ಗೀತಾ ಬೇರೆ ಪಕ್ಷಕ್ಕೆ ಹೋದ್ರೂ ಸಪೋರ್ಟ್​ ಮಾಡುವೆ: ರಾಜಕೀಯ ಎಂಟ್ರಿ ಕುರಿತು ಶಿವರಾಜ್​ ಕುಮಾರ್​ ಹೇಳಿದ್ದೇನು?

Published : Mar 01, 2025, 01:29 PM ISTUpdated : Mar 01, 2025, 03:17 PM IST
ಗೀತಾ ಬೇರೆ ಪಕ್ಷಕ್ಕೆ ಹೋದ್ರೂ ಸಪೋರ್ಟ್​ ಮಾಡುವೆ: ರಾಜಕೀಯ ಎಂಟ್ರಿ ಕುರಿತು ಶಿವರಾಜ್​ ಕುಮಾರ್​ ಹೇಳಿದ್ದೇನು?

ಸಾರಾಂಶ

ನಟ ಶಿವರಾಜ್‌ಕುಮಾರ್ ಕ್ಯಾನ್ಸರ್‌ನಿಂದ ಗುಣಮುಖರಾಗಿ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಪತ್ನಿ ಗೀತಾ ಶಿವರಾಜ್‌ಕುಮಾರ್ ರಾಜಕೀಯ ಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿ, ಅವರು ನನ್ನ ಬೆಂಬಲಕ್ಕೆ ಅರ್ಹರು ಎಂದಿದ್ದಾರೆ. ರಾಜಕೀಯ ನನಗೆ ಬೇಡ, ಆದರೆ ನನ್ನ ಪತ್ನಿಯ ನಿರ್ಧಾರಕ್ಕೆ ನಾನು ಸದಾ ಬೆಂಬಲಿಸುತ್ತೇನೆ ಎಂದು ಶಿವಣ್ಣ ಸ್ಪಷ್ಟಪಡಿಸಿದ್ದಾರೆ. ಗೀತಾ ಅವರು ಈ ಹಿಂದೆ ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತಿದ್ದರು.

ನಟ ಶಿವರಾಜ್​ ಕುಮಾರ್​ ಕ್ಯಾನ್ಸರ್​ ಗೆದ್ದು, ಸಿನಿಮಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಆರು ಗಂಟೆಗಳ ಕಾಲ ನಡೆದಿರುವ ಶಸ್ತ್ರಚಿಕಿತ್ಸೆಯಿಂದ ಕೆಲ ಕಾಲ ರೆಸ್ಟ್​ ತೆಗೆದುಕೊಂಡಿದ್ದ ಶಿವಣ್ಣ ಮತ್ತೆ ಕಮ್​ಬ್ಯಾಕ್​ ಮಾಡಿದ್ದಾರೆ.  ಕಿಮೋ ಥೆರಪಿ ಬಳಿಕವೂ ಸ್ವಲ್ಪವೂ ಅಚಲರಾಗದೇ ನಟ ಫಿಟ್​ ಆ್ಯಂಡ್​ ಫೈನ್​ ಆಗಿದ್ದ ಕಾರಣ, ಅವರು ಅನಾರೋಗ್ಯದಿಂದ ಬಳಲುತ್ತಿದ್ದುದು ಬಹುತೇಕರಿಗೆ ತಿಳಿದೇ ಇರಲಿಲ್ಲ. ಕಳೆದ ನಾಲ್ಕೈದು ತಿಂಗಳುಗಳ ಹಿಂದೆಯೇ ಅವರಿಗೆ ಈ ಸಮಸ್ಯೆಯ ಅರಿವು ಇತ್ತು. ಆದರೆ, ಅಮೆರಿಕಕ್ಕೆ ಚಿಕಿತ್ಸೆಗೆ ಹೋಗಲಿದ್ದಾರೆ ಎನ್ನುವ ಸುದ್ದಿ ಮಾತ್ರ ಬರಸಿಡಿಲಿನಂತೆ ಬಡಿದಿತ್ತು. ಮೊದಲ ಕಿಮೋ ಥೆರಪಿ ಮಾರನೆಯ ದಿನವೇ ಶಿವಣ್ಣ, ಶೂಟಿಂಗ್​ನಲ್ಲಿ ಭಾಗಿಯಾಗಿದ್ದು ಆ್ಯಕ್ಷನ್​ ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿದ್ದರು ಎನ್ನಲಾಗಿದೆ. ಆದ್ದರಿಂದ ಅವರ ಒಳಗೇ ಅನುಭವಿಸುತ್ತಿದ್ದ ನೋವು ಅವರ ಕುಟುಂಬಸ್ಥರಿಗೆ ಮಾತ್ರ  ತಿಳಿದಿತ್ತು. ಇದೀಗ ಎಲ್ಲಾ ನೋವನ್ನು ನುಂಗಿ ಮತ್ತೆ ಕೆಲಸ ಶುರು ಮಾಡಿದ್ದಾರೆ.

