ಯೌವನಕ್ಕಿಂತ ವಯಸ್ಸಾದ್ಮೇಲೆ ಶಿಲ್ಪಾ ಶೆಟ್ಟಿ ಸುಂದ್ರಿಯಾಗಲು ಕಾರಣ ಕೊನೆಗೂ ರಿವೀಲ್​!

Published : May 01, 2025, 10:50 PM ISTUpdated : May 02, 2025, 09:53 AM IST
ಯೌವನಕ್ಕಿಂತ ವಯಸ್ಸಾದ್ಮೇಲೆ ಶಿಲ್ಪಾ ಶೆಟ್ಟಿ ಸುಂದ್ರಿಯಾಗಲು ಕಾರಣ ಕೊನೆಗೂ ರಿವೀಲ್​!

ಸಾರಾಂಶ

ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್ ಕುಂದ್ರಾ ಅಶ್ಲೀಲ ಚಿತ್ರ ಮತ್ತು ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿದ್ದಾರೆ. ಇಡಿ ದಾಳಿ ನಡೆಸಿದ್ದು, ರಾಜ್ ಕುಂದ್ರಾ ಶಿಲ್ಪಾ ಅವರ ಭಾಗ್ಯವಿಲ್ಲ ಎಂದಿದ್ದಾರೆ. ೪೯ರ ಹರೆಯದ ಶಿಲ್ಪಾ ಸೌಂದರ್ಯದ ಗುಟ್ಟು ಪ್ಲಾಸ್ಟಿಕ್ ಸರ್ಜರಿ ಎನ್ನಲಾಗಿದೆ. ಚಿತ್ರರಂಗದ ಆರಂಭದಲ್ಲಿ ಅವರ ನೋಟಕ್ಕೆ ಅವಕಾಶಗಳು ಕಡಿಮೆಯಿದ್ದವು ಎಂದು ಶಿಲ್ಪಾ ತಿಳಿಸಿದ್ದಾರೆ.

ಸದ್ಯ ಬಾಲಿವುಡ್​ ಬ್ಯೂಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ  ಉದ್ಯಮಿ ರಾಜ್ ಕುಂದ್ರಾ ನೀಲಿ ಚಿತ್ರದ ಮತ್ತು ಅಕ್ರಮ ಹಣ ವರ್ಗಾವಣೆ ಕೇಸ್​ನಲ್ಲಿ ಸಿಲುಕಿದ್ದಾರೆ. ಅಶ್ಲೀಲ ಸಿನಿಮಾ ನಿರ್ಮಾಣ ಮತ್ತು ಹಂಚಿಕೆ ಪ್ರಕರಣ ಎದುರಿಸುತ್ತಿರುವ ಈ ದಂಪತಿ  ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಈಚೆಗಷ್ಟೇ ದಾಳಿ ಮಾಡಿದೆ.  ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಹಾಗೂ ಇನ್ನೂ ಕೆಲವರ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದೆ. ಇದೀಗ ಈ ಪ್ರಕರಣ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿರುವುದಕ್ಕೆ ಕಾರಣ ರಾಜ್‌ ಕುಂದ್ರಾ ಅವರು ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಎನ್ನುವ ಕಾರಣಕ್ಕೆ. ಈ ಹಿಂದೆ ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಹೆಸರು ಕೂಡ ಕೇಳಿ ಬಂದಿತ್ತು. ಇದೇ ಕಾರಣಕ್ಕೆ ಈಗಲೂ ಶಿಲ್ಪಾಗೂ ಇದಕ್ಕೂ ಲಿಂಕ್‌ ಇದೆ ಎಂದೇ ಹೇಳಲಾಗುತ್ತಿದೆ. ಇದರಲ್ಲಿ ತಮ್ಮ ಪತ್ನಿಯ ತಪ್ಪಿಲ್ಲ ಎಂದು ರಾಜ್‌ ಕುಂದ್ರಾ ಪದೇ ಪದೇ ಹೇಳುತ್ತಿದ್ದರೂ, ದಂಪತಿ ಸದ್ಯ ಆತಂಕದಲ್ಲಿದ್ದಾರೆ.  ದಯವಿಟ್ಟು ಇದಕ್ಕೂ, ಶಿಲ್ಪಾಗೂ ಲಿಂಕ್‌ ಮಾಡಬೇಡಿ. ಇದರಲ್ಲಿ ಆಕೆಯ ಪಾತ್ರ ಏನೂ ಇಲ್ಲ. ಎಲ್ಲವನ್ನೂ ನ್ಯಾಯಾಲಯದ ನಿರ್ಧರಿಸುತ್ತದೆ. ಇದಾಗಲೇ ಸೂಕ್ತ ಸಾಕ್ಷ್ಯಾಧಾರಗಳನ್ನು, ದಾಖಲೆಗಳನ್ನು ನೀಡಿದ್ದೇನೆ. ಈ ಪ್ರಕರಣದಲ್ಲಿ ನನ್ನ ಪಾತ್ರವೂ ಇಲ್ಲ ಎನ್ನುವುದು ಸಾಬೀತಾಗುತ್ತದೆ. ದಯವಿಟ್ಟು ಶಿಲ್ಪಾ ಶೆಟ್ಟಿಯ ಮಾನ ಹರಾಜು ಹಾಕಬೇಡಿ ಎಂದು ರಾಜ ಕುಂದ್ರ ಕಣ್ಣೀರು ಹಾಕುತ್ತಲೇ ಇದ್ದಾರೆ. 

