ಪಠಾಣ್ ಸಿನಿಮಾದಲ್ಲಿ ಶರ್ಟ್ ಲೆಸ್ ಆಗಿ ಕಾಣಿಸಿಕೊಂಡಿರುವ ಶಾರುಖ್ ಬೇರ್ ಬಾಡಿ ನೋಡಿ ಅಭಿಮಾನಿಗಳ ಫಿದಾ ಆಗಿದ್ದಾರೆ. 8 ಪ್ಯಾಕ್ ನಲ್ಲಿ ಮಿಂಚಿರುವ ಶಾರುಖ್ ನೋಡಿ ಅಭಿಮಾನಿಗಳು ಬೆರಗಾದಿದ್ದಾರೆ.
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್(Shah Rukh Khan) ಬಹುನಿರೀಕ್ಷೆಯ ಪಠಾಣ್(Pathaan) ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ವರ್ಷಗಳ ಬಳಿಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿರುವ ಶಾರುಖ್ ಸದ್ಯ ಪಠಾಣ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಸದ್ಯ ಸ್ಪೇನ್ ನಲ್ಲಿ ನಡೆಯುತ್ತಿದೆ. ಶಾರುಖ್ ಫೋಟೋಗಳು ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಶರ್ಟ್ ಲೆಸ್ ಆಗಿ ಕಾಣಿಸಿಕೊಂಡಿರುವ ಶಾರುಖ್ ಬೇರ್ ಬಾಡಿ ನೋಡಿ ಅಭಿಮಾನಿಗಳ ಫಿದಾ ಆಗಿದ್ದಾರೆ. 8 ಪ್ಯಾಕ್(Eight pack abs)ನಲ್ಲಿ ಮಿಂಚಿರುವ ಶಾರುಖ್ ನೋಡಿ ಅಭಿಮಾನಿಗಳು ಬೆರಗಾದಿದ್ದಾರೆ. ಈ ವಯಸ್ಸಿನಲ್ಲೂ ಫಿಟ್ ಆಗಿ ಕಾಣಿಸಿಕೊಂಡಿರುವ ಶಾರುಖ್ ಯುವಕರು ಅಚ್ಚರಿ ಪಡುವಂತೆ ಮಾಡಿದ್ದಾರೆ. ಗಂಭೀರ ನೋಟ ಬೀರುತ್ತಾ 8 ಪ್ಯಾಕ್ ನಲ್ಲಿ ಕಾಣಿಸಿಕೊಂಡಿರುವ ಶಾರುಖ್ ಕಾರ್ಗೋ ಪ್ಯಾಂಟ್ ಧರಿಸಿದ್ದಾರೆ ಮತ್ತು ಉದ್ದ ಕೂದಲು ಬಿಟ್ಟಿದ್ದಾರೆ. ಈ ಫೋಟೋ ಪಠಾಣ್ ಸಿನಿಮಾದ ಕಿಂಗ್ ಖಾನ್ ಗೆಟಪ್ ಎನ್ನುವುದು ಅಭಿಮಾನಿಗಳಿಗೆ ಗೊತ್ತಾಗಿದೆ.
undefined
ಶಾರುಖ್ ಖಾನ್ ಟ್ರಾನ್ಸ್ ಫರ್ಮೇಶನ್(Body transformation) ನೋಡಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿಯ ಕಾಮೆಂಟ್ ಮಾಡುತ್ತಿದ್ದಾರೆ. ಈ ಫೋಟೋ ಲೀಕ್ ಆಗುತ್ತಿದ್ದಂತೆ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ನೆಚ್ಚಿನ ನಟನನ್ನು ಹೊಸ ಅವತಾರದಲ್ಲಿ ನೋಡಿ ಆನಂದಿಸುತ್ತಿದ್ದಾರೆ.
ಶಾರುಖ್ ಬುಟ್ಟಿಗೆ ಇನ್ನೊಂದು ಸಿನಿಮಾ; ಆಶಿಕ್ ಅಬು ಅವರ ಥ್ರಿಲ್ಲರ್‌ನಲ್ಲಿ ನಟ!