ಶಿವರಾಜ್​ ಕುಮಾರ್​ ಅವರು ಅನಾರೋಗ್ಯವಿದ್ದರೂ ಈ ಹಿಂದೆ ಪತ್ನಿ ಗೀತಾ ಅವರಿಗಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಡಾ.ರಾಜ್​ಕುಮಾರ್​ ಅವರಿಗೆ ಎಷ್ಟೇ ರಾಜಕೀಯದಿಂದ ಕರೆ ಬಂದಿದ್ದರೂ, ಬೇರೆ ಭಾಷೆಗಳ ಚಿತ್ರಗಳಿಂದ ಕರೆ ಬಂದಿದ್ದರೂ, ಕನ್ನಡ ಚಿತ್ರರಂಗವನ್ನು ಬಿಟ್ಟು ಹೋಗದ ಹಾಗೂ ಯಾವುದೇ ರಾಜಕೀಯ ಪಕ್ಷಗಳಿಗೂ ಹೋಗದ ಕಾರಣದಿಂದ ಅಭಿಮಾನಿಗಳಿಗೆ ಅವರ ಮೇಲೆ ಸದಾ ಗೌರವ, ಹೆಮ್ಮೆ ಇದೆ. ಇದೇ ಕಾರಣಕ್ಕೆ ಗೀತಾ ಅವರು ರಾಜಕೀಯಕ್ಕೆ ಹೋದಾಗ ಡಾ.ರಾಜ್​ ಅಭಿಮಾನಿಗಳು ಕೆಲವರು ಅಸಮಾಧಾನವನ್ನೂ ಹೊರಹಾಕಿದ್ದು ಇದೆ. ಶಿವರಾಜ್ ಕುಮಾರ್​ ಅವರು ಅಪ್ಪನ ಆದರ್ಶಗಳನ್ನು ಪಾಲಿಸಬೇಕಿತ್ತು, ಆದರೆ ಅವರು ರಾಜಕೀಯವಾಗಿ ಕಾಣಿಸಿಕೊಂಡಿರುವುದು ಸರಿಯಲ್ಲ ಎಂದು ಇಂದಿಗೂ ಕೆಲವರು ಹೇಳುತ್ತಲೇ ಇದ್ದಾರೆ.

ಕಿಮೋ ಥೆರಪಿ ಮಾರನೆಯ ದಿನವೇ ಶೂಟಿಂಗ್​ಗೆ ಬಂದಿದ್ದ ಶಿವಣ್ಣ! ಕೃತಕ ಮೂತ್ರಕೋಶದಿಂದ ತೊಂದ್ರೆ ಇದ್ಯಾ? ವೈದ್ಯರು ಹೇಳೋದೇನು?