ಅದೇನೇ ಇರಲಿ, ಇದೀಗ ಶಿಲ್ಪಾಗೆ 49 ವರ್ಷ ವಯಸ್ಸು. ಆದರೆ, ಈ ವಯಸ್ಸಿನಲ್ಲಿಯೂ ಶಿಲ್ಪಾ ಫಿಟ್​ ಆಗಿರಲು ಕಾರಣ, ಯೋಗ ಎನ್ನುವುದು ಬಹುತೇಕ ಎಲ್ಲರಿಗೂ ತಿಳಿದದ್ದೇ. ಆದರೆ ನಟಿ, ಯೌವನದಲ್ಲಿಯೂ ಯೋಗ ಮಾಡ್ತಿದ್ದರು. ಆದರೆ ಬಹುತೇಕ ಎಲ್ಲರೂ ಯೌವನದಲ್ಲಿ ಸುಂದರವಾಗಿದ್ದು, ವಯಸ್ಸಾದಂತೆಯೇ ಸೌಂದರ್ಯ ಕಳೆದುಕೊಳ್ತಾರೆ. ಆದರೆ ಶಿಲ್ಪಾ ಶೆಟ್ಟಿ ಸೇರಿದಂತೆ ಹಲವು ನಟಿಯರು ವಯಸ್ಸಾಗುತ್ತಿದ್ದಂತೆಯೇ ಸ್ಮಾರ್ಟ್​ ಆಗ್ತಾರೆ. ಇದಕ್ಕೆ ಕಾರಣ ಇದೀಗ ರಿವೀಲ್​ ಆಗಿದೆ. ಶಿಲ್ಪಾ ಶೆಟ್ಟಿ ವಿಷಯಕ್ಕೆ ಬರುವುದಾದರೆ, ಇವರ ಸೌಂದರ್ಯದ ಗುಟ್ಟು ಪ್ಲಾಸ್ಟಿಕ್​ ಸರ್ಜರಿ. ಹೌದು. ನಟಿ ಶಿಲ್ಪಾ ಶೆಟ್ಟಿ, ಮೂಗಿನ ಸರ್ಜರಿ ಮಾಡಿಸಿಕೊಂಡಿದ್ದಾರೆ. ಇದರಿಂದಲಾಗಲೇ ಇವರ ಸೌಂದರ್ಯ ಹೆಚ್ಚಾಗಿದೆ. ಇದೇ ರೀತಿ ಬಹುತೇಕ ನಟಿಯರದ್ದು ಕೂಡ. ಪ್ಲಾಸ್ಟಿಕ್​ ಸರ್ಜರಿಯೇ ಶಿಲ್ಪಾ ಶೆಟ್ಟಿ ಬ್ಯೂಟಿ ಗುಟ್ಟು. 

