನ್ನು ದೂಡಿದ ಸ್ಟಾರ್ ನಟಿ!
ಕನ್ನಡದಲ್ಲಿಯೇ ಮಾತನಾಡಿದ ನಟ ವಿಜಯ ದೇವರಕೊಂಡ: ಕೊಡವರ ಮನಗೆದ್ದ Rashmika Mandanna ಪತಿ