ಪತಿ ರಾಜ್‌ ಕುಂದ್ರಾ ಜೈಲಲ್ಲಿ, ಕೂಲ್ ಆಗಿರಿ ಎಂದ ಪತ್ನಿ ಶಿಲ್ಪಾ ಪ್ರಾಣಯಾಮ ವಿಡಿಯೋ ವೈರಲ್!

Suvarna News   | Asianet News
Published : Aug 17, 2021, 12:50 PM IST
ಪತಿ ರಾಜ್‌ ಕುಂದ್ರಾ ಜೈಲಲ್ಲಿ, ಕೂಲ್ ಆಗಿರಿ ಎಂದ ಪತ್ನಿ ಶಿಲ್ಪಾ ಪ್ರಾಣಯಾಮ ವಿಡಿಯೋ ವೈರಲ್!

ಸಾರಾಂಶ

ಕೊರೋನಾ ಹೋರಾಟಕ್ಕೆ ಫಂಡ್‌ ಸಂಗ್ರಹ ಮಾಡುತ್ತಿರುವ ಸ್ಟಾರ್ ನಟ, ನಟಿಯರು. ನಕಾರಾತ್ಮಕ ಆಲೋಚನೆಗಳನ್ನು ನಿಯಂತ್ರಿಸುವುದು ಹೇಗೆ ಎಂದು ಶಿಲ್ಪಾ ಶೆಟ್ಟಿ ಹೇಳಿ ಕೊಟ್ಟಿದ್ದಾರೆ. 

ಅಶ್ಲೀಲ ವಿಡಿಯೋ ದಂಧೆಯಲ್ಲಿ ಬಾಲಿವುಡ್ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಹೆಸರು ಕೇಳಿ ಬಂದಾಗಿನಿಂದಲೂ ಶಿಲ್ಪಾ ಮಾಧ್ಯಮಗಳಿಂದ ದೂರವೇ ಉಳಿದಿದ್ದಾರೆ. ತಮ್ಮ ಮೌನವನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸಮಯದಲ್ಲಿ ಇನ್‌ಸ್ಟಾಗ್ರಾಂ ಮೂಲಕ ತಮ್ಮ ಸ್ಟೇಟ್‌ಮೆಂಟ್ ಬಿಡುಗಡೆ ಮಾಡಿದರು. ಪತಿ ನಡೆಸುತ್ತಿದ್ದ ದಂಧೆಯಿಂದ ಶಿಲ್ಪಾ ಅನೇಕ ಪ್ರಾಜೆಕ್ಟ್‌ಗಳನ್ನು ಕಳೆದುಕೊಂಡಿದ್ದಾರೆ. ಆದರೆ ಈ ನಡುವೆಯೂ ಕೋವಿಡ್‌ ಫಂಡ್‌ ಸಂಗ್ರಹಕ್ಕೆ ಸಹಾಯ ಮಾಡುತ್ತಿದ್ದಾರೆ. 

ಚಿತ್ರಗಳಲ್ಲಿ ನಟಿಸಿದ್ದು ಅಷ್ಟಕ್ಕಷ್ಟೇ, ಆದರೂ ಶಮಿತಾ ಶೆಟ್ಟಿ ಇನ್‌ಕಮ್‌ ಇಷ್ಟಾಗಿದ್ದು ಹೇಗೆ?

