
ಹೈದರಾಬಾದ್(ಅ.12): ನಟ ನಾಗಚೈತನ್ಯ ಮತ್ತು ಸಮಂತಾ ವೈವಾಹಿಕ ಸಂಬಂಧ ಮುರಿದುಕೊಳ್ಳುತ್ತಿರುವುದಾಗಿ ಘೋಷಿಸಿದ ಬೆನ್ನಲ್ಲೇ, ಇದಕ್ಕೆ ಸಮಂತಾ ಕಾರಣ ಎಂಬ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿದ್ದವು. ಇದೀಗ ಇಬ್ಬರ ಸಂಬಂಧ ಮುರಿದುಬೀಳಲು, ಸಮಂತಾರ ಸ್ಟೈಲಿಸ್ಟ್ ಪ್ರೀತಂ ಜುಕಾಲ್ಕರ್ ಎಂಬ ವದಂತಿ ಹಬ್ಬಿದ್ದು, ಅದರ ಬೆನ್ನಲ್ಲೇ ಪ್ರೀತಂಗೆ ಸಾಮಾಜಿಕ ಜಾಲತಾಣಗಳ ಮೂಲಕ ಜೀವ ಬೆದರಿಕೆ ಕರೆ ಬರತೊಡಗಿದೆ.
ನಾಗಚೈತನ್ಯ ಅವರ ಅಭಿಮಾನಿಗಳಿಂದ ಯೂಟ್ಯೂಬ್ ಸೇರಿದಂತೆ ಇನ್ನಿತರ ಜಾಲತಾಣಗಳಲ್ಲಿ ಕೊಲೆ ಬೆದರಿಕೆಗಳು ಬರುತ್ತಿವೆ. ಜತೆಗೆ ತನ್ನನ್ನು ಅವಹೇಳನ ಮಾಡಲಾಗುತ್ತಿದೆ. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ ಎಂದು ಪ್ರೀತಂ ನೋವು ತೋಡಿಕೊಂಡಿದ್ದಾರೆ.
ಡಿಸೈನರ್ ಜೊತೆ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ರಾ ಸಮಂತಾ? ವಿಚ್ಚೇದನೆಗೆ ಇದೇ ಕಾರಣ ?
ಜುಕಾಲ್ಕರ್ ಅವರು ಸಮಂತಾ ಅವರ ಸ್ಟೈಲಿಸ್ಟ್ ಅಷ್ಟೇ ಅಲ್ಲದೆ ಅವರ ಆತ್ಮೀಯ ಗೆಳೆಯ ಸಹ ಹೌದು. ಈ ಹಿನ್ನೆಲೆಯಲ್ಲಿ ಅವರು ಆತ್ಮೀಯವಾಗಿರುವ ಫೋಟೋಗಳಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಈ ಇಬ್ಬರ ಮಧ್ಯೆ ಸಂಬಂಧವಿದೆ ಎಂಬ ಗಾಳಿಸುದ್ದಿಗಳು ಹರಿದಾಡುತ್ತಿವೆ.
ಇನ್ನು ಈ ಬೆಳವಣಿಗೆಗಳ ಬಗ್ಗೆ ಭಾನುವಾರ ಪ್ರತಿಕ್ರಿಯಿಸಿದ ಜುಕಾಲ್ಕರ್ ಅವರು, ‘ನಾಗಚೈತನ್ಯ ಅವರೇ ಈ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ ನನ್ನ ಮತ್ತು ಸಮಂತಾ ಅವರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಗಾಳಿ ಸುದ್ದಿಗಳಿಗೆ ತಿಲಾಂಜಲಿ ಹಾಡಬೇಕು’ ಎಂದರು.
ಮೋಸಗಾರರು ಎಂದಿದ್ದು ಸಮಂತಾಗಲ್ಲ..! ನನ್ ಲೈಫ್ ಬಗ್ಗೆ ನನ್ನ ಮಾತು ಎಂದ ಸಿದ್ಧಾರ್ಥ್
ಸಮಂತಾ ಅವರನ್ನು ನಾನು ಜೀಜಿ(ಸೋದರಿ) ಎಂದು ಕರೆಯುತ್ತೇನೆ. ಅಲ್ಲದೆ ನನಗೆ ಹಲವು ವರ್ಷಗಳಿಂದ ಗೊತ್ತಿರುವ ನಾಗಚೈತನ್ಯ ಅವರಿಗೆ, ನನ್ನ ಮತ್ತು ಸಮಂತಾ ಅವರ ಸಂಬಂಧದ ಬಗ್ಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ನನ್ನ ಮತ್ತು ಸಮಂತಾ ಅವರ ಬಗ್ಗೆ ಟ್ರೋಲ್ ಮತ್ತು ಈ ರೀತಿಯ ಅವಹೇಳನ ಮಾಡಬಾರದು ಎಂದು ನಾಗಚೈತನ್ಯ ಹೇಳಬೇಕು ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.