ದಿನೇಶ್ ಬಾಬು(Dinesh Babu) ನಿರ್ದೇಶನದ ಕಸ್ತೂರಿ ಮಹಲ್(Kasturi Mahal) ಸಿನಿಮಾ ಇದೇ ಸಿನಿ ಶುಕ್ರವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಟೀಸರ್, ಟ್ರೇಲರ್, ಹಾಡುಗಳು ಕಸ್ತೂರಿ ಮಹಲ್ ಬಗೆಗಿನ ಕುತೂಹಲವನ್ನು ಹೆಚ್ಚಿಸಿವೆ. ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ(Shanvi Srivastava) ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು ಅವ್ರ ಪಾತ್ರ ಕೂಡ ಇಂಟ್ರಸ್ಟಿಂಗ್ ಆಗಿದೆ ಅನ್ನೋದು ಜಾಹೀರಾಗಿದೆ.
ದಿನೇಶ್ ಬಾಬು(Dinesh Babu) ನಿರ್ದೇಶನದ ಕಸ್ತೂರಿ ಮಹಲ್(Kasturi Mahal) ಸಿನಿಮಾ ಇದೇ ಸಿನಿ ಶುಕ್ರವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಟೀಸರ್, ಟ್ರೇಲರ್, ಹಾಡುಗಳು ಕಸ್ತೂರಿ ಮಹಲ್ ಬಗೆಗಿನ ಕುತೂಹಲವನ್ನು ಹೆಚ್ಚಿಸಿವೆ. ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ(Shanvi Srivastava) ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು ಅವ್ರ ಪಾತ್ರ ಕೂಡ ಇಂಟ್ರಸ್ಟಿಂಗ್ ಆಗಿದೆ ಅನ್ನೋದು ಜಾಹೀರಾಗಿದೆ. ಸೆಟ್ಟೇರಿದ ದಿನದಿಂದ ಸಾಕಷ್ಟು ಕಾರಣಕ್ಕೆ ಸುದ್ದಿಯಲ್ಲಿದ್ದ ಸಿನಿಮಾ ಇದೀಗ ಬಿಡುಗಡೆಗೆ ರೆಡಿಯಾಗಿದೆ. ಮೇ 13 ಅಂದ್ರೆ ಇದೇ ಸಿನಿ ಶುಕ್ರವಾರ ಪ್ರೇಕ್ಷಕರೆದುರು ಸಿನಿಮಾ ತೆರೆದುಕೊಳ್ಳಲಿದೆ.
Kasturi Mahal: ದೆವ್ವದ ಹಿಂದೆ ಶಾನ್ವಿ ಶ್ರೀವಾತ್ಸವ್: ಚಿತ್ರದ ಪ್ರೋಮೋ ಬಿಡುಗಡೆ
ದಿನೇಶ್ ಬಾಬು ಸಿನಿಮಾ ಎಂದ ಮೇಲೆ ಒಂದಿಷ್ಟು ನಿರೀಕ್ಷೆ ಅದರ ಸುತ್ತ ಹುಟ್ಟಿಕೊಳ್ಳೋದು ಸಹಜ. ಅದಕ್ಕೆ ಕಾರಣ ಅವರು ಚಿತ್ರರಂಗಕ್ಕೆ ನೀಡಿರೋ ಸೂಪರ್ ಹಿಟ್ ಸಿನಿಮಾಗಳು. ಅವರ ಸಿನಿಮಾ ನೋಡಿದವರಿಗೆ, ನಿರ್ದೇಶನದ ತಾಕತ್ತು ಅರಿತವರಿಗೆ ಅವ್ರ ಚಿತ್ರದ ಸ್ಪೆಷಾಲಿಟಿ ಬಗ್ಗೆ ಬಿಡಿಸಿ ಹೇಳಬೇಕಿಲ್ಲ. ಇದೀಗ ಅವ್ರ ಬತ್ತಳಿಕೆಯಿಂದ 50ನೇ ಸಿನಿಮಾ ಕಸ್ತೂರಿ ಮಹಲ್ ಮೂಡಿ ಬಂದಿದೆ. ಕಥೆ, ಚಿತ್ರಕಥೆ, ಸಂಭಾಷಣೆ ಸಮೇತ ನಿರ್ದೇಶನ ಮಾಡಿ ಪ್ರೇಕ್ಷಕರ ಮುಂದೆ ಇದೇ ಶುಕ್ರವಾರ ತರ್ತಿದ್ದಾರೆ.
Baang Teaser: ಗ್ಯಾಂಗ್‌ಸ್ಟರ್ ಲುಕ್‌ನಲ್ಲಿ ಶಾನ್ವಿ ಶ್ರೀವಾಸ್ತವ್-ರಘು ದೀಕ್ಷಿತ್
ಕಸ್ತೂರಿ ಮಹಲ್ ಪ್ಯಾರಾನಾರ್ಮಲ್ ಹಾರಾರ್, ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡಿದ್ದು, ಭಾವನಾತ್ಮಕವಾಗಿಯೂ ಸೆಳೆಯುವಂತ ಅಂಶಗಳು ಸಿನಿಮಾದಲ್ಲಿದೆ. ಪ್ರೇಕ್ಷಕರನ್ನು ಹಿಡಿದಿಡುವಂತ, ಕ್ಷಣ ಕ್ಷಣಕ್ಕೂ ಥ್ರಿಲ್ ನೀಡುವ ಚಿತ್ರಕಥೆ ಚಿತ್ರದಲ್ಲಿದೆ. ಪಿಕೆಹೆಚ್ ದಾಸ್ ಚಿತ್ರಕ್ಕೆ ಕ್ಯಾಮೆರಾ ನಿರ್ದೇಶನ ಮಾಡಿದ್ದು, ರಮೇಶ್ ಕೃಷ್ಣ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಶ್ರುತಿ ಪ್ರಕಾಶ್, ಸ್ಕಂದ ಅಶೋಕ್, ರಂಗಾಯಣ ರಘು, ಕಾಶಿಮಾ, ಕೆಂಪೇಗೌಡ ಸೇರಿದಂತೆ ಹಲವರ ತಾರಾಬಳಗ ಚಿತ್ರದಲ್ಲಿದೆ. ಶ್ರೀ ಭವಾನಿ ಆರ್ಟ್ಸ್ ಬ್ಯಾನರ್ ನಡಿ ರವೀಶ್ ಆರ್ ಸಿ ಚಿತ್ರವನ್ನು ನಿರ್ಮಿಸಿದ್ದಾರೆ.