ಈ ಚಿತ್ರಕ್ಕಾಗಿ ಶಾರುಖ್ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದಾರೆ. ದೇಹವನ್ನು ಹೇಗೆ ಹುರಿಗೊಳಿಸಿಕೊಂಡಿದ್ದಾರೆ ಎನ್ನುವ ವಿಡಿಯೋವನ್ನು ಮಾಡಿದ್ದಾರಂತೆ. ಶಾರುಖ್ 8ಪ್ಯಾಕ್ ಮಾಡಿಕೊಂಡ ವಿಡಿಯೊ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಅಂದಹಾಗೆ ಪಠಾಣ್ ಸಿನಿಮಾದ ಅನೇಕ ಫೋಟೋಗಳು ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ(deepika padukone) ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜಾನ್ ಅಬ್ರಾಹಂ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಸ್ಪೇನ್ ನಲ್ಲಿರುವ ಸಿನಿಮಾತಂಡ ಚಿತ್ರದ ಹಾಡಿನ ದೃಶ್ಯ ಸೆರೆಹಿಡಿಯುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಜೊತೆಗೆ ಅತೀ ದೊಡ್ಡ ಆಕ್ಷನ್ ದೃಶ್ಯ ಸೆರೆಹಿಡಿಯುವ ತಯಾರಿ ನಡೆಯುತ್ತಿದೆ ಎನ್ನಲಾಗುತ್ತಿದೆ.
ಪಠಾಣ್ ಚಿತ್ರಕ್ಕೆ ಸಿದ್ಧಾರ್ಥ್ ಆನಂದ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಯಶ್ ರಾಜ್ ನಿರ್ಮಾಣದಲ್ಲಿ ಸಿನಿಮಾ ಮೂಡಿಬರುತ್ತಿದೆ. ಬಹುನಿರೀಕ್ಷೆಯ ಸಿನಿಮಾ ಮುಂದಿನ ವರ್ಷ ಜನವರಿಯಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಅಂದಹಾಗೆ ಶಾರುಖ್ ಖಾನ್ ಸಿನಿಮಾ ಬಿಡುಗಡೆಯಾಗದೆ ನಾಲ್ಕೈದು ವರ್ಷಗಳಾಗಿವೆ. ಕಿಂಗ್ ಖಾನ್ ಕೊನೆಯದಾಗಿ ಝೀರೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ ಬಣ್ಣ ಹಚ್ಚುವುದನ್ನೇ ಬಿಟ್ಟಿದ್ದರು. ಇದೀಗ ಮತ್ತೆ ಅಭಿಮಾನಿಗಳ ಮುಂದೆ ಬರಲು ತಯಾರಾಗಿರುವ ಶಾರುಖ್ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುವ ಸುಳಿವು ನೀಡಿದ್ದಾರೆ.
ಮೊದಲ ಬಾರಿ ತಾಪ್ಸಿ ಜೊತೆ ತೆರೆ ಹಂಚಿಕೊಳ್ಳೋ ಶಾರುಖ್; ಏಪ್ರಿಲ್‌ನಲ್ಲಿ ಶೂಟಿಂಗ್
ಶಾರುಖ್ ಸಿನಿಮಾ ಜೊತೆಗೆ ಒಟಿಟಿ ಜಗತ್ತಿಗೂ ಕಾಲಿಟ್ಟಿದ್ದಾರೆ. ನಟನೆ, ನಿರ್ಮಾಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಶಾರುಖ್ ತನ್ನದೆ ಆದ ಹೊಸ ಒಟಿಟಿ ಪ್ರಾರಂಭ ಮಾಡುತ್ತಿದ್ದಾರೆ. ಈ ಬಗ್ಗೆ ಶಾರುಖ್ ಈಗಾಗಲೇ ಬಹಿರಂಗ ಪಡಿಸಿದ್ದಾರೆ. ಹೊಸ ಒಟಿಟಿ SRK Plus ಸದ್ಯದಲ್ಲೇ ಬರಲಿದೆ ಎಂದು ಘೋಷಿಸಿದ್ದಾರೆ. ಈ ಮೂಲಕ ಒಟಿಟಿ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ನಿರೀಕ್ಷೆ ಮೂಡಿಸಿದ್ದಾರೆ.