ಹೌದು! ಇತ್ತೀಚಿಗೆ ಶಿಲ್ಪಾ ಶೆಟ್ಟಿ ಪ್ರಾಣಾಯಾಮ ಮಾಡುತ್ತಿರುವ ವಿಡಿಯೋ ಹಂಚಿಕೊಂಡು ಉಸಿರಾಡಲು ಆಮ್ಲಜನಕ ಎಷ್ಟು ಮುಖ್ಯ, ನಾವು ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿ ಪ್ರಾಣಾಯಾಮ ಮಾಡಬೇಕು ಎಂದು ತಿಳಿಸಕೊಟ್ಟಿದ್ದಾರೆ. 'ಎಲ್ಲರೂ ಉಸಿರಾಟದ ಮೇಲೆ ಅವಲಂಬಿತರಾಗಿರುವುದರಿಂದಲೇ ನಾವು ಬದುಕುತ್ತಿದ್ದೇವೆ. ಉಸಿರಾಟದ ಮೂಲಕ ನಮ್ಮ ಇಡೀ ದೇಹವನ್ನು ನಾವು ರಕ್ಷಿಸಿಕೊಳ್ಳಬಹುದು. ನೀವು ಮೂಗಿನಲ್ಲಿ ಯಾವುದೇ ಬ್ಲಾಕ್ ಇಲ್ಲವೆಂದರೆ ಉಸಿರು ನೇರವಾಗಿ ನಿಮ್ಮ ಬ್ರೈನ್ ಸೆಲ್‌ ತಲುಪಿ, ನಿಮ್ಮ ಇಮ್ಯೂನಿಟಿ ಹೆಚ್ಚಿಸುತ್ತದೆ. ಈ ಸಮಯದಲ್ಲಿ ನಮಗೆ ನೆಗೆಟಿವ್/ನಕಾರಾತ್ಮಕ ಆಲೋಚನೆಗಳು ಬರುವುದು ಸಾಮಾನ್ಯ. ಇದನ್ನು ನಾವು ಪ್ರಾಣಾಯಾಮದಿಂದ ನಿಯಂತ್ರಣಕ್ಕೆ ತರಬಹುದು. ಹೀಗಾಗಿ ನಾವು ಸದಾ ಪಾಸಿಟಿವ್ ಆಗಿದ್ದರೆ, ನಮ್ಮ ಉಸಿರಾಟದ ರೀತಿಯನ್ನು ಸುಧಾರಿಸಿಕೊಂಡು, ಜೀವಕೋಶಗಳು ಸಕ್ರಿಯವಾಗುವಂತೆ ಮಾಡಿಕೊಳ್ಳಬಹುದು. pranayam has become more important,' ಎಂದು ವಿಡಿಯೋದಲ್ಲಿ ಶಿಲ್ಪಾ ಮಾತನಾಡಿದ್ದಾರೆ. 

ಸ್ವಾತಂತ್ರ್ಯ ದಿನಾಚರಣೆ ಧ್ವಜದ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ವಿ ಫಾರ್ ಇಂಡಿಯಾ: ಸೇವಿಂಗ್ ಲೈವ್ಸ್ ಎನ್ನುವ ಘೋಷಣೆಯೊಂದಿಗೆ ಆಗಸ್ಟ್ 15ರಂದು ಸಂಜೆ 7.30ಕ್ಕೆ ಫೇಸ್‌ಬುಕ್ ಲೈವ್ ಸ್ಟ್ರೀಮ್ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ 25 ಕೋಟಿ ದೇಣಿಗೆಯನ್ನು ಸಂಗ್ರಹಿಸುವುದಾಗಿಯೂ ಹೇಳಿದ್ದರು. ಈ ಕಾರ್ಯಕ್ರಮದಲ್ಲಿ ನಿರ್ಮಾಪಕ ರಾಜ್‌ಕುಮಾರ್ ಹಿರಾನಿ, ಕರಣ್ ಜೋಹಾರ್, ಇಮ್ತಿಯಾಜ್ ಅಲಿ, ಫರಾ ಖಾನ್, ವಿಕ್ರಮಾದಿತ್ಯ, ವಿಕ್ರಮ್ ಭಟ್ ಮತ್ತು ರಿಭು ಸೇರಿದಂತೆ 100ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು.  ತಮ್ಮ ಪತಿಯ ವಿಚಾರದ ಬಗ್ಗೆ ಶಿಲ್ಪಾ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಬದಲಿಗೆ ಕೊರೋನಾದಿಂದ ನಮ್ಮ ದೇಹವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ಹೋರಾಡುತ್ತಿರುವ ಶಿಲ್ಪಾ ನಡೆ ಅಭಿಮಾನಿಗಳಿಗೆ ಇಷ್ಟವಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!