James Franco About Sex Addiction: ಸೆಕ್ಸ್ ಪವರ್‌ಫುಲ್ ಡ್ರಗ್, ನನ್ನ ವಿದ್ಯಾರ್ಥಿಗಳ ಜೊತೆಗೂ ಮಲಗಿದ್ದೆ ಎಂದ ನಟ

Published : Dec 23, 2021, 05:24 PM ISTUpdated : Dec 23, 2021, 05:51 PM IST
James Franco About Sex Addiction: ಸೆಕ್ಸ್ ಪವರ್‌ಫುಲ್ ಡ್ರಗ್, ನನ್ನ ವಿದ್ಯಾರ್ಥಿಗಳ ಜೊತೆಗೂ ಮಲಗಿದ್ದೆ ಎಂದ ನಟ

ಸಾರಾಂಶ

ಸೆಕ್ಸ್ ಎನ್ನುವುದು ಅತ್ಯಂತ ಪವರ್‌ಫುಲ್ ಡ್ರಗ್ಸ್ ಎಂದ ನಟ ವಿದ್ಯಾರ್ಥಿಗಳ ಜೊತೆಗೂ ಮಲಗಿದ್ದೆ ಎಂದ James Franco

ಆಸ್ಕರ್-ನಾಮನಿರ್ದೇಶಿತ ಹಾಲಿವುಡ್(Hollywood) ಖ್ಯಾತ ನಟ ಜೇಮ್ಸ್ ಫ್ರಾಂಕೋ ಅವರು ಈ ಹಿಂದೆ ನಡೆಸುತ್ತಿದ್ದ ನಟನಾ ಶಾಲೆಯ ವಿದ್ಯಾರ್ಥಿಗಳೊಂದಿಗೆ ಹಾಸಿಗೆ ಹಂಚಿಕೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ. ಅವರು ಸೆಕ್ಸ್ ಎಡಿಕ್ಷನ್‌ಗೆ(Sex Addiction) ಒಳಗಾಗಿ ಹೋರಾಡುತ್ತಿದ್ದಾರೆ . ಇತ್ತೀಚಿನ ವರ್ಷಗಳಲ್ಲಿ ಅವರ ನಡವಳಿಕೆಯನ್ನು ಸುಧಾರಿಸಲು ಕೆಲಸ ಮಾಡುತ್ತಿದ್ದಾರೆ ಎಂದು ನಟ ಇತ್ತೀಚೆಗೆ ರಿವೀಲ್ ಮಾಡಿದ್ದಾರೆ. ದಿ ಜೆಸ್ ಕಾಗಲ್ ಪಾಡ್‌ಕ್ಯಾಸ್ಟ್‌ನ ಆಯ್ದ ಭಾಗಗಳಲ್ಲಿ, 43 ವರ್ಷದ ಫ್ರಾಂಕೊ ಅವರು ಕಲಿಸುವಾಗ, ಅವರು ವಿದ್ಯಾರ್ಥಿಗಳೊಂದಿಗೆ ಮಲಗಿದ್ದರು. ಅದು ನಿಜಕ್ಕೂ ತಪ್ಪು ಎಂದು ಹೇಳಿದ್ದಾರೆ. ಲೈಂಗಿಕ ಉದ್ದೇಶಕ್ಕಾಗಿ ಮಹಿಳೆಯರನ್ನು ಸೆಳೆಯಲು ನಟನಾ ಶಾಲೆಯನ್ನು ಪ್ರಾರಂಭಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆ ಸಮಯದಲ್ಲಿ ನನ್ನ ಆಲೋಚನೆಯು ಒಪ್ಪಿಗೆಯಾಗಿದ್ದರೆ ಸರಿ ಎಂದು ಅವರು SiriusXM ಪಾಡ್‌ಕ್ಯಾಸ್ಟ್‌ನಲ್ಲಿ ಸೇರಿಸಿದ್ದಾರೆ. ಸುಮಾರು ನಾಲ್ಕು ವರ್ಷಗಳ ಹಿಂದೆ ಲಾಸ್ ಏಂಜಲೀಸ್ ಟೈಮ್ಸ್ ಐದು ಮಹಿಳೆಯರು ಫ್ರಾಂಕೋ ಅವರ ವಿರುದ್ಧ ಅನುಚಿತ ವರ್ತನೆಯ ಆರೋಪವನ್ನು ಮಾಡಿದ್ದರು. ಅದು ಭಾರೀ ಸುದ್ದಿಯಾಗಿತ್ತು. ಅಕ್ಟೋಬರ್ 2019 ರಲ್ಲಿ, ಇಬ್ಬರು ಮಹಿಳೆಯರು ಪೈನಾಪಲ್ ಎಕ್ಸ್‌ಪ್ರೆಸ್ ನಟನ ವಿರುದ್ಧ ಸಿವಿಲ್ ಮೊಕದ್ದಮೆ ಹೂಡಿದರು. ಅವರು ಈಗ ಕಾರ್ಯನಿರ್ವಹಿಸದ ಶಾಲೆಯಲ್ಲಿ ಮಹತ್ವಾಕಾಂಕ್ಷಿ ನಟರನ್ನು ಬಳಸಿಕೊಳ್ಳುತ್ತಿದ್ದಾರೆ. ಯುವತಿಯರನ್ನು ಸುಸ್ಪಷ್ಟ ಲೈಂಗಿಕ ದೃಶ್ಯಗಳನ್ನು ಚಿತ್ರೀಕರಿಸಲು ಬಳಸಿ ವಂಚಿಸಿದ್ದಾರೆ ಎಂದು ಆರೋಪಿಸಿದ್ದರು.

ಹಾಲಿವುಡ್ ಕಾಮುಕನಿಂದ ಐಶ್ವರ್ಯ ರೈಯನ್ನು ಬಚಾವ್ ಮಾಡಿದ್ದ ಕೃಷ್ಣ ಸುಂದರಿ

ಫ್ರಾಂಕೊ ಅವರು ಚಿಕ್ಕ ವಯಸ್ಸಿನಲ್ಲೇ ಆಲ್ಕೋಹಾಲ್ ಚಟದಿಂದ ಶಾಂತವಾದ ನಂತರ ಲೈಂಗಿಕ ವ್ಯಸನವನ್ನು ಬೆಳೆಸಿಕೊಂಡರು ಎಂದು ಹೇಳಿದ್ದಾರೆ. ಇದು ತುಂಬಾ ಶಕ್ತಿಯುತ ಡ್ರಗ್ಸ್ ಎಂದು ಅವರು ಸೆಕ್ಸ್ ಬಗ್ಗೆ ಹೇಳಿದ್ದಾರೆ. ನಾನು ಇನ್ನೂ 20 ವರ್ಷಗಳ ಕಾಲ ಅದರಲ್ಲಿ ಸಿಕ್ಕಿಕೊಂಡಿರುತ್ತೇನೆ. ಅದರ ಕಪಟ ಭಾಗವೆಂದರೆ ನಾನು ಆ ಸಮಯದಲ್ಲಿ ಆಲ್ಕೋಹಾಲ್ನಿಂದ ಮುಕ್ತನಾಗಿದ್ದೆನಷ್ಟೆ.

ಫ್ರಾಂಕೊ 2011 ರಲ್ಲಿ ಆಸ್ಕರ್ ಸಮಾರಂಭವನ್ನು ಸಹ-ಹೋಸ್ಟ್ ಮಾಡಿದರು. 127 ಅವರ್ಸ್ ನಲ್ಲಿನ ಅವರ ಅಭಿನಯಕ್ಕಾಗಿ 2012 ರ ಪ್ರಶಸ್ತಿಗಳಲ್ಲಿ ನಾಮನಿರ್ದೇಶಿತರಾಗಿದ್ದರು. ಲಾಸ್ ಏಂಜಲೀಸ್ ಸುಪೀರಿಯರ್ ಕೋರ್ಟ್‌ನಲ್ಲಿ ಸಲ್ಲಿಸಿದ ದಾಖಲೆಗಳ ಪ್ರಕಾರ, 2019 ರ ಸಿವಿಲ್ ಮೊಕದ್ದಮೆಯನ್ನು ಇತ್ಯರ್ಥಗೊಳಿಸಲು 2.2 ಮಿಲಿಯನ್ ಡಾಲರ್ ಪಾವತಿಸಲು ನಟ ಒಪ್ಪಿಕೊಂಡಿದ್ದರು.

ಪಾಡ್‌ಕ್ಯಾಸ್ಟ್ ಸಂದರ್ಶನದಲ್ಲಿ, ಫ್ರಾಂಕೊ ಅವರು 2016 ರಿಂದ ಲೈಂಗಿಕ ವ್ಯಸನದಿಂದ ಚೇತರಿಸಿಕೊಂಡಿದ್ದಾರೆ. ಅವರ ವಿರುದ್ಧದ ಆರೋಪಗಳ ನಂತರ ತಾನು ಯಾರೆಂಬುದನ್ನು ಬದಲಾಯಿಸುತ್ತಿದ್ದೇನೆ. ಈ ನಿಟ್ಟಿನಲ್ಲಿ ಬಹಳಷ್ಟು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ನಾನು ಜನರನ್ನು ನೋಯಿಸಲು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ನನಗೂ ಲೈಂಗಿಕ ಕಿರುಕುಳ ನೀಡಲಾಗಿತ್ತು: ಇರ್ಫಾನ್ ಖಾನ್

ಚಿತ್ರರಂಗಕ್ಕೆ ಸಂಬಂಧಿಸಿ ಸೆಕ್ಸ್ ಆರೋಪಗಳು ಇದೇ ಮೊದಲಲ್ಲ. ಪ್ರಾದೇಶಿಕ ಸಿನಿಮಾಗಳಿಂದ ತೊಡಗಿ ಜಾಗತಿಕ ಮಟ್ಟದಲ್ಲಿಯೂ ಪ್ರಸಿದ್ಧ ನಟರ ವಿರುದ್ಧ ಸೆಕ್ಸ್ ಆರೋಪಗಳು ಈ ಹಿಂದೆಯೂ ಕೇಳಿ ಬಂದಿದೆ. ಲೈಂಗಿಕ ದೌರ್ಜನ್ಯ, ಕಾಸ್ಟಿಂಗ್ ಕೌಚ್ ನಾವು ಕೇಳುತ್ತಲೇ ಬಂದಿರುವ ಬಹಳಷ್ಟು ಕಾಮನ್ ಪದಗಳು.

ಹಾರ್ವೆ ವಿನ್‌ಸ್ಟೀನ್

ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಪ್ರಕರಣದ ಮೇಲೆ ಜೈಲು ಪಾಲಾದ ಆಸ್ಕರ್ ಪ್ರಶಸ್ತಿ ವಿಜೇತ ಖ್ಯಾತ ನಿರ್ದೇಶಕ ಹಾರ್ವಿ ವೀನ್‌ಸ್ಟೀನ್‌ಗೆ ಆರೋಗ್ಯ ತಪಾಸಣೆ ಮಾಡಲಾಗಿತ್ತು. ಈತನಿಗೆ ಕೊರೋನಾ ಪಾಸಿಟಿವ್ ಬಂದಾಗ ಮತ್ತೊಮ್ಮೆ ಪ್ರಕರಣ ಸುದ್ದಿಯಾಗಿತ್ತು. ಹಾಲಿವುಡ್‌ನ ಪ್ರಸಿದ್ಧ ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಈತನ ಮೇಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?