ಹೇಮಾ ಮಾಲಿನಿ- ಜೀತೇಂದ್ರ ಮದ್ವೆ ತಪ್ಸಿ ತಾವೇ ತಾಳಿ ಕಟ್ಟಿದಾಗ ಧರ್ಮೇಂದ್ರ ಫುಲ್ ಟೈಟ್!

Published : Jun 28, 2023, 02:55 PM IST
ಹೇಮಾ ಮಾಲಿನಿ- ಜೀತೇಂದ್ರ ಮದ್ವೆ ತಪ್ಸಿ ತಾವೇ ತಾಳಿ ಕಟ್ಟಿದಾಗ ಧರ್ಮೇಂದ್ರ ಫುಲ್ ಟೈಟ್!

ಸಾರಾಂಶ

ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಅವರ ಜೀವನ ಕಥೆಯೇ ರೋಚಕವಾಗಿದೆ. ಹೇಮಾ ಮಾಲಿನಿ ಅವರನ್ನು ಧರ್ಮೇಂದ್ರ ಮದ್ವೆಯಾಗಿದ್ದು ಹೇಗೆ?  

ಬಾಲಿವುಡ್​ನ ಡ್ರೀಮ್​ಗರ್ಲ್​ ಎಂದಾಕ್ಷಣ ನೆನಪಿಗೆ ಬರುವುದು ನಟಿ ಹೇಮಾ ಮಾಲಿನಿ. ಸಂಸದೆಯಾಗಿ, ನಟಿಯಾಗಿ ಹೇಮಾ ಮಾಲಿನಿ ಅವರದ್ದು ಬಹುದೊಡ್ಡ ಪಾತ್ರ. ಇವರು  ತಮ್ಮ ಚಲನಚಿತ್ರಗಳ ಹೊರತಾಗಿ ಆಕರ್ಷಕ ನೋಟಕ್ಕೆ ಹೆಸರುವಾಸಿಯಾಗಿದ್ದಾರೆ. ಇವರ 'ಡ್ರೀಮ್ ಗರ್ಲ್' (Dream Girl) ಪಟ್ಟಕ್ಕೆ ಬಹುಶಃ ಯಾರೂ ಏರಿಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ. ವಯಸ್ಸು 74 ಆದರೂ ಇಂದಿಗೂ ಚಾರ್ಮ್​ ಉಳಿಸಿಕೊಂಡಿದ್ದಾರೆ ನಟಿ. 1968ರಲ್ಲಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದ ನಟಿ,  ಬಾಲಿವುಡ್‌ನಲ್ಲಿ 'ಸಪ್ನೋ ಕಾ ಸೌದಾಗರ್' ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಅದರ ನಂತರ, 'ಸೀತಾ ಔರ್ ಗೀತಾ', 'ಶೋಲೆ', 'ಸತ್ತೆ ಪೆ ಸತ್ತಾ', 'ಧರ್ಮಾತ್ಮ', 'ಬಾಘವಾನ್' ನಲ್ಲಿ ಕಾಣಿಸಿಕೊಂಡರು ಮತ್ತು ಅನೇಕ ಚಲನಚಿತ್ರಗಳಲ್ಲಿ ಕೆಲಸ ಮಾಡಿದರು. 50ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಹೇಮಾ ಮಾಲಿನಿ ಅವರು ಹಲವಾರು ಬ್ಲಾಕ್​ಬಸ್ಟರ್​ ಚಿತ್ರಗಳನ್ನು ನೀಡಿದ್ದಾರೆ.

ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಅವರ ಪ್ರೇಮಕಥೆ (Love Story) ಮತ್ತು ಮದುವೆಯು ಚಲನಚಿತ್ರಕ್ಕಿಂತ ಕಡಿಮೆ ಇರಲಿಲ್ಲ. ಆದರೆ ಹೇಮಾ ಮಾಲಿನಿ ಅವರ ಹೆತ್ತವರು ತಮ್ಮ ಮಗಳನ್ನು ನಟ ಜೀತೇಂದ್ರ (Jeendra) ಅವರಿಗೆ ಕೊಟ್ಟು ಮದುವೆ ಮಾಡಲು ಬಯಸಿದ್ದರು  ಎಂಬುದು ನಿಮಗೆ ತಿಳಿದಿದೆಯೇ? ಹೌದು! ಅವರ ಅಧಿಕೃತ ಜೀವನಚರಿತ್ರೆ ಹೇಮಾ ಮಾಲಿನಿ: ಬಿಯಾಂಡ್ ದಿ ಡ್ರೀಮ್ ಗರ್ಲ್​ನಲ್ಲಿ (Beyond Dream Girl) ಈ ವಿಷಯವನ್ನು ತಿಳಿಸಲಾಗಿದೆ. ಹೇಮಾ ಮಾಲಿನಿ ಅವರ ತಾಯಿ ಜಯಾ ಚಕ್ರವರ್ತಿ ಅವರಿಗೆ ತಮ್ಮ ಮಗಳನ್ನು ಧರ್ಮೇಂದ್ರ ಅವರಿಗೆ ಕೊಟ್ಟು ಮದುವೆ ಮಾಡಲು ಮನಸ್ಸು ಇರಲಿಲ್ಲ. ಇದಕ್ಕೆ ಕಾರಣ, ಧರ್ಮೇಂದ್ರ ಅವರು ಆಗಲೇ ಮದುವೆಯಾಗಿದ್ದರು. ಆದ್ದರಿಂದ ಅವರು  ಧರ್ಮೇಂದ್ರ ಅವರೊಂದಿಗಿನ ಸಂಬಂಧಕ್ಕೆ ವಿರುದ್ಧವಾಗಿದ್ದರು ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಮಗಳು ಹೇಮಾ ಅವರನ್ನು ನಟ ಜೀತೇಂದ್ರ ಅವರಿಗೆ ಕೊಟ್ಟು ಮದುವೆಯಾಗುವಂತೆ ಮನವೊಲಿಸಲು ಪ್ರಯತ್ನಿಸಿರುವುದಾಗಿ ವಿವರಿಸಲಾಗಿದೆ.