ಇದೀಗ ಆ ವಿಷಯದ ಬಗ್ಗೆಯೇ ಮಾತನಾಡಿದ್ದಾರೆ ಶಿವಣ್ಣ. ಮಸ್ತ್​ ಮಗಾ ಯೂಟ್ಯೂಬ್​ ಚಾನೆಲ್​ ಜೊತೆ ಮಾತನಾಡಿದ ಶಿವರಾಜ್​ ಕುಮಾರ್​ ಅವರು, ತಮ್ಮ ಕ್ಯಾನ್ಸರ್​ ಪಯಣದ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ, ರಾಜಕೀಯದ ಬಗ್ಗೆ ಕೇಳಿದ ಪ್ರಶ್ನೆಗೆ ಶಿವರಾಜ್​ ಕುಮಾರ್​ ಅವರು, ಈ ಬಗ್ಗೆ ಕಮೆಂಟ್​ಗಳು ಬರುವುದನ್ನು ನಾನು ಫೇಸ್​ ಮಾಡುತ್ತೇನೆ. ಏಕೆಂದರೆ ಗೀತಾ ನನ್ನ ಪತ್ನಿ. ಅವರು ಸದಾ ನನಗೆ ಬೆನ್ನೆಲುಬಾಗಿ ನಿಂತವರು. ಅವರಿಗೆ ರಾಜಕೀಯಕ್ಕೆ ಹೋಗಬೇಕು ಎನ್ನುವ ಆಸೆ ಇತ್ತು, ಅದಕ್ಕೆ ನಾನು ಸಪೋರ್ಟ್​ ಮಾಡಿದ್ದೇನೆ ಅಷ್ಟೇ. ಅವರು ಇದನ್ನೂ ಮಾಡಬಹುದು ಎಂದು ನಾನು ಸಪೋರ್ಟ್​ ಮಾಡಿದ್ದೇನೆ ಅಷ್ಟೇ ಎಂದಿದ್ದಾರೆ. ನಾಳೆ ಅವರು ಬೇರೆ ಪಾರ್ಟಿಗೆ ಹೋದರೂ ನೀವು ಸಪೋರ್ಟ್​ ಮಾಡುವಿರಾ ಎನ್ನುವ ಪ್ರಶ್ನೆಗೆ, ಶಿವಣ್ಣ ಅವರು ಹೌದು, ಅಷ್ಟೆನೇ.. ನಾನು ಯಾವ ಪಕ್ಷಕ್ಕೆ ಹೋದರೂ ಸಪೋರ್ಟ್​ ಮಾಡುತ್ತೇನೆ ಅಷ್ಟೇ ಎಂದಿದ್ದಾರೆ. 

'ಅದು ನನ್ನ ಪಾಲಿಟಿಕಲ್​ ಪ್ರಿಫರೆನ್ಸ್​ ಅಲ್ಲ. ರಾಜಕೀಯ ನನಗೆ ಬೇಡ ಸ್ವಾಮಿ, ಅದು ನನಗಲ್ಲ. ನನ್ನ ಅಪ್ಪಾಜಿಯವರು ಯಾವತ್ತೂ ರಾಜಕೀಯವನ್ನು ಹೇಟ್​ ಮಾಡುತ್ತಿರಲಿಲ್ಲ. ನಾನೂ ಅಷ್ಟೇ. ಆದರೆ ರಾಜಕೀಯ ನನಗೂ ಬೇಡ' ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ. ಇನ್ನು ಗೀತಾ ಶಿವರಾಜ್​ ಕುಮಾರ್​ ಅವರ ರಾಜಕೀಯದ ವಿಷಯಕ್ಕೆ ಬರುವುದಾದರೆ, ಇವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಇವರ ಪರವಾಗಿ ಸ್ಯಾಂಡಲ್ ವುಡ್ ನ ಅನೇಕ ನಟ ನಟಿಯರು ಪ್ರಚಾರ ಮಾಡಿದ್ದರು. ಆದರೆ ಇವರು ಬಿಜೆಪಿಯ ಪ್ರತಿಸ್ಪರ್ಧಿ ಬಿ.ವೈ ರಾಘವೇಂದ್ರ ಎದುರು ಸೋಲು ಕಂಡರು. 2 ಲಕ್ಷದ 43 ಸಾವಿರದ 715 ಮತಗಳಿಂದ ಗೀತಾ  ಪರಾಭವಗೊಂಡರು. 

ಪತ್ನಿ- ಮಗ ದೂರದಲ್ಲಿ ವಾಸಿಸ್ತಿರೋದಕ್ಕೆ ಕಾರಣ... ಮೊದಲ ಬಾರಿ ಮೌನ ಮುರಿದ ನಟ ವಿನೋದ್ ರಾಜ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?