ಪತಿಯ ಫೋಟೋ ನೋಡನೋಡುತ್ತಲೇ ಬೆಚ್ಚಿ ಬಿದ್ದ ಶಿಲ್ಪಾ ಶೆಟ್ಟಿ! ಎಲ್ಲಾ ನೀಲಿ ಚಿತ್ರದ ಮಹಿಮೆ ಎನ್ನೋದಾ ನೆಟ್ಟಿಗರು?

ಅಂದಹಾಗೆ, ಶಿಲ್ಪಾ ಶೆಟ್ಟಿ 1993 ರಲ್ಲಿ 'ಬಾಜಿಗರ್' ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು.  ಅದೇ ವರ್ಷ ‘ಮೇ ಕಿಲಾಡಿ ತೂ ಅನಾಡಿ’ ಸಿನಿಮಾ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಹಿಟ್ ಆಯಿತು.  ಬಾಲಿವುಡ್​ನಲ್ಲಿ ಅವರಿಗೆ ಅದಾಗಲೇ ಕೆಲವು ಸಿನಿಮಾಗಳಿಗೆ ಆಫರ್​ ಸಿಕ್ಕಿತು. ಬಳಿಕ ತಮಿಳಿನ ಖುಷಿಯ ಮಿಸ್ಟರ್ ರೋಮಿಯೋ ಚಿತ್ರದಲ್ಲಿನ 'ಮಕೋರಿನಾ' ಹಾಡಿಗೆ ಸ್ಟೆಪ್​ ಹಾಕಿದ ನಟಿ, ಅಲ್ಲಿಯೂ ಫೇಮಸ್​ ಆದರು.  

ಆದರೆ, ಅವರು ನಟನೆ ಚೆನ್ನಾಗಿ ಮಾಡಿದರೂ, ಅವರು ಅಷ್ಟು ಫೇಮಸ್​ ಆಗದೇ ಇರಲು ಕಾರಣ,  ಅವರ ಬಣ್ಣ ಮತ್ತು ನೋಟ.  ಇದನ್ನು ಸ್ವತಃ ಶಿಲ್ಪಾ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದು ಇದೆ.  ಅವರು ತಮ್ಮ ಲುಕ್​ನಿಂದಾಗಿ ಹಲವಾರು ಸಲ ರಿಜೆಕ್ಟ್ ಆಗಿದ್ದರು.ಶಿಲ್ಪಾಶೆಟ್ಟಿ ಚಿತ್ರರಂಗಕ್ಕೆ ಕಾಲಿಟ್ಟಾಗ ಸಂಪೂರ್ಣವಾಗಿ ವಿಭಿನ್ನವಾಗಿ ಕಾಣಿಸುತ್ತಿದ್ದರು. ಆದರೆ ನೀವು ಈಗ ಅವರನ್ನು ನೋಡಿದರೆ, ಅವರು ವಯಸ್ಸಾಗುತ್ತಿದ್ದಂತೆಯೇ ಕ್ಯೂಟ್​ ಆಗುತ್ತಿದ್ದಾರೆ. ಇದಕ್ಕೆ ಕಾರಣ, ಪ್ಲಾಸ್ಟಿಕ್​ ಸರ್ಜರಿ. 

ಅದೃಷ್ಟ ಹುಡುಕಿ ಹೆಸರು ಬದಲಿಸಿಕೊಂಡ ಶಿಲ್ಪಾ ಶೆಟ್ಟಿ, ಅಮಿತಾಭ್​, ಸೈಫ್​ ಅಲಿ, ರಜನೀಕಾಂತ್, ಅಜೆಯ್​ ದೇವಗನ್​!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?