ಹೇಮಾ- ಧರ್ಮೇಂದ್ರ ದಾಂಪತ್ಯದ ರೋಚಕಥೆ; ಡಿವೋರ್ಸ್​ ಕೊಡದೇ ನಡೆದಿತ್ತು ಮದುವೆ!

ಇನ್ನು ಕುತೂಹಲಕಾರಿ ಸಂಗತಿ ಎಂದರೆ ಹೇಮಾ ಮಾಲಿನಿಯವರ ಮದುವೆಯನ್ನು ಜೀತೇಂದ್ರ ಅವರ ಜೊತೆ ಮಾಡಲು ಎರಡೂ ಕುಟುಂಬದವರು (Family) ಚೆನ್ನೈಗೆ ಗುಟ್ಟಾಗಿ ಹೋಗಿದ್ದರು. ಆದರೆ ಈ ವಿಷಯ ಧರ್ಮೇಂದ್ರ ಅವರಿಗೆ ತಿಳಿದುಬಿಟ್ಟಿತ್ತು. ಅವರು ಆ ಸಂದರ್ಭದಲ್ಲಿ ಜೀತೇಂದ್ರ ಅವರ ಸ್ನೇಹಿತೆಯಾಗಿದ್ದ ಶೋಭಾ (ಅವರೀಗ ಜೀತೇಂದ್ರ ಅವರ ಪತ್ನಿ) ಜೊತೆ ಚೆನ್ನೈಗೆ (Chennai) ಪ್ರಯಾಣಿಸಿದರು. ಆ ಸಮಯದಲ್ಲಿ  ಧರ್ಮೇಂದ್ರ ಅವರು ಸ್ವಲ್ಪ ಕುಡಿದಿದ್ದರು. ಸಿಕ್ಕಾಪಟ್ಟೆ ಗಲಾಟೆ ಮಾಡಿದ್ದರಿಂದ ಹೇಮಾ ಪಾಲಕರು ತಮ್ಮ ಮಗಳ ಜೊತೆ ಧರ್ಮೇಂದ್ರ ಅವರಿಗೆ ಮಾತನಾಡಲು ಬಿಟ್ಟರು. ಇತ್ತು ಹೇಮಾ ಮತ್ತು ಧರ್ಮೇಂದ್ರ ನಡುವೆ ವಾದ ಪ್ರತಿವಾದ ನಡೆಯುತ್ತಿದ್ದರೆ, ಅತ್ತ ಹೊರಗೆ ಜೀತೇಂದ್ರ ಅವರ ಗೆಳತಿಯಾಗಿದ್ದ ಶೋಭಾ ಒಂದೇ ಸಮನೆ  ಆಕ್ರೋಶ ಹೊರಹಾಕುತ್ತಿದ್ದರು. ಕೊನೆಯದಾಗಿ ಹೇಮಾ ಅವರನ್ನು ಮದುವೆಯಾಗುವ ನಿರ್ಧಾರವನ್ನು ಶೋಭಾಗೆ ಜೀತೇಂದ್ರ ಘೋಷಿಸಿದಾಗ, ದೊಡ್ಡ ಹಂಗಾಮವೇ ಸೃಷ್ಟಿಯಾಯಿತು.

ಕೊನೆಗೆ ಮದುವೆಯ ಬಗ್ಗೆ ಹೇಮಾ (Hema) ಅವರನ್ನು ಕೇಳಿದಾಗ ಮದುವೆ ಇಷ್ಟವಿಲ್ಲ ಎಂಬಂತೆ ಹೇಮಾ ತಲೆಯಾಡಿಸಿದರು.  ಜೀತೇಂದ್ರ ಅವರಿಗೆ ಅವಮಾನ  ಹೆಚ್ಚಾಯಿತು ಅವರು ಹೆತ್ತವರೊಂದಿಗೆ ಮನೆಯಿಂದ ಹೊರಬಂದರು. ಜೀತೇಂದ್ರ ನಂತರ ಅಕ್ಟೋಬರ್ 18, 1974 ರಂದು ಶೋಭಾ ಅವರನ್ನು ವಿವಾಹವಾದರು ಮತ್ತು ದಂಪತಿಗೆ ಏಕ್ತಾ ಕಪೂರ್ ಮತ್ತು ತುಷಾರ್ ಕಪೂರ್ (Tushar Kapoor) ಅವರ ಪೋಷಕರಾಗಿದ್ದಾರೆ. ಮತ್ತೊಂದೆಡೆ, ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಇಸ್ಲಾಂಗೆ ಮತಾಂತರಗೊಂಡ ನಂತರ ಆಗಸ್ಟ್ 21, 1979 ರಂದು ಮದುವೆಯಾದರು. ಧರ್ಮೇಂದ್ರ  ಈಗಾಗಲೇ ಪ್ರಕಾಶ್ ಕೌರ್ ಅವರನ್ನು ಮದುವೆಯಾಗಿದ್ದರಿಂದ ಮತಾಂತರಗೊಳ್ಳಬೇಕಾಯಿತು.  

DHOOM: ಬಿಕಿನಿ ಧರಿಸಲು ಅಮ್ಮನ ಪರ್ಮಿಷನ್​ ಕೇಳಿದ್ದ ಇಶಾ- ಹೇಮಾಮಾಲಿನಿ ಹೇಳಿದ್ದೇನು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?