ಕಂಗನಾ 'ಎಮರ್ಜನ್ಸಿ'ಯಲ್ಲಿ ಅಟಲ್ ಬಿಹಾರಿ ವಾಜಪೇಯಿಯಾದ ಶ್ರೇಯಸ್ ತಲ್ಪಡೆ; ಫಸ್ಟ್ ಲುಕ್ ರಿಲೀಸ್

By Shruiti G Krishna  |  First Published Jul 27, 2022, 4:33 PM IST

ಕಂಗನಾ ಸಿನಿಮಾದಲ್ಲಿ ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ಪಾಜಪೇಯಿ ಪಾತ್ರಕ್ಕೆ ಶ್ರೇಯಸ್ ತಲ್ಪಾಡೆ ಆಯ್ಕೆಯಾಗಿದ್ದಾರೆ. ಅಟಲ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರೇಯರ್ ಪಾತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.


ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್ ಒಂದಲ್ಲೊಂದು ವಿವಾದಗಳ ಮೂಲಕವೇ ಸದ್ದು ಮಾಡುತ್ತಿರುತ್ತಾರೆ. ಸದಾ ವಿವಾದಗಳ ಮೂಲವೇ ಸುದ್ದಿಯಲ್ಲಿರುತ್ತಿದ್ದ ನಟಿ ಕಂಗನಾ ಇದೀಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಧಾಕಡ್ ಹೀನಾಯ ಸೋಲಿನ ಸೋಲಿನ ಬಳಿಕ ಕಂಗನಾ ಸದ್ಯ ಎಮರ್ಜೆನ್ಸಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಎಮರ್ಜೆನ್ಸಿ ಸಿನಿಮಾದ ಕಂಗನಾ ಲುಕ್ ರಿಲೀಸ್ ಆಗಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಅಂದಹಾಗೆ ಎಮರ್ಜೆನ್ಸಿಯಲ್ಲಿ ಕಂಗನಾ ಇಂದಿರಾಗಾಂಧಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಂಗನಾ ಲುಕ್ ಬಳಿಕ ಮತ್ತೋರ್ವ ಖ್ಯಾತ ನಟರ ಪಾತ್ರ  ರಿವೀಲ್ ಆಗಿತ್ತು. ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್ ಎಮರ್ಜನ್ಸಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅನುಪಮ್ ಖೇರ್ 1970ರಲ್ಲಿ ಇಂದಿರಗಾಂಧಿ ಅವರ ವಿರೋಧಿ ಜಯಪ್ರಕಾಶ್ ನಾರಾಯಣ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ.  ಸದ್ಯ ಮತ್ತೊಂದು ಪ್ರಮುಖ ಪಾತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಕಂಗನಾ ಸಿನಿಮಾದಲ್ಲಿ ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ಪಾಜಪೇಯಿ ಪಾತ್ರಕ್ಕೆ ಶ್ರೇಯಸ್ ತಲ್ಪಾಡೆ ಆಯ್ಕೆಯಾಗಿದ್ದಾರೆ. ಅಟಲ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರೇಯರ್ ಪಾತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಟ ಶ್ರೇಯಸ್ 'ಅತ್ಯಂತ ಪ್ರೀತಿಪಾತ್ರ, ದಾರ್ಶನಿಕ, ನಿಜವಾದ ದೇಶಭಕ್ತ ಮತ್ತು ಜನಸಾಮಾನ್ಯರ ವ್ಯಕ್ತಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯಾಗಿ ನಟಿಸಲು ಗೌರವ ಮತ್ತು ಸಂತೋಷವಾಗಿದೆ. ನಾನು ನಿರೀಕ್ಷೆಗಳಿಗೆ ತಕ್ಕಂತೆ ಬದುಕುತ್ತೇನೆ ಎಂದು ಭಾವಿಸುತ್ತೇನೆ. ಇದು ತುರ್ತು ಪರಿಸ್ಥಿತಿಯ ಸಮಯ' ಎಂದಿದ್ದಾರೆ.

Honoured & Happy to play one of the most Loved, Visionary, a true patriot & Man of the masses…Bharat Ratna Atal Bihari Vajpayee ji. I hope I live up to the expectations.

It’s time for !

Ganpati Bappa Morya 🙏 pic.twitter.com/kJAxsXNeBd

— Shreyas Talpade (@shreyastalpade1)

Tap to resize

Latest Videos

ಶ್ರೇಯರ್ ಬಗ್ಗೆ ಮಾತನಾಡಿದ ನಟಿ ಕಂಗನಾ, 'ಇಂದಿರಾ ಗಾಂಧಿ ಮೊದಲ ಬಾರಿಗೆ ಪ್ರಧಾನಿಯಾದಾಗ ಯುವ ಮತ್ತು ಮುಂಬರುವ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ. ಅವರು ತುರ್ತು ಪರಿಸ್ಥಿತಿಯ ವೀರರಲ್ಲಿ ಒಬ್ಬರು. ಶ್ರೇಯರ್ ಅದ್ಭುತ ನಟ ಅವರು ನಮ್ಮ ಸಿನಿಮಾದಲ್ಲಿ ನಟಿಸುತ್ತಿರುವುದು ನಮ್ಮ ಅದೃಷ್ಟ. ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರದಲ್ಲಿ ಅವರ ಅಭಿನಯವು ಅವಿಸ್ಮರಣೀಯವಾಗಿದೆ ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ. ಈ ಮಹತ್ವದ ಪಾತ್ರವನ್ನು ನಿರ್ವಹಿಸಲು ಅವರಂತಹ ಶಕ್ತಿಶಾಲಿ ನಟನನ್ನು ಪಡೆದ ನಾವು ಅದೃಷ್ಟವಂತರು' ಎಂದು ಹೇಳಿದರು.

1975-1977ರಲ್ಲಿ 21 ತಿಂಗಳ ಅವಧಿಯಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿತ್ತು. ಇಂದಿರಾ ಗಾಂಧಿ ಪ್ರಧಾನಿಯಾಗಿ ಆಳ್ವಿಕೆ ಮಾಡುತ್ತಿದ್ದ ಸಮಯವದು. ಇದನ್ನು ಸ್ವತಂತ್ರ ಭಾರತದ ಕರಾಳ ದಿನಗಳಲ್ಲಿ ಒಂದೆಂದು ಕರೆಯಲಾಗುತ್ತದೆ. ಈ ಬಗ್ಗೆ ಕಂಗನಾ ರಣಾವತ್ ಸಿನಿಮಾ ಮಾಡುತ್ತಿರುವುದು ಕುತೂಹಲ ಮೂಡಿಸಿದೆ. ಎಮರ್ಜೆನ್ಸಿ ಎಂದೆ ಟೈಟಲ್ ಇಟ್ಟಿರುವುದರಿಂದ ಸಿನಿಮಾದಲ್ಲಿ ಹೆಚ್ಚಾಗಿ ತುರ್ತು ಪರಿಸ್ಥಿಯ ಬಗ್ಗೆ ಇರಲಿದೆ ಎನ್ನುವುದು ಗೊತ್ತಾಗುತ್ತಿದೆ. ಅಂದಹಾಗೆ ಎಮರ್ಜೆನ್ಸಿ ಕಂಗನಾ ರಣಾವತ್ ನಟನೆ, ನಿರ್ದೇಶದ ಜೊತೆಗೆ ನಿರ್ಮಾಣ ಮಾಡುತ್ತಿರುವ  ಸಿನಿಮಾ ಇದಾಗಿದೆ. 